Sunny Leone: ನೆಚ್ಚಿನ ಅಭಿಮಾನಿಗಳಿಗೆ ಕುಳಿತಲ್ಲೇ ಮಾಲ್ಡೀವ್ಸ್ ದರ್ಶನ ಮಾಡಿಸಿದ ಸನ್ನಿ ಲಿಯೋನ್

TV9 Digital Desk

| Edited By: shivaprasad.hs

Updated on: Sep 02, 2021 | 10:00 AM

ಬಾಲಿವುಡ್​ನ ಮಾದಕ ತಾರೆ ಸನ್ನಿ ಲಿಯೋನ್ ತಮ್ಮ ಕುಟುಂಬದವರೊಂದಿಗೆ ಮಾಲ್ಡೀವ್ಸ್​ಗೆ ತೆರಳಿದ್ದಾರೆ. ಅಲ್ಲಿ ಕಳೆಯುತ್ತಿರುವ ಸುಂದರ ಕ್ಷಣಗಳ ವಿಡಿಯೊ ಹಾಗೂ ಫೊಟೊಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Sunny Leone: ನೆಚ್ಚಿನ ಅಭಿಮಾನಿಗಳಿಗೆ ಕುಳಿತಲ್ಲೇ ಮಾಲ್ಡೀವ್ಸ್ ದರ್ಶನ ಮಾಡಿಸಿದ ಸನ್ನಿ ಲಿಯೋನ್
ಮಾಲ್ಡೀವ್ಸ್​ನಲ್ಲಿ ಸನ್ನಿ ಲಿಯೋನ್ (Credits: Sunny Leone/ Instagram)

ಚಿತ್ರರಂಗದ ತಾರೆಯರಿಗೆ ಮಾಲ್ಡೀವ್ಸ್ ಅಚ್ಚುಮೆಚ್ಚಿನ ತಾಣ. ಚಿತ್ರೀಕರಣದಿಂದ ಬಿಡುವು ಪಡೆದುಕೊಂಡು ಮಾಲ್ಡೀವ್ಸ್​ಗೆ ತೆರಳಿ, ಕುಟುಂಬದವರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಾರೆ. ಇದೀಗ ಬಾಲಿವುಡ್ ತಾರೆ ಸನ್ನಿ ಲಿಯೋನ್ ತಮ್ಮ ಕುಟುಂಬದವರೊಂದಿಗೆ ಮಾಲ್ಡೀವ್ಸ್​ಗೆ ಹಾರಿದ್ದಾರೆ. ಅಲ್ಲಿ ಕಳೆಯುತ್ತಿರುವ ಸುಂದರ ಸಮಯವನ್ನು ಹಾಗೂ ನಿಸರ್ಗ ಸೌಂದರ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳು ಕುಳಿತಲ್ಲಿಗೇ ಮಾಲ್ಡೀವ್ಸ್ ದರ್ಶನ ಮಾಡಿಸುತ್ತಿದ್ದಾರೆ.

ಸನ್ನಿ ತಮ್ಮ ಪತಿ ಡೇನಿಯಲ್ ವೆಬರ್ ಹಾಗೂ ಮಕ್ಕಳಾದ ನಿಶಾ, ನೋಹ್ ಹಾಗೂ ಆಷರ್ ಜೊತೆ ಮಾಲ್ಡೀವ್ಸ್​ನಲ್ಲಿದ್ದಾರೆ. ಇತ್ತೀಚೆಗಷ್ಟೇ ಹಂಚಿಕೊಂಡಿರುವ ವಿಡಿಯೊವೊಂದರಲ್ಲಿ ಸನ್ನಿ, ‘ಸ್ವರ್ಗಕ್ಕೆ ಸ್ವಾಗತ. ಇದು ಪಾರ್ಟಿಯ ಸಮಯ ಮತ್ತು ಜೀವನವನ್ನು ಆನಂದಿಸುವ ಕಾಲ’ ಎಂದು ಬರೆದುಕೊಂಡು ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ವಿಡಿಯೊದಲ್ಲಿ ಸನ್ನಿ ಉಪಾಹಾರ ಸೇವಿಸುತ್ತಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

ಸನ್ನಿ ಹಂಚಿಕೊಂಡ ವಿಡಿಯೊ ಇಲ್ಲಿದೆ:

ತಾವು ತಂಗಿರುವ ರೆಸಾರ್ಟ್​ನ ವಿಡಿಯೊವೊಂದನ್ನೂ ಹಂಚಿಕೊಂಡಿರುವ ಬಾಲಿವುಡ್​ನ ಮಾದಕ ನಟಿ, ‘ಈ ತಾಣಕ್ಕೆ(ಓಷನ್ ಸ್ಪಾ) ಫಿಲ್ಟರ್​ಗಳ ಅಗತ್ಯವೇ ಇಲ್ಲ. ನಿಜವಾಗಿಯೂ ಇದು ಅದ್ಭುತವಾಗಿದೆ. ದಿನವೂ ಇಲ್ಲಿಗೆ ಬರಬೇಕು ಎಂಬ ಬಯಕೆಯಾಗುತ್ತದೆ’ ಎಂದು ಬರೆದುಕೊಂಡಿದ್ಧಾರೆ. ಈ ಓಷನ್ ಸ್ಪಾವನ್ನು ಸಮುದ್ರದ ಮೇಲೆ ನಿರ್ಮಿಸಲಾಗಿದ್ದು, ಸುತ್ತಲೂ ತಿಳಿ ನೀಲಿ ಬಣ್ಣದ ಸಮುದ್ರವಿದೆ. ಆದ್ದರಿಂದಲೇ ಇದು ತಾರೆಗಳ ನೆಚ್ಚಿನ ತಾಣವಾಗಿದೆ.

View this post on Instagram

A post shared by Sunny Leone (@sunnyleone)

ಸನ್ನಿ ಲಿಯೋನ್ ಪ್ರಸ್ತುತ ‘ಅನಾಮಿಕ’ ವೆಬ್​ ಸೀರೀಸ್​ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ವಿಕ್ರಮ್ ಭಟ್ ಇದನ್ನು ನಿರ್ದೇಶನ ಮಾಡುತ್ತಿದ್ದು, ಆಕ್ಷನ್ ಮಾದರಿಯ ಸೀರೀಸ್ ಇದಾಗಿರಲಿದೆ.

ಇದನ್ನೂ ಓದಿ:

ಕಿಚ್ಚ ಸುದೀಪ್​ ಹುಟ್ಟುಹಬ್ಬ; ‘ಅಭಿನಯ ಚಕ್ರವರ್ತಿ’ ಜೀವನದ 10 ಇಂಟರೆಸ್ಟಿಂಗ್​ ವಿಷಯಗಳು ಇಲ್ಲಿವೆ

Sudeep Birthday: ಪರಭಾಷೆಗಳಲ್ಲಿ ಕಿಚ್ಚನ ಮಿಂಚು; ಈ ಚಿತ್ರಗಳಲ್ಲಿ ಸುದೀಪ್ ನಟನೆ ಕಂಡು ಮಾರುಹೋಗದವರುಂಟೇ?

(Bollywood actress Sunny Leone shares photos and videos of her Maldives trip)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada