KBC 13: ‘ಕರೋಡ್​ಪತಿ’ ಶೋನಲ್ಲಿ 3.4 ಲಕ್ಷ ರೂ. ಗೆದ್ದ ಸ್ಪರ್ಧಿ ವಿರುದ್ಧ ಬಿತ್ತು ಕೇಸ್​; ಮಾಡಿದ ತಪ್ಪೇನು?

Kaun Banega Crorepati 13: ಮುಂದಿನ 3 ವರ್ಷಗಳ ಕಾಲ ತಮ್ಮ ಸಂಬಳ ಹೆಚ್ಚಳ ಆಗದಂತೆ ತಡೆ ಹಿಡಿಯಲಾಗಿದೆ ಎಂದು ಸ್ವತಃ ದೇಶ್​ ಬಂಧು ಪಾಂಡೆ ಅವರು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಈ ಕ್ರಮವನ್ನು ಕೆಲವರು ಖಂಡಿಸಿದ್ದಾರೆ.

KBC 13: ‘ಕರೋಡ್​ಪತಿ’ ಶೋನಲ್ಲಿ 3.4 ಲಕ್ಷ ರೂ. ಗೆದ್ದ ಸ್ಪರ್ಧಿ ವಿರುದ್ಧ ಬಿತ್ತು ಕೇಸ್​; ಮಾಡಿದ ತಪ್ಪೇನು?
ದೇಶ್​ ಬಂಧು ಪಾಂಡೆ - ಅಮಿತಾಭ್ ಬಚ್ಚನ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 31, 2021 | 9:20 AM

ಕಿರುತೆರೆ ಲೋಕದ ಜನಪ್ರಿಯ ಕಾರ್ಯಕ್ರಮಗಳಲ್ಲಿ ‘ಕೌನ್​ ಬನೇಗಾ ಕರೋಡ್​ಪತಿ’ (Kaun Banega Crorepati) ಕೂಡ ಮುಂಚೂಣಿಯಲ್ಲಿದೆ. ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಶೋಗೆ ದೊಡ್ಡ ಪ್ರೇಕ್ಷಕವರ್ಗ ಇದೆ. ಮನರಂಜನೆ ಜೊತೆಗೆ ಜ್ಞಾನವನ್ನೂ ನೀಡುವುದು ಈ ಕಾರ್ಯಕ್ರಮದ ವಿಶೇಷತೆ. ಅಮಿತಾಭ್​ ಬಚ್ಚನ್ (Amitabh Bachchan)​ ಅವರು ನಡೆಸಿಕೊಡುತ್ತಿರುವ ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದ 13ನೇ ಸೀಸನ್​ (KBC 13) ಪ್ರಸಾರ ಆಗುತ್ತಿದೆ. ಅದರಲ್ಲಿ ಭಾಗವಹಿಸಿದ ದೇಶ್​ ಬಂಧು ಪಾಂಡೆ (Desh Bandhu Panday) ಎಂಬುವವರ ಮೇಲೆ ಈಗ ಒಂದು ಕೇಸ್​ ದಾಖಲಾಗಿದೆ!

ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬುದು ದೇಶ್​ ಬಂಧು ಪಾಂಡೆಯವರ ಬಹುಕಾಲದ ಕನಸು. ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮಕ್ಕೆ ಬರುವ ಮೂಲಕವಾದರೂ ಅಮಿತಾಭ್​ ಬಚ್ಚನ್​ ಅವರನ್ನು ನೇರವಾಗಿ ಭೇಟಿಯಾಗಬೇಕು ಎಂದು ಅವರು ಕನಸು ಕಂಡಿದ್ದರು. ಅದು ಈ ಸೀಸನ್​​ನಲ್ಲಿ ನನಸಾಗಿದೆ. ಅಮಿತಾಭ್​ ಕೇಳಿದ ಪ್ರಶ್ನೆಗಳಿಗೆ ಕಾರ್ಯಕ್ರಮದ ಹಾಟ್​ ಸೀಟ್​ನಲ್ಲಿ ಕುಳಿತು ಉತ್ತರಿಸಿದ ದೇಶ್​ ಬಂಧು ಪಾಂಡೆ ಅವರಿಗೆ 3,40,000 ಸಾವಿರ ರೂ. ಸಿಕ್ಕಿದೆ. ಆ ಖುಷಿಯಲ್ಲೇ ತೇಲುತ್ತಿದ್ದ ಅವರಿಗೆ ಈಗ ಹೊಸ ತಲೆನೋವು ಶುರು ಆಗಿದೆ.

ದೇಶ್​ ಬಂಧು ಪಾಂಡೆ ಮೂಲತಃ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿ ಆಗಿದ್ದಾರೆ. ಅಷ್ಟಕ್ಕೂ ಅವರು ಮಾಡಿದ ತಪ್ಪೇನು? ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಅವರು ತಮ್ಮೂರಿನಿಂದ ಮುಂಬೈಗೆ ಬರಬೇಕಾಯಿತು. ಅದಕ್ಕಾಗಿ ಕೆಲವು ದಿನಗಳ ಕಾಲ ರಜೆ ಪಡೆಯುವುದು ಅನಿವಾರ್ಯ. ರಜೆ ಬೇಕು ಎಂದು ತಮ್ಮ ಮೇಲಾಧಿಕಾರಿಗಳಿಗೆ ಅರ್ಜಿ ನೀಡಿಯೇ ಅವರು ಬಂದಿದ್ದರು. ಆದರೆ ಮೇಲಾಧಿಕಾರಿಗಳಿಂದ ಅದಕ್ಕೆ ಸಮ್ಮತಿ ಸಿಕ್ಕಿರಲಿಲ್ಲ!

ಅನುಮತಿ ಇಲ್ಲದೇ ಇದ್ದರೂ ಕೂಡ ಅವರು ಕೆಲಸಕ್ಕೆ ರಜೆ ಹಾಕಿ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ ಭಾಗವಹಿಸಿರುವುದರಿಂದ ಅವರ ವಿರುದ್ಧ ರೇಲ್ವೆ ಇಲಾಖೆಯಲ್ಲಿ ಚಾರ್ಜ್​​ಶೀಟ್​ ಸಲ್ಲಿಸಲಾಗಿದೆ ಎಂದು ವರದಿ ಆಗಿದೆ. ಅಲ್ಲದೇ ಮುಂದಿನ ಮೂರು ವರ್ಷಗಳ ಕಾಲ ಅವರ ಸಂಬಳ ಹೆಚ್ಚಳ ಆಗದಂತೆ ತಡೆ ಹಿಡಿಯಲಾಗಿದೆ ಎಂದು ಸ್ವತಃ ದೇಶ್​ ಬಂಧು ಪಾಂಡೆ ಅವರು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ರೇಲ್ವೆ ಇಲಾಖೆಯ ಮೇಲಾಧಿಕಾರಿಗಳ ಈ ಕ್ರಮವನ್ನು ಕೆಲವು ಉದ್ಯೋಗಿಗಳು ವಿರೋಧಿಸಿದ್ದು, ಪ್ರತಿಭಟನೆಗೂ ಮುಂದಾಗಿದ್ದಾರೆ.

ಇದನ್ನೂ ಓದಿ:

ಕೌನ್ ಬನೇಗಾ ಕರೋಡ್​ಪತಿ ಕಾರ್ಯಕ್ರಮದ ₹7 ಕೋಟಿ ಪ್ರಶ್ನೆಗೆ ಉತ್ತರ ಗೊತ್ತಾ?

KBC 13: ಕರೋಡ್​ಪತಿ ಹಾಟ್​ಸೀಟ್​ನಲ್ಲಿ ಗಂಗೂಲಿ, ಸೆಹ್ವಾಗ್​? ​13ನೇ ಸೀಸನ್​ ನಿರೂಪಣೆಗೆ ಅಮಿತಾಭ್​ ರೆಡಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ