ರಿತ್ವಿಕ್ ನಟನೆ ನೋಡಿ ಫಿದಾ ಆದ ಕಿಚ್ಚ ಸುದೀಪ್; ಅಷ್ಟಕ್ಕೂ ಅವರು ಮಾಡಿದ್ದೇನು?
‘ಗಿಣಿರಾಮ’ ಧಾರಾವಾಹಿಯಲ್ಲಿ ರಫ್ ಆ್ಯಂಡ್ ಟಫ್ ಆಗಿ ಕಾಣಿಸಿಕೊಳ್ಳುತ್ತಾರೆ ನಟ ರಿತ್ವಿಕ್ ಮಠದ್. ಆದರೆ, ನಿಜ ಜೀವನದಲ್ಲಿ ಅವರು ಸಖತ್ ಫನ್ನಿ. ಬಿಗ್ ಬಾಸ್ ಮಿನಿ ಸೀಸನ್ನಲ್ಲಿ ಅವರು ಮಾಡಿದ ಕೀಟಲೆಗಳು ಒಂದೆರಡಲ್ಲ.
‘ಬಿಗ್ ಬಾಸ್ ಕನ್ನಡ ಸೀಸನ್ 8’ ಮುಗಿದ ಕೂಡಲೇ ಆರಂಭವಾದ ‘ಬಿಗ್ ಬಾಸ್ ಮಿನಿ ಸೀಸನ್’ ಹಲವು ಕಾರಣಗಳಿಂದಾಗಿ ಗಮನ ಸೆಳೆಯುತ್ತಿದೆ. ಕಲರ್ಸ್ ಕನ್ನಡ ಧಾರಾವಾಹಿಯ 15 ಕಲಾವಿದರನ್ನು ಒಂದೇ ಮನೆಯಲ್ಲಿ ನೋಡಿ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಈ ಕಾರ್ಯಕ್ರಮದ ಮೂಲಕ ಸೀರಿಯಲ್ ಕಲಾವಿದರ ರಿಯಲ್ ಲೈಫ್ ಬಗ್ಗೆ ಒಂದಷ್ಟು ಪರಿಚಯ ವೀಕ್ಷಕರಿಗೆ ಆಗಿದೆ. ಅದೇ ರೀತಿ ನಟ ರಿತ್ವಿಕ್ ವೈಯಕ್ತಿಕವಾಗಿ ಅನೇಕರಿಗೆ ಇಷ್ಟವಾಗಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಿಣಿರಾಮ’ ಧಾರಾವಾಹಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ರಿತ್ವಿಕ್ ಮಠದ್. ಸೀರಿಯಲ್ನಲ್ಲಿ ಅವರ ಪಾತ್ರ ಸ್ವಲ್ಪ ರಫ್ ಆ್ಯಂಡ್ ಟಫ್. ಆದರೆ, ಅವರು ನಿಜ ಜೀವನದಲ್ಲಿ ಸಖತ್ ಫನ್ನಿ. ಅವರು ಮಾಡುವ ಕೀಟಲೆಗಳು ಒಂದೆರಡಲ್ಲ. ಬಿಗ್ ಬಾಸ್ ಮನೆಯಲ್ಲಿ ಅವರು ನಿರಂಜನ್ ಅವರನ್ನು ಬಕ್ರಾ ಮಾಡಿದ್ದಾರೆ. ಅವರ ಆ್ಯಕ್ಟಿಂಗ್ ನೋಡಿ ಸ್ವತಃ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ನ ಕನ್ಫೆಷನ್ ರೂಮ್ಗೆ ತೆರಳಿದ್ದರು ರಿತ್ವಿಕ್. ಅಲ್ಲಿ ಬಿಗ್ ಬಾಸ್ ಮನೆಯ ಅನುಭವಗಳನ್ನು ಕೇಳಲಾಗಿದೆ. ಕನ್ಫೆಷನ್ ರೂಮ್ನಿಂದ ರಿತ್ವಿಕ್ ಹೊರ ಬಂದಿದ್ದನ್ನು ನೋಡಿದ ನಿರಂಜನ್ ‘ಬಿಗ್ ಬಾಸ್ ನಿಮಗೆ ಸೀಕ್ರೆಟ್ ಟಾಸ್ಕ್ ನೀಡಿದ್ರಾ’ ಎಂದು ಪ್ರಶ್ನೆ ಮಾಡಿದ್ದಾರೆ. ಇಲ್ಲ ಎನ್ನುವ ಉತ್ತರವನ್ನು ರಿತ್ವಿಕ್ ನೀಡಿದರು. ಆದರೆ, ನಿರಂಜನ್ ಇದನ್ನು ನಂಬಿಲ್ಲ. ಪದೇಪದೇ ಸೀಕ್ರೆಟ್ ಟಾಸ್ಕ್ ವಿಚಾರವನ್ನು ರಿತ್ವಿಕ್ ಜತೆ ಚರ್ಚಿಸಿದ್ದಾರೆ ಅವರು.
ಇದರಿಂದ ಬೇಸತ್ತ ರಿತ್ವಿಕ್ ಕೊನೆಯಲ್ಲಿ ಹೌದು ಎಂದು ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ‘ಟೀಮ್ಗೆ ಒಬ್ಬರನ್ನು ಸೇರಿಸಿಕೊಂಡು ಅವರಿಂದ ಟಾಸ್ಕ್ ಮಾಡಿಸಬೇಕು. ಹಾಗೆ ಮಾಡಿದರೆ, ನನ್ನ ಟೀಮ್ನಲ್ಲಿದ್ದವರಿಗೆ 15 ಪಾಯಿಂಟ್ ಸಿಗಲಿದೆ. ಟಾಸ್ಕ್ ತುಂಬಾನೇ ಸಿಂಪಲ್. ಮೂರು ಜನರ ಬ್ಯಾಗ್ನಿಂದ ಮೂರು ವಸ್ತುಗಳನ್ನು ಎತ್ತಬೇಕು’ ಎಂದು ರಿತ್ವಿಕ್ ಕುರಿ ಮಾಡೋಕೆ ಪ್ಲ್ಯಾನ್ ರೂಪಿಸಿದರು. ಆದರೆ, ಇದನ್ನು ನಿರಂಜನ್ ನಂಬಲೇ ಇಲ್ಲ.
ಕೊನೆಯಲ್ಲಿ ನಿರಂಜನ್ ನಂಬುವ ರೀತಿಯಲ್ಲಿ ರಿತ್ವಿಕ್ ನಟನೆ ಮಾಡಿದರು. ಇದು ಸೀಕ್ರೆಟ್ ಟಾಸ್ಕ್ ಎಂದು ನಂಬಿದ ನಿರಂಜನ್, ಮೂರು ಜನರ ಬ್ಯಾಗ್ನಿಂದ ಮೂರು ವಸ್ತುಗಳನ್ನು ತೆಗೆದರು. ಕೊನೆಯಲ್ಲಿ ತಾವು ಬಕ್ರಾ ಆಗಿರುವ ವಿಚಾರ ನಿರಂಜನ್ ಅವರಿಗೆ ಗೊತ್ತಾಗಿದೆ. ಈ ಘಟನೆಯು ಸುದೀಪ್ ಪಂಚಾಯ್ತಿಯಲ್ಲಿ ಚರ್ಚೆಗೆ ಬಂದಿದೆ. ರಿತ್ವಿಕ್ ನಟನೆಯನ್ನು ಕಿಚ್ಚ ಸುದೀಪ್ ಮನಸಾರೆ ಹೊಗಳಿದ್ದಾರೆ. ಅಷ್ಟೇ ಅಲ್ಲ, ಚಪ್ಪಾಳೆ ಕೂಡ ತಟ್ಟಿದ್ದಾರೆ.
‘ಬಿಗ್ ಬಾಸ್ ಮಿನಿ ಸೀಸನ್’ ಈಗ ಮುಕ್ತಾಯದ ಹಂತದಲ್ಲಿದೆ. 15 ಸೆಲೆಬ್ರಿಟಿಗಳು ಇಷ್ಟು ದಿನ ಹಲವು ಟಾಸ್ಕ್ಗಳನ್ನು ನಿಭಾಯಿಸುವ ಮೂಲಕ ಹಣಾಹಣಿ ನಡೆಸಿದ್ದಾರೆ. ಶನಿವಾರ (ಸೆ.4) ಮತ್ತು ಭಾನುವಾರ (ಸೆ.5) ಮಧ್ಯಾಹ್ನ ಮೂರು ಗಂಟೆಗೆ ಫಿನಾಲೆ ಪ್ರಸಾರ ಆಗಲಿದೆ. ಈಗಾಗಲೇ ಅದರ ಚಿತ್ರೀಕರಣ ಮುಗಿದಿದೆ.
ಇದನ್ನೂ ಓದಿ:
Kichcha Sudeep: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಕಿಚ್ಚ ಸುದೀಪ್; ಫೋಟೋ ವೈರಲ್
ಬಿಗ್ ಬಾಸ್ ಮಿನಿ ಸೀಸನ್ ಫಿನಾಲೆಗೆ ಸಿಂಹಾಸನವೇರಿ ಬಂದ ಕಿಚ್ಚ; ಇಲ್ಲಿದೆ ಅದ್ದೂರಿ ವೇದಿಕೆಯ ಝಲಕ್
Published On - 4:56 pm, Tue, 31 August 21