ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ₹7 ಕೋಟಿ ಪ್ರಶ್ನೆಗೆ ಉತ್ತರ ಗೊತ್ತಾ?
12ನೇ ಆವೃತ್ತಿಯ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ 4 ಜಿ ಕೋಟಿ ರೂಪಾಯಿಗಳನ್ನು ಗೆದ್ದಿದ್ದಾರೆ. ಅವರ ಪೈಕಿ ಮೊದಲಿಗರೆಂದರೆ ದೆಹಲಿ ನಿವಾಸಿ ನಾಜಿಯಾ ನಸೀಮ್
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ 12 ನೇ ಅವೃತ್ತಿಯಲ್ಲಿ ಕೋಟ್ಯಾಧಿಪತಿಗಳಾಗುತ್ತಿರುವರ ಸಂಖ್ಯೆ ಹೆಚ್ಚುತ್ತಿದೆ. ಗುರುವಾರದಂದು ನಡೆದ ಕಾರ್ಯಕ್ರಮದಲ್ಲಿ ಮುಂಬೈ ಮಹಾನಗರದ ಡಾ. ನೇಹಾ ಶಾ ಹೆಸರಿನ ವೈದ್ಯೆ ಈ ಆವೃತ್ತಿಯ 4 ನೇ ಕರೋಡ್ಪತಿ ಎನಿಸಿಕೊಂಡರು.
ನಿಮಗೆ ಗೊತ್ತಿರುವಂತೆ 1 ಕೋಟಿಯ ಪ್ರಶ್ನೆಗೆ ಸರಿಯುತ್ತರ ನೀಡಿದ ಕಾಂಟೆಸ್ಟಂಟ್ 7 ಕೋಟಿ ರೂಪಾಯಿಗಳ ಪ್ರಶ್ನೆಗೆ ಅರ್ಹರಾಗುತ್ತಾರೆ. ಆ ಮೊತ್ತದ ಪ್ರಶ್ನೆಗೆ ಡಾ. ನೇಹಾ ಉತ್ತರಿಸುವ ಪ್ರಯತ್ನ ಮಾಡಿದರಾದರೂ ಅವರಿಗೆ ತಮ್ಮ ಆಯ್ಕೆ ಬಗ್ಗೆ ಗೊಂದಲವಿದ್ದುದ್ದರಿಂದ ಗೇಮ್ ಕ್ವಿಟ್ ಮಾಡಿದರು.
ಅದೇ ಪ್ರಶ್ನೆಯನ್ನು ನಾವು ಇಲ್ಲಿ ನೀಡುತ್ತಿದ್ದೇದೇವೆ, ನೀವು ಉತ್ತರಿಸಬಹುದಾ ಅಂತ ಗಮನಿಸಿ. ಇಂದಿರಾ ಗಾಂಧಿ ಮತ್ತು ಜುಲ್ಫಿಕರ್ ಅಲಿ ಭುಟ್ಟೋ ಅವರ ಮಧ್ಯೆ ನಡೆದ ಐತಿಹಾಸಿಕ ಇಂಡೊ-ಪಾಕ್ ಮಾತುಕತೆ ಶಿಮ್ಲಾದ ಯಾವ ಸ್ಥಳದಲ್ಲಿ ನಡೆಯಿತು?
ಆಪ್ಷನ್ಗಳು ಹೀಗಿವೆ:
ಎ) ವೈಸ್ರೀಗಲ್ ಲಾಡ್ಜ್ ಬಿ) ಗೊರ್ಡನ್ ಕ್ಯಾಸಲ್ ಸಿ) ಬಾರ್ನ್ಸ್ ಕೋರ್ಟ್ ಡಿ) ಸೆಸಿಲ್ ಹೋಟೆಲ್ ಉತ್ತರ ಗೊತ್ತಿರದ ಡಾ. ನೇಹಾ ತಾವು ಕ್ವಿಟ್ ಮಾಡುವುದಾಗಿ ಹೇಳಿದಾಗ ಬಿಗ್ ಬಿ ಅವರಿಗೆ ಅನುಮತಿ ನೀಡಿ ಕ್ವಿಟ್ ಮಾಡುವ ಮೊದಲು ಯಾವುದಾದರೊಂದು ಆಪ್ಷನ್ ಹೇಳುವಂತೆ ಸೂಚಿಸಿದರು. ಡಾ. ನೇಹಾ ಆಪ್ಷನ್ ಡಿ ಸೆಸಿಲ್ ಹೋಟೆಲ್ ಎಂದರು. ಅದು ಸರಿಯುತ್ತರವಾಗಿರಲಿಲ್ಲ. ಸರಿಯುತ್ತರ ಆಪ್ಷನ್ ಬಾರ್ನ್ಸ್ ಕೋರ್ಟ್ ಆಗಿತ್ತು.
ಅವರಿಗೆ ಒಂದು ಕೋಟಿ ರೂಪಾಯಿ ಗೆದ್ದಕೊಟ್ಟ ಪ್ರಶ್ನೆ: ಶೆಂಝೊ ಸ್ಪೇಸ್ಕ್ರಾಫ್ಟ್ನಿಂದ ಬಾಹ್ಯಾಕಾಶದೊಳಗೆ ಹೋದ ಮೊದಲ ಚೀನಿ ಯಾರು?
ಸರಿಯಾದ ಉತ್ತರ ಗೊತ್ತಿದ್ದ ಡಾ. ನೇಹಾ ಆಪ್ಷನ್ಗಳಲ್ಲಿದ್ದ ಯಾಂಗ್ ಲೀವಿ ಎಂದುತ್ತರಿಸಿದರು.
ಆಪ್ಷನ್ಗಳು ಹೀಗಿದ್ದವು:
ಎ) ನೈ ಹೈಶೆಂಗ್ ಬಿ) ಯಾಂಗ್ ಲೀವಿ ಸಿ) ಫೀ ಜುಂಗ್ಲಾಂಗ್ ಡಿ) ಜಿಂಗ್ ಹೈಪೆಂಗ್
ಡಾ. ನೇಹಾ ಪ್ರ್ಯಾಕ್ಟೀಸ್ ಮಾಡುತ್ತಿರುವ ವೈದ್ಯೆಯಾಗಿದ್ದು ಮುಂಚೂಣಿಯ ಕೊವಿಡ್ ವಾರಿಯರ್ ಎನಿಸಿಕೊಂಡಿದ್ದಾರೆ. ಅನೇಕ ಸೋಂಕಿತರಿಗೆ ಅವರರು ಚಿಕಿತ್ಸೆ ನೀಡಿದ್ದಾರೆ.
ಡಾ. ನೇಹಾ ಅವರಿಗಿಂತ ಮೊದಲು ಕೆಬಿಸಿ 12ನೇ ಆವೃತ್ತಿಯಲ್ಲಿ ಅನುಪಾ ದಾಸ್, ಐಪಿಎಸ್ ಅಧಿಕಾರಿ ಮೋಹಿತ್ ಶರ್ಮ ಮತ್ತು ನಾಜಿಯಾ ನಸೀಮ್ ಒಂದು ಕೋಟಿ ರೂಪಾಯಿ ಗೆದ್ದ ಕಾಂಟೆಸ್ಟಂಟ್ಗಳಾಗಿದ್ದಾರೆ.
ಕೆಬಿಸಿ-12 ಶೂಟಿಂಗ್ಗೆ ಬಿಗ್ ಬಿ ಹಾಜರ್, ಚಿತ್ರೀಕರಣದಲ್ಲಿ PPE ಕಿಟ್ -ಮಾಸ್ಕಿನದ್ದೇ ಕಾರುಬಾರು
Published On - 9:10 pm, Fri, 8 January 21