Sidharth Shukla: ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಬಾಲಿವುಡ್ ತಾರೆಯರ ಸಂತಾಪ

ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಅಪಾರ ಶೋಕ ವ್ಯಕ್ತಪಡಿಸಿದೆ. ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಮನೋಜ್ ಬಾಜಪೇಯಿ, ಶ್ರೇಯಾ ಘೋಶಾಲ್, ಸೋನು ಸೂದ್ ಸೇರಿದಂತೆ ಅನೇಕ ತಾರೆಯರು ಟ್ವೀಟ್ ಮುಖಾಂತರ ಸಂತಾಪ ಸೂಚಿಸಿದ್ದಾರೆ.

Sidharth Shukla: ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಬಾಲಿವುಡ್ ತಾರೆಯರ ಸಂತಾಪ
ಸಿದ್ಧಾರ್ಥ್ ಶುಕ್ಲಾ

ಸಿದ್ಧಾರ್ಥ್ ಶುಕ್ಲಾ ಅವರ ಅಕಾಲಿಕ ನಿಧನಕ್ಕೆ ಬಅಲಿವುಡ್​ನ ಖ್ಯಾತ ತಾರೆಯರಾದಿಯಾಗಿ ಚಿತ್ರರಂಗ ಅಪಾರ ಶೋಕ ವ್ಯಕ್ತಪಡಿಸಿದೆ. ತಮ್ಮ ವಯಸ್ಸಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಸಿದ್ಧಾರ್ಥ್ ಶುಕ್ಲಾ, ಜನಪ್ರಿಯ ಹಿಂದಿ ಬಿಗ್​ಬಾಸ್ 13ರ ವಿಜೇತರಾಗಿದ್ದರು. ಅವರ ನಿಧನಕ್ಕೆ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಮನೋಜ್ ಬಾಜಪೇಯಿ ಸೇರಿದಂತೆ ಖ್ಯಾತ ಬಾಲಿವುಡ್ ತಾರೆಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್ ಖಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಸಿದ್ಧಾರ್ಥ್ ಶುಕ್ಲಾ ಕುರಿತು ಬರೆದುಕೊಂಡಿದ್ದು, ‘ಬೇಗ ಹೋಗಿಬಿಟ್ಟಿರಿ ಸಿದ್ಧಾರ್ಥ್, ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಅವರು ಬರೆದುಕೊಂಡಿದ್ದಾರೆ.

ಬಾಲಿವುಡ್​ನ ಮತ್ತೊಬ್ಬ ಖ್ಯಾತ ನಟ ಅಕ್ಷಯ್ ಕುಮಾರ್ ಕೂಡ ಶೋಕ ವ್ಯಕ್ತಪಡಿಸಿದ್ದಾರೆ. ‘ಸಿದ್ಧಾರ್ಥ್ ನಿಧನರಾಗಿರುವುದನ್ನು ತಿಳಿದು ಅಪಾರ ದುಃಖವಾಗಿದೆ. ಅವರು ವೈಯಕ್ತಿಕವಾಗಿ ಪರಿಚಯವಿರದಿದ್ದರೂ ಕೂಡ, ಅಪಾರ ಪ್ರತಿಭಾವಂತ ವ್ಯಕ್ತಿಯೊಬ್ಬರು ನಿಧನರಾಗಿರುವುದು ದುಃಖ ತಂದಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ನಟ ಮನೋಜ್ ಬಾಜಪೇಯಿ ಸಿದ್ಧಾರ್ಥ್ ನಿಧನಕ್ಕೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ‘ದುಃಖವನ್ನು ವ್ಯಕ್ತಪಡಿಸಲು ಪದಗಳಿಲ್ಲ, ಬಹಳ ಬೇಸರವಾಗಿದೆ’ ಎಂದು ಮನೋಜ್ ಟ್ವೀಟ್ ಮಾಡಿದ್ದಾರೆ.

ಶ್ರೇಯಾ ಘೋಶಾಲ್, ಜಾಕ್ವೆಲಿನ್ ಫರ್ನಾಂಡಿಸ್, ಸೋನು ಸೂದ್, ರಾಜ್​ಕುಮಾರ್ ರಾವ್ ಸೇರಿದಂತೆ ಬಾಲಿವುಡ್​ನ ಹಲವು ಖ್ಯಾತ ಗಾಯಕರು, ತಾರೆಯರು ಸಿದ್ಧಾರ್ಥ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಪಾಸಿಟಿವ್​ ಆಲೋಚನೆಗಳಿರುವ ಪೋಸ್ಟ್​ಗಳ ಮುಖಾಂತರ ಸಿದ್ಧಾರ್ಥ್ ಶುಕ್ಲಾ ಗಮನ ಸೆಳೆಯುತ್ತಿದ್ದರು. ಇಂಥ ನಟ ಏಕಾಏಕಿ ಹೃದಯಾಘಾತಕ್ಕೆ ಒಳಗಾಗಿರುವುದು ಎಲ್ಲರಿಗೂ ಶಾಕ್​ ನೀಡಿದೆ.

ಇದನ್ನೂ ಓದಿ:

Sidharth Shukla Death: ಬಿಗ್​ ಬಾಸ್​ ವಿನ್ನರ್ ಸಿದ್ಧಾರ್ಥ್​ ಶುಕ್ಲಾ ಹೃದಯಾಘಾತದಿಂದ ನಿಧನ​

ಸಿದ್ಧಾರ್ಥ್​ ಶುಕ್ಲಾ ಜೊತೆ ಕೆಲಸ ಮಾಡಿದ್ದ ಸಂಜನಾ ಗಲ್ರಾನಿ; ಜೀವನ ಇಷ್ಟೇನಾ ಎಂದ ನಟಿ

(Bollywood mourn to Sidhdharth Shukla death)

Click on your DTH Provider to Add TV9 Kannada