AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದಾರ್ಥ್​ ಶುಕ್ಲಾ ಸಾವಿಗೆ ಶ್ರದ್ಧಾಂಜಲಿ ಅರ್ಪಿಸಿದ WWE ಸೂಪರ್​ ಸ್ಟಾರ್​​ ಜಾನ್​ ಸೀನಾ

WWE ಸೂಪರ್​ ಸ್ಟಾರ್​​ ಜಾನ್​ ಸೀನಾ ತುಂಬಾನೇ ಫೇಮಸ್​. ವಿಶ್ವಾದ್ಯಂತ ಅವರಿಗೆ ಫ್ಯಾನ್ಸ್​ ಇದ್ದಾರೆ. ದಶಕಗಳ ಕಾಲ WWE​ನಲ್ಲಿರುವ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೋಟ್ಯಾಂತರ ಜನ ಹಿಂಬಾಲಕರಿದ್ದಾರೆ.

ಸಿದ್ದಾರ್ಥ್​ ಶುಕ್ಲಾ ಸಾವಿಗೆ ಶ್ರದ್ಧಾಂಜಲಿ ಅರ್ಪಿಸಿದ WWE ಸೂಪರ್​ ಸ್ಟಾರ್​​ ಜಾನ್​ ಸೀನಾ
ಸಿದ್ದಾರ್ಥ್​ ಶುಕ್ಲಾ ಸಾವಿಗೆ ಶ್ರದ್ಧಾಂಜಲಿ ಅರ್ಪಿಸಿದ WWE ಸೂಪರ್​ ಸ್ಟಾರ್​​ ಜಾನ್​ ಸೀನಾ
TV9 Web
| Edited By: |

Updated on: Sep 04, 2021 | 2:56 PM

Share

ಸಿದ್ದಾರ್ಥ್​ ಶುಕ್ಲಾ ಮೃತಪಟ್ಟು ಮೂರು ದಿನ ಕಳೆದಿದೆ. ಅವರ ಸಾವಿಗೆ ಸಾಕಷ್ಟು ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಅವರ ಅಂತ್ಯಕ್ರಿಯೆ ಶುಕ್ರವಾರ (ಸೆಪ್ಟೆಂಬರ್​ 4) ನೆರವೇರಿದ್ದು, ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ. ಹೀಗಿರುವಾಗಲೇ ಸಿದ್ದಾರ್ಥ್​ ಶುಕ್ಲಾಗೆ WWE ಸೂಪರ್​ ಸ್ಟಾರ್​​ ಜಾನ್​ ಸೀನಾ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

WWE ಸೂಪರ್​ ಸ್ಟಾರ್​​ ಜಾನ್​ ಸೀನಾ ತುಂಬಾನೇ ಫೇಮಸ್​. ವಿಶ್ವಾದ್ಯಂತ ಅವರಿಗೆ ಫ್ಯಾನ್ಸ್​ ಇದ್ದಾರೆ. ದಶಕಗಳ ಕಾಲ WWE​ನಲ್ಲಿರುವ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೋಟ್ಯಾಂತರ ಜನ ಹಿಂಬಾಲಕರಿದ್ದಾರೆ. ಭಾರತದಲ್ಲೂ WWE ನೋಡುವವರ ಸಂಖ್ಯೆ ಕಡಿಮೆ ಏನಿಲ್ಲ. ಈ ಎಲ್ಲ ಕಾರಣಕ್ಕೆ ಜಾನ್​ ಸೀನಾ ಅವರು ಭಾರತೀಯರಿಗೂ ಇಷ್ಟವಾಗುತ್ತಾರೆ. ಅಚ್ಚರಿ ಎಂದರೆ, ಭಾರತದ ಮೇಲೂ ಅವರಿಗೆ ಪ್ರೀತಿ ಇದೆ. ಇದು ಸಾಕಷ್ಟು ಬಾರಿ ಸಾಬೀತಾಗಿದೆ. ಈಗ, ಸಿದ್ದಾರ್ಥ್​ ಫೋಟೋ ಹಾಕುವ ಮೂಲಕ ಅವರು ಶ್ರದ್ಧಾಂಜಲಿ ಅರ್ಪಿಸಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಹೌದು, ಜಾನ್​ ಸೀನಾ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸಿದ್ದಾರ್ಥ್​ ಫೋಟೋ ಪೋಸ್ಟ್​ ಮಾಡಲಾಗಿದೆ. ಜಾನ್​ ಸೀನಾ ಯಾವುದೇ ಫೋಟೋ ಹಾಕಿದರೂ ಅದಕ್ಕೆ ಕ್ಯಾಪ್ಶನ್​ ನೀಡುವುದಿಲ್ಲ. ಇದನ್ನು ಅವರು ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ತಮ್ಮ ಬಯೋದಲ್ಲಿ ಆ ಬಗ್ಗೆ ಬರೆದುಕೊಂಡಿದ್ದಾರೆ ಕೂಡ. ಅದೇ ರೀತಿ ಸಿದ್ದಾರ್ಥ್​ ಫೋಟೋಗೂ ಅವರು ಯಾವುದೇ ಕ್ಯಾಪ್ಶನ್​ ನೀಡಿಲ್ಲ. ಇದು ಶ್ರದ್ಧಾಂಜಲಿ ಅರ್ಪಿಸೋಕೆ ಮಾಡಿದ ಪೋಸ್ಟ್​ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಮಧ್ಯೆ, ಅವರಿಗೆ ಸಿದ್ದಾರ್ಥ್​ ಗೊತ್ತಿತ್ತಾ? ಅವರು ಕೂಡ ಬಿಗ್​ ಬಾಸ್​ ನೋಡುತ್ತಿದ್ದರಾ ಎಂಬಿತ್ಯಾದಿ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.

ಅಂದಹಾಗೆ, ಜಾನ್​ ಸೀನಾ ಈ ರೀತಿ ಭಾರತೀಯರ ಫೋಟೋ ಹಾಕಿದ್ದು ಇದೇ ಮೊದಲಲ್ಲ. ಸುಶಾಂತ್​ ಸಿಂಗ್​ ರಜಪೂತ್​ ಮೃತಪಟ್ಟಾಗ, ಅವರು ಶ್ರದ್ಧಾಂಜಲಿ ಅರ್ಪಿಸಿದ್ದರು. ನಟಿ ಐಶ್ವರ್ಯಾ ರೈ, ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಫೋಟೋ ಕೂಡ ಪೋಸ್ಟ್​ ಮಾಡಿದ್ದರು ಜಾನ್​ ಸೀನಾ. ಇದಕ್ಕೂ ಅವರು ಯಾವುದೇ ವಿವರಣೆ ಬರೆದಿಲ್ಲ.

ಇದನ್ನೂ ಓದಿ: ಸಿದ್ದಾರ್ಥ್​ ಶುಕ್ಲಾ ಸಾವಿನ ಬಗ್ಗೆ ನಗುತ್ತಾ ಮಾತನಾಡಿದ್ದ ಸಲ್ಮಾನ್​ ಖಾನ್​: ಶಾಕಿಂಗ್​ ವಿಡಿಯೋ ವೈರಲ್

‘ಆ ಸಿದ್ದಾರ್ಥ್​ ಬದಲು ಈ ಸಿದ್ದಾರ್ಥ್​ ಸಾಯಬೇಕಿತ್ತು’ ಎಂದು ದ್ವೇಷಕಾರಿದ ನೆಟ್ಟಿಗರು; ನಟನ ಪ್ರತಿಕ್ರಿಯೆ ಏನು?

Follow Us
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ