‘ಈಗಾಗಲೇ ಸಾಮಾನ್ಯ ಜನರು ಬಡತನ, ನಿರುದ್ಯೋಗದ ಕಾರಣ 3ನೇ ಅಲೆಯನ್ನು ಅನುಭವಿಸುತ್ತಿದ್ದಾರೆ’: ಸೋನು ಸೂದ್
Sonu Sood: ಬಾಲಿವುಡ್ ನಟ ಸೋನು ಸೂದ್ ಟ್ವಿಟರ್ ಮುಖಾಂತರ ಸಾಮಾನ್ಯ ಜನರ ಕಷ್ಟಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಈಗಾಗಲೇ ಜನರು ಮೂರನೇ ಅಲೆಯನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾರತ ಚಿತ್ರರಂಗದ ಖ್ಯಾತ ನಟ ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಕೊರೊನಾ ಆಪತ್ಕಾಲದಲ್ಲಿ ಜನ ಸಾಮಾನ್ಯರಿಗೆ ನೀಡಿದ ನೆರವಿನ ಹಸ್ತದಿಂದ ಅವರು ಅಭಿಮಾನಿಗಳಿಗೆ ಮತ್ತಷ್ಟು ಆತ್ಮೀಯರಾದರು. ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮಾಡುವುದರಿಂದ ತೊಡಗಿ, ಹಿರಿಯರಿಗೆ ವೈದ್ಯಕೀಯ ಸಹಾಯ ಮಾಡುವವರೆಗೆ ನಾನಾ ವಿಧವಾಗಿ ಸೋನು ಜನ ಸಾಮಾನ್ಯರಿಗೆ ನೆರವಾಗಿದ್ದಾರೆ. ಇಂದು ಅವರು ಟ್ವೀಟ್ ಒಂದನ್ನು ಮಾಡಿದ್ದು, ಅದರಲ್ಲಿ ಕೊರೊನಾ ಮೂರನೇ ಅಲೆಯ ಕುರಿತು ಮಾತನಾಡಿದ್ದಾರೆ. ‘ನಾವು ಈಗಾಗಲೇ ಮೂರನೇ ಅಲೆಯಲ್ಲಿದ್ದೇವೆ’ ಎಂದಿದ್ದಾರೆ ಅವರು. ಜನರು ಸೋನು ಸೂದ್ ಕಾಳಜಿಗೆ ‘ನೀವು ಹೇಳುತ್ತಿರುವುದು ಸತ್ಯ’ ಎಂದಿದ್ದಾರೆ.
ಟ್ವೀಟ್ ಮುಖಾಂತರ ಸೋನು ಹಂಚಿಕೊಂಡ ಮಾಹಿತಿ ಪ್ರಶ್ನೋತ್ತರ ರೂಪದಲ್ಲಿದೆ. ಅನಾಮಿಕರೊಬ್ಬರು ಸೋನು ಅವರಿಗೆ ‘‘ಕೊರೊನಾ ಮೂರನೇ ಅಲೆ ಬರುತ್ತದೆ ಎಂದು ನಿಮಗನ್ನಿಸುತ್ತದೆಯೇ?’’ ಎಂದು ಕೇಳಿದ್ದಾರೆ. ಆಗ ಸೋನು ಅವರು, ‘‘ನಾವು ಈಗಾಗಲೇ ಮೂರನೇ ಅಲೆಯಲ್ಲಿದ್ದೇವೆ. ಬಡತನ ಮತ್ತು ನಿರುದ್ಯೋಗಗಳು ಮೂರನೇ ಅಲೆಯಷ್ಟೇ ಭೀಕರವಾಗಿ ಜನ ಸಾಮಾನ್ಯರಿಗೆ ಹೊಡೆತ ನೀಡಿದೆ’’ ಎಂದು ಉತ್ತರ ನೀಡಿದ್ದಾರೆ.
ಸೋನು ಸೂದ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:
Someone asked me:” Do u think there will be a 3rd wave?”
I said: We are already experiencing the 3rd wave. Unemployment and Poverty that has hit the common man is nothing less than a 3rd wave.
Only vaccination to this is : Come forward and help the needy, give employment. ??
— sonu sood (@SonuSood) September 2, 2021
ಪ್ರಸ್ತುತ ಭಾರತ ಎದುರಿಸುತ್ತಿರುವ ಈ ಸಮಸ್ಯೆಗೆ ಸೋನು ಸೂದ್ ಪರಿಹಾರವನ್ನೂ ಸೂಚಿಸಿದ್ದಾರೆ. ‘‘ಜನರು ತಾವಾಗಿಯೇ ಮುಂದೆ ಬಂದು ಅಗತ್ಯವಿರುವವರಿಗೆ ಸಹಾಯ ಮಾಡಬೇಕು. ಹಾಗೆಯೇ ಉದ್ಯೋಗಗಳನ್ನೂ ನೀಡಬೇಕು’’ ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:
ಸಾರ್ವಜನಿಕವಾಗಿ ಕೋಣ ಬಲಿಕೊಟ್ಟ ಸುದೀಪ್ ಫ್ಯಾನ್ಸ್; ಅಭಿಮಾನದ ಹೆಸರಲ್ಲಿ ಪ್ರಾಣಿವಧೆ
(Sonu Sood says that poverty and unemployment are the third wave and common man’s are experiencing it)