Samantha: ಶೂಟಿಂಗ್​ನಿಂದ ಬ್ರೇಕ್ ತೆಗೆದುಕೊಂಡ ಸಮಂತಾ ಈಗೇನು ಮಾಡುತ್ತಿದ್ದಾರೆ?; ಉತ್ತರ ನೀಡುತ್ತಿದೆ ಈ ಫೊಟೊ

ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿರುವ ಖ್ಯಾತ ನಟಿ ಸಮಂತಾ, ಇದೀಗ ತಮ್ಮ ಸ್ನೇಹಿತರೊಂದಿಗೆ ಸೈಕಲ್ ಏರಿ ಸವಾರಿ ಹೊರಟಿದ್ದಾರೆ.

Samantha: ಶೂಟಿಂಗ್​ನಿಂದ ಬ್ರೇಕ್ ತೆಗೆದುಕೊಂಡ ಸಮಂತಾ ಈಗೇನು ಮಾಡುತ್ತಿದ್ದಾರೆ?; ಉತ್ತರ ನೀಡುತ್ತಿದೆ ಈ ಫೊಟೊ
ಗೆಳೆಯರೊಂದಿಗೆ ಸೈಕಲ್ ಸವಾರಿ ಹೊರಟ ಸಮಂತಾ
Follow us
TV9 Web
| Updated By: shivaprasad.hs

Updated on: Sep 03, 2021 | 5:13 PM

ಟಾಲಿವುಡ್​ನ ಖ್ಯಾತ ನಟಿ ಸಮಂತಾ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಬಿಡುವಿನ ಸಂದರ್ಭದಲ್ಲಿ ತಮ್ಮ ನೆಚ್ಚಿನ ಹವ್ಯಾಸಗಳಿಗೆ ಸಮಯ ನೀಡಲು ನಿರ್ಧರಿಸಿರುವ ನಟಿ, ತಮ್ಮ ಸ್ನೇಹಿತರೊಂದಿಗೆ ಸೈಕ್ಲಿಂಗ್ ಹೊರಟಿದ್ದಾರೆ. ಇಂದು (ಸೆಪ್ಟೆಂಬರ್ 3) ಹಂಚಿಕೊಂಡಿರುವ ಚಿತ್ರದಲ್ಲಿ ಅವರು ತಮ್ಮ ಸ್ನೇಹಿತೆ ಶಿಲ್ಪಾ ರೆಡ್ಡಿ ಹಾಗೂ ಅವರ ಕುಟುಂಬದವರೊಂದಿಗೆ ಸೈಕಲ್ ಸವಾರಿ ಮಾಡಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ವೈಟ್ ಹಾರ್ಟ್ ಇಮೋಜಿಯೊಂದಿಗೆ ಫೊಟೊ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಇಂಡಿಯಾ ಟುಡೆಗೆ ಅವರು ನೀಡಿದ್ದ ಸಂದರ್ಶನದಲ್ಲಿ ಬಿಡುವು ತೆಗೆದುಕೊಳ್ಳುತ್ತಿರುವ ಕುರಿತು ತಿಳಿಸಿದ್ದರು. ‘ಸದ್ಯಕ್ಕೆ ನನ್ನ ಕೈಯಲ್ಲಿ ಯಾವುದೇ ಚಿತ್ರಗಳಿಲ್ಲ. ಸುಮಾರು 11 ವರ್ಷಗಳಿಂದ ನಾನು ಬಿಡುವು ತೆಗೆದುಕೊಳ್ಳದೇ ಕೆಲಸ ಮಾಡಿದ್ದೇನೆ. ಈಗ ಸುಮಾರು ಒಂದು ತಿಂಗಳ ಕಾಲ ರಜಾ ತೆಗೆದುಕೊಂಡಿದ್ದೇನೆ. ಮರಳಿದ ನಂತರ ಹೊಸದಾಗಿ ಸ್ಕ್ರಿಪ್ಟ್​​ಗಳನ್ನು ಕೇಳುತ್ತೇನೆ. ನನ್ನ ಖಾತೆಯಲ್ಲಿ ಈಗ ಯಾವುದೇ ಚಿತ್ರಗಳಿಲ್ಲ. ಇದ್ದವುಗಳನ್ನು ಮುಗಿಸಿದ್ದೇನೆ’’ ಎಂದಿದ್ದಾರೆ ಸಮಂತಾ.

ಸೈಕಲ್ ಸವಾರಿಯ ಪೋಸ್ಟ್ ಹಂಚಿಕೊಂಡ ಸಮಂತಾ:

View this post on Instagram

A post shared by S (@samantharuthprabhuoffl)

ಸಮಂತಾ ಕೊನೆಯದಾಗಿ ಕಾಣಿಸಿಕೊಂಡಿದ್ದು, ಆಮೆಜಾನ್ ಪ್ರೈಮ್​ನಲ್ಲಿ ಪ್ರಸಾರವಾದ ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರೀಸ್​ನಲ್ಲಿ. ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದ ಈ ಸೀರೀಸ್​ನಲ್ಲಿ ಪ್ರಿಯಾಮಣಿ, ಮನೋಜ್ ಬಾಜಪೇಯಿ ಮೊದಲಾದವರು ಅಭಿನಯಿಸಿದ್ದರು. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಕೂಡ, ಸಮಂತಾ ಪಾತ್ರಕ್ಕೆ ತಮಿಳರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದಾಗ್ಯೂ ಸಮಂತಾ ಅವರ ಅಭಿನಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಸುತ್ತಾಟದ ಚಿತ್ರ ಹಂಚಿಕೊಂಡ ಸಮಂತಾ:

View this post on Instagram

A post shared by S (@samantharuthprabhuoffl)

ಸಮಂತಾ ಅವರು ಗುಣಶೇಖರ್​ ನಿರ್ದೇಶನದ ‘ಶಾಕುಂತಲಮ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ನಯನತಾರಾ ಅವರೊಂದಿಗೆ ‘ಕಾಥುವಾಕುಲ ರೆಂಡು ಕಾದಲ್’ ಚಿತ್ರದಲ್ಲೂ ಬಣ್ಣ ಹಚ್ಚಿದ್ದು, ಈ ಚಿತ್ರವನ್ನು ನಯನತಾರಾ ಸ್ನೇಹಿತ ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಇದನ್ನೂ ಓದಿ:

ತಾತ ಸುಂದರ್​ ರಾಜ್​ ಜತೆ ರಾಯನ್​ ರಾಜ್​ ಸರ್ಜಾ ತುಂಟಾಟ; ವಿಡಿಯೋ ವೈರಲ್

ಸೌತ್​ ಸ್ಟಾರ್​ ಅಲ್ಲು ಅರ್ಜುನ್​ಗೆ ಧನ್ಯವಾದ ಹೇಳಿದ ಸಿದ್ದಾರ್ಥ್​ ಮಲ್ಹೋತ್ರಾ

(Samantha goes cycling with her friends and enjoying the holiday)