Kichcha Sudeep: ಕಿಚ್ಚ ಸುದೀಪ್ ಆಗಮನಕ್ಕೆ ಸಿದ್ಧವಾಯ್ತು ಬಿಗ್ ಬಾಸ್ ವೇದಿಕೆ
ಕನ್ನಡ ಬಿಗ್ ಬಾಸ್ನ ಎಂಟು ಸೀಸನ್ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಖ್ಯಾತಿ ಸುದೀಪ್ ಅವರಿಗೆ ಇದೆ. ಮುಂದಿನ ಸೀಸನ್ಗಳನ್ನೂ ಅವರೇ ನಿರೂಪಣೆ ಮಾಡಲಿದ್ದಾರೆ. ಮಿನಿ ಸೀಸನ್ ನಿರೂಪಣೆ ಕೂಡ ಅವರೇ ನಿರ್ವಹಿಸಲಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 8’ ಪೂರ್ಣಗೊಂಡ ಬೆನ್ನಲ್ಲೇ ಆರಂಭವಾಗಿದ್ದು ಬಿಗ್ ಬಾಸ್ ಮಿನಿ ಸೀಸನ್. ಕಲರ್ಸ್ ಕನ್ನಡ ಧಾರಾವಾಹಿ ಕಲಾವಿದರನ್ನೇ ಇಟ್ಟುಕೊಂಡು ಮಿನಿ ಬಿಗ್ ಬಾಸ್ ನಡೆಸಲಾಗಿದೆ. ಇದು ಕನ್ನಡದ ಪಾಲಿಗೆ ಹೊಸ ಪ್ರಯೋಗ. 100 ದಿನಗಳ ಕಾಲ ಮನರಂಜನೆ ನೀಡುತ್ತಿದ್ದ ಬಿಗ್ ಬಾಸ್ಗೂ ಇದಕ್ಕೂ ತುಂಬಾನೇ ವ್ಯತ್ಯಾಸವಿದೆ. ಆದರೂ ಮನರಂಜನೆಗೆ ಯಾವುದೇ ಕೊರತೆ ಆಗಿಲ್ಲ. ಸ್ಪರ್ಧಿಗಳು ಆರು ದಿನಗಳ ಕಾಲ ಮನೆಯಲ್ಲಿ ಕಳೆದು ಬಂದಿದ್ದನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂರು ವಾರಗಳ ಕಾಲ ಪ್ರಸಾರ ಮಾಡಲಾಗಿದೆ. ಈಗ ಏನಿದ್ದರೂ ಸುದೀಪ್ ಬಿಗ್ ಬಾಸ್ ವೇದಿಕೆ ಏರುವ ಸಮಯ.
ಕನ್ನಡ ಬಿಗ್ ಬಾಸ್ನ ಎಂಟು ಸೀಸನ್ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಖ್ಯಾತಿ ಸುದೀಪ್ ಅವರಿಗೆ ಇದೆ. ಮುಂದಿನ ಸೀಸನ್ಗಳನ್ನೂ ಅವರೇ ನಿರೂಪಣೆ ಮಾಡಲಿದ್ದಾರೆ. ಸುದೀಪ್ ನಿರೂಪಣೆಯನ್ನು ಇಷ್ಟಪಡದವರಿಲ್ಲ. ಸುದೀಪ್ ಅವರನ್ನು ನೋಡುವ ಉದ್ದೇಶದಿಂದಲೇ ಬಿಗ್ ಬಾಸ್ ನೋಡುವವರ ಸಂಖ್ಯೆ ದೊಡ್ಡದಿದೆ. ಈಗ ಮಿನಿ ಸೀಸನ್ ನಿರೂಪಣೆ ಕೂಡ ಅವರೇ ನಿರ್ವಹಿಸಲಿದ್ದಾರೆ. ಶನಿವಾರ (ಸೆಪ್ಟೆಂಬರ್ 4) ಮತ್ತು ಭಾನುವಾರ (ಸೆಪ್ಟೆಂಬರ್ 5) ಸುದೀಪ್ ನಿರೂಪಣೆ ಮಾಡಿರುವ ಎಪಿಸೋಡ್ ಪ್ರಸಾರವಾಗಲಿದೆ. ಇದನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ.
ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಸುದೀಪ್ ನಿರೂಪಣೆಯ ಎಪಿಸೋಡ್ನ ಶೂಟಿಂಗ್ ಪೂರ್ಣಗೊಳಿಸಿದೆ. ಅದನ್ನು, ಈಗ ಪ್ರಸಾರ ಮಾಡಲಾಗುತ್ತಿದೆ. ಕಳೆದ ಒಂದು ವಾರಗಳಿಂದ ಕಲರ್ಸ್ ಕನ್ನಡ ವಾಹಿನಿ ಈ ಬಗ್ಗೆ ಪ್ರೋಮೋಗಳನ್ನು ಹಂಚಿಕೊಳ್ಳುತ್ತಿದೆ. ಸುದೀಪ್ ಲುಕ್ ಹಾಗೂ ಮಾತುಗಳು ವೀಕ್ಷಕರಿಗೆ ಇಷ್ಟವಾಗುತ್ತಿದ್ದು, ಫುಲ್ ಎಪಿಸೋಡ್ ಪ್ರಸಾರಕ್ಕಾಗಿ ಕಾಯುತ್ತಿದ್ದಾರೆ.
View this post on Instagram
ಸಾಮಾನ್ಯವಾಗಿ ಸುದೀಪ್ ನಿರೂಪಣೆ ಮಾಡುವ ಬಿಗ್ ಬಾಸ್ ಎಪಿಸೋಡ್ಗಳು ರಾತ್ರಿ ಪ್ರಸಾರವಾಗುತ್ತಿತ್ತು. ಆದರೆ, ಈ ಬಾರಿ ಸಮಯ ಬದಲಾಗಿದೆ. ಮಧ್ಯಾಹ್ನ ಮೂರು ಗಂಟೆಗೇ ಸುದೀಪ್ ಎಂಟ್ರಿ ಆಗಲಿದೆ. ರಾತ್ರಿ ಬೇರೆಬೇರೆ ಕಾರ್ಯಕ್ರಮಗಳು ಶೆಡ್ಯೂಲ್ ಆಗಿರುವುದರಿಂದ ವಾಹಿನಿ ಈ ನಿರ್ಧಾರಕ್ಕೆ ಬಂದಿದೆ.
ಇದನ್ನೂ ಓದಿ:
ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದ ಸುದೀಪ್; ಕಿಚ್ಚನ ದರ್ಶನಕ್ಕೆ ಮುಗಿಬಿದ್ದ ಫ್ಯಾನ್ಸ್