‘ಆ ಸಿದ್ದಾರ್ಥ್​ ಬದಲು ಈ ಸಿದ್ದಾರ್ಥ್​ ಸಾಯಬೇಕಿತ್ತು’ ಎಂದು ದ್ವೇಷಕಾರಿದ ನೆಟ್ಟಿಗರು; ನಟನ ಪ್ರತಿಕ್ರಿಯೆ ಏನು?

ರಾಜಕೀಯದ ನಿಲುವುಗಳ ಕಾರಣಕ್ಕೆ ಕಾಲಿವುಡ್​ ನಟ ಸಿದ್ದಾರ್ಥ್ ಅವರು ಅನೇಕರ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಹಾಗಾಗಿ ಅವರನ್ನು ಈಗ ಟಾರ್ಗೆಟ್​ ಮಾಡಲಾಗುತ್ತಿದೆ.

‘ಆ ಸಿದ್ದಾರ್ಥ್​ ಬದಲು ಈ ಸಿದ್ದಾರ್ಥ್​ ಸಾಯಬೇಕಿತ್ತು’ ಎಂದು ದ್ವೇಷಕಾರಿದ ನೆಟ್ಟಿಗರು; ನಟನ ಪ್ರತಿಕ್ರಿಯೆ ಏನು?
ಸಿದ್ದಾರ್ಥ್​ ಶುಕ್ಲಾ, ಕಾಲಿವುಡ್​ ನಟ ಸಿದ್ದಾರ್ಥ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 04, 2021 | 9:19 AM

ಜನಪ್ರಿಯ ನಟ ಸಿದ್ದಾರ್ಥ್​ ಶುಕ್ಲಾ ಅವರು ಹೃದಯಾಘಾತದಿಂದ ನಿಧನರಾಗಿರುವುದು ನೋವಿನ ಸಂಗತಿ. ಮುಂಬೈನ ಅಪಾರ್ಟ್​ಮೆಂಟ್​ನಲ್ಲಿ ಗುರುವಾರ (ಸೆ.2) ಸಿದ್ದಾರ್ಥ್​ ಕೊನೆಯುಸಿರೆಳೆದ ಬಳಿಕ ಇಡೀ ಚಿತ್ರೋದ್ಯಮಕ್ಕೆ ಶಾಕ್​ ಆಯಿತು. ಕೋಟ್ಯಂತರ ಅಭಿಮಾನಿಗಳಿಗೆ ಈ ಕಹಿ ಸುದ್ದಿಯನ್ನು ನಂಬಲು ಸಾಧ್ಯವಾಗಲಿಲ್ಲ. ಎಲ್ಲರೂ ಸಿದ್ದಾರ್ಥ್​ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ. ಇದರ ನಡುವೆ ಕೆಲವರು ವಿಕೃತಿ ಮೆರೆಯುತ್ತಿದ್ದಾರೆ. ತಮಿಳು ನಟ ಸಿದ್ದಾರ್ಥ್​ ಅವರನ್ನು ಟಾರ್ಗೆಟ್​ ಮಾಡಿಕೊಂಡು ದ್ವೇಷ ಕಾರುವ ಟ್ವೀಟ್​ಗಳನ್ನು ಮಾಡುತ್ತಿದ್ದಾರೆ ಕೆಲವು ಕಿಡಿಗೇಡಿಗಳು. ಸಿದ್ದಾರ್ಥ್​ ಅವರು ಅದನ್ನೆಲ್ಲ ಸಾಕ್ಷಿ ಸಮೇತ ಬಯಲು ಮಾಡಿದ್ದಾರೆ.

ಒಂದೇ ಹೆಸರಿನ ನಟರು ಹಲವರು ಇದ್ದಾಗ ಜನರಿಗೆ ಗೊಂದಲ ಆಗುವುದು ಸಹಜ. ಹಿಂದಿ ನಟ ಸಿದ್ದಾರ್ಥ್​ ನಿಧನರಾದಾಗ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವವರು ಕಣ್ತಪ್ಪಿನಿಂದ ಕಾಲಿವುಡ್​ ನಟ ಸಿದ್ದಾರ್ಥ್​ ಅವರ ಫೋಟೋವನ್ನು ಅಪ್​ಲೋಡ್​ ಮಾಡಿಬಿಟ್ಟರೆ ಹೇಗೋ ಕ್ಷಮಿಸಬಹುದು. ಆದರೆ ಇದು ಕಣ್ತಪ್ಪಿನಿಂದ ಆದ ಪ್ರಮಾದ ಅಲ್ಲ. ಬೇಕಂತಲೇ ತಮಿಳಿನ​ ಸಿದ್ದಾರ್ಥ್​ರ ಫೋಟೋವನ್ನು ಕೆಲವು ಕಿಡಿಗೇಡಿಗಳು ಅಪ್​ಲೋಡ್​ ಮಾಡುತ್ತಾ, ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಆ ಮೂಲಕ ತಮ್ಮ ಹೀನ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ.

ರಾಜಕೀಯದ ನಿಲುವುಗಳ ಕಾರಣಕ್ಕೆ ಸಿದ್ದಾರ್ಥ್ ಅನೇಕರ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಸರ್ಕಾರದ ಕೆಲವು ವಿಚಾರಗಳನ್ನು ಅವರು ನೇರವಾಗಿ ಟೀಕಿಸುತ್ತಾರೆ. ಆ ಕಾರಣಕ್ಕಾಗಿ ಅವರನ್ನು ಈಗ ಟಾರ್ಗೆಟ್​ ಮಾಡಲಾಗುತ್ತಿದೆ. ಕೆಲವರಂತೂ ಮಿತಿಮೀರಿ ಕಮೆಂಟ್​ ಮಾಡುತ್ತಿದ್ದಾರೆ. ‘ಆ ಸಿದ್ದಾರ್ಥ್​ ಬದಲಿಗೆ ದೇವರು ಈ ಸಿದ್ದಾರ್ಥ್​ಗೆ ಸಾವು ನೀಡಬಹುದಾಗಿತ್ತು’ ಎಂದು ನಿರ್ಲಜ್ಜೆಯಿಂದ ಕೆಲವರು ಕಮೆಂಟ್​ ಮಾಡಿದ್ದಾರೆ!

ಇಂಥ ಕೆಲವು ಟ್ವೀಟ್​ ಮತ್ತು ಕಮೆಂಟ್​ಗಳನ್ನು ಸಿದ್ದಾರ್ಥ್​ ಅವರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ವಿಕೃತರ ಬಣ್ಣ ಬಯಲು ಮಾಡಿದ್ದಾರೆ. ಈ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.

ಮುಂಬೈನಲ್ಲಿ ಸಿದ್ದಾರ್ಥ್​ ಅಂತ್ಯಕ್ರಿಯೆ:

ಮುಂಬೈನ ಓಶಿವರ ಚಿತಾಗಾರದಲ್ಲಿ ಸಿದ್ದಾರ್ಥ್​ ಶುಕ್ಲಾ ಅಂತ್ಯ ಸಂಸ್ಕಾರ ನೆರವೇರಿದೆ. ಬ್ರಹ್ಮಕುಮಾರಿ ನಿಯಮಗಳ ಪ್ರಕಾರ ಅಂತ್ಯಕ್ರಿಯೆ ನಡೆದಿದೆ ಎಂದು ತಿಳಿದು ಬಂದಿದೆ. ಮುಂಬೈನಲ್ಲಿ ಕೊವಿಡ್​ ನಿಯಮಗಳನ್ನು ಸಂಪೂರ್ಣವಾಗಿ ಸಡಿಲ ಮಾಡಿಲ್ಲ. ಹೀಗಾಗಿ, ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಈ ಕಾರ್ಯಗಳು ನಡೆದಿವೆ. ಸಿದ್ಧಾರ್ಥ್​ ಹೃದಯಾಘಾತದಿಂದ ಮೃತಪಟ್ಟಿದ್ದು ಖಚಿತವಾಗಿತ್ತು. ಇದರ ಮಧ್ಯೆ, ಅವರು ಔಷಧ ಸೇವಿಸಿದ್ದಾರೆ ಎಂಬಿತ್ಯಾದಿ ವಿಚಾರಗಳು ವೈರಲ್​ ಆಗಿತ್ತು. ಈ ಕಾರಣಕ್ಕೆ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ನಂತರ ಆಸ್ಪತ್ರೆಯಿಂದ ಅವರ ಶವವನ್ನು ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಯಿತು.

ಇದನ್ನೂ ಓದಿ:

ಸಿದ್ದಾರ್ಥ್​ ಶುಕ್ಲಾ ಸಾವಿನ ಬಗ್ಗೆ ನಗುತ್ತಾ ಮಾತನಾಡಿದ್ದ ಸಲ್ಮಾನ್​ ಖಾನ್​: ಶಾಕಿಂಗ್​ ವಿಡಿಯೋ ವೈರಲ್

ಪ್ರೇಯಸಿ ಮಡಿಲಲ್ಲೇ ಪ್ರಾಣ ಬಿಟ್ರಾ ಸಿದ್ದಾರ್ಥ್​? ಹೃದಯಾಘಾತ ಆಗೋದಕ್ಕೂ ಮುನ್ನ ನಡೆದಿದ್ದೇನು? ಇಲ್ಲಿದೆ ವಿವರ

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ