ಕಷ್ಟಕಾಲದಲ್ಲಿ ಮಾರಿದ್ದ ಪ್ರೀತಿಯ ಕಾರನ್ನು ಹುಡುಕಿ ಇಶಿತಾಗೆ ಗಿಫ್ಟ್​ ಮಾಡಿದ ಪತಿ ಮುರುಗ

‘ಅಗ್ನಿಸಾಕ್ಷಿ’ ಧಾರಾವಾಹಿಯ ಮಾಯಾ ಪಾತ್ರದಲ್ಲಿ ಇಶಿತಾ ನಟಿಸಿದ್ದರು. ಈ ಧಾರಾವಾಹಿಯಿಂದ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು

ಕಷ್ಟಕಾಲದಲ್ಲಿ ಮಾರಿದ್ದ ಪ್ರೀತಿಯ ಕಾರನ್ನು ಹುಡುಕಿ ಇಶಿತಾಗೆ ಗಿಫ್ಟ್​ ಮಾಡಿದ ಪತಿ ಮುರುಗ
ಕಷ್ಟಕಾಲದಲ್ಲಿ ಮಾರಿದ್ದ ಪ್ರೀತಿಯ ಕಾರನ್ನು ಹುಡುಕಿ ಇಶಿತಾಗೆ ಗಿಫ್ಟ್​ ಮಾಡಿದ ಪತಿ ಮುರುಗ

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಇಶಿತಾ ವರ್ಷಾ. ‘ಸ್ವಾರ್ಥ ರತ್ನ’ ಸಿನಿಮಾ ಮೂಲಕ ಅವರು ಹಿರಿತೆರೆಗೂ ಕಾಲಿಟ್ಟರು. ಆದರೆ, ಅವರು ತುಂಬಾನೇ ಇಷ್ಟಪಟ್ಟು ಕೊಂಡುಕೊಂಡಿದ್ದ ಕಾರನ್ನು ಕಷ್ಟ ಕಾಲದಲ್ಲಿ ಮಾರಿದ್ದರು. ಈಗ ಇದೇ ಕಾರನ್ನು ಅವರು ಪತಿ ಮುರುಗ ಗಿಫ್ಟ್​ ಆಗಿ ನೀಡಿದ್ದಾರೆ.

‘ಅಗ್ನಿಸಾಕ್ಷಿ’ ಧಾರಾವಾಹಿಯ ಮಾಯಾ ಪಾತ್ರದಲ್ಲಿ ಇಶಿತಾ ನಟಿಸಿದ್ದರು. ಈ ಧಾರಾವಾಹಿಯಿಂದ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಈ ಕಾರಣಕ್ಕೆ ಅವರಿಗೆ ಸಿನಿಮಾ ಆಫರ್​ ಬಂದಿತ್ತು. ‘ಸ್ವಾರ್ಥ ರತ್ನ’ ಸಿನಿಮಾದಲ್ಲಿ ಇಶಿತಾ ಬಣ್ಣ ಹಚ್ಚಿದ್ದರು. 2019ರಲ್ಲಿ ಅವರು ಬಾಯ್​ಫ್ರೆಂಡ್​ ಮುರುಗ ಮದುವೆ ಆದರು. ಈಗ ಈ ಜೋಡಿ ‘ರಾಜಾ ರಾಣಿ’ ವೇದಿಕೆಗೆ ಬಂದಿದೆ. ಈ ವೇದಿಕೆ ಮೇಲೆಯೇ ಕಾರನ್ನು ಇಶಿತಾಗೆ ಗಿಫ್ಟ್​ ಮಾಡಲಾಗಿದೆ.

ಇಶಿತಾ ಅವರು ಯಾರಿಗೂ ಹೇಳದೆಯೇ ಒಂದು ಕಾರನ್ನು​ ಖರೀದಿ ಮಾಡಿದ್ದರು. ಈ ಕಾರು ಅವರಿಗೆ ವಿಶೇಷವಾಗಿತ್ತು. ಏಕೆಂದರೆ, ತಮ್ಮ ಮತ್ತು ತಾಯಿಯ ಜನ್ಮದಿನವನ್ನು ನಂಬರ್​ಪ್ಲೇಟ್​ ಮೇಲೆ ಹಾಕಿಸಿಕೊಂಡಿದ್ದರು. ಆದರೆ, ಕಷ್ಟ ಕಾಲದಲ್ಲಿ ಈ ಕಾರನ್ನು ಅವರು ಮಾರಿದ್ದರು. ಇದು ಅವರಿಗೆ ತುಂಬಾನೇ ನೋವು ತಂದಿತ್ತು. ಆದರೆ, ಈ ನೋವನ್ನು ಪತಿ ಮುರುಗ ಮರೆಸಿದ್ದಾರೆ.

‘ಒಂದೂವರೆ ವರ್ಷದಿಂದ ಯಾವುದೇ ಗಿಫ್ಟ್​ ನೀಡಿಲ್ಲ. ಈಗ ನಿನಗೆ ವಿಶೇಷ ಗಿಫ್ಟ್​ ಕೊಡುತ್ತಿದ್ದೇನೆ’ ಎಂದಿದ್ದಾರೆ ಮುರುಗ. ಇಶಿತಾಗೆ ಅಂಥ ಗಿಫ್ಟ್​ ಏನಿರಬಹುದು ಎನ್ನುವ ಅಚ್ಚರಿ ಕಾಡಿದೆ. ಕೊನೆಗೆ ಅವರಿಗೆ ಗಿಫ್ಟ್​ ಆಗಿ ಸಿಕ್ಕಿದ್ದು ಅವರೇ ಮಾರಿದ ಕಾರು. ‘ನಿನಗೋಸ್ಕರ ಇದೇ ಕಾರನ್ನು ಹುಡುಕಿ ಮತ್ತೆ ತಂದಿದ್ದೇನೆ’ ಎಂದರು ಮುರುಗ. ಅವರು ಈ ವಿಚಾರ ಹೇಳುತ್ತಿದ್ದಂತೆಯೇ ಕಣ್ಣೀರು ಹಾಕಿದ್ದಾರೆ ಇಶಿತಾ.

ಕಲರ್ಸ್​ ಕನ್ನಡ ವಾಹಿನಿ ಈ ಬಗ್ಗೆ ಪ್ರೋಮೋ ಹಂಚಿಕೊಂಡಿದೆ. ಈ ಪ್ರೋಮೋ ನೋಡಿದ ಅನೇಕರು ಈ ಜೋಡಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೇದಿಕೆ ಮೇಲೆ ಇಷ್ಟೊಂದು ಅದ್ಭುತ ಗಿಫ್ಟ್​ ಸಿಕ್ಕಿರುವುದಕ್ಕೆ ಅಭಿಮಾನಿಗಳು ಕೂಡ ಖುಷಿ ಪಟ್ಟಿದ್ದಾರೆ.

ಇದನ್ನೂ ಓದಿ: ‘ಲೋಕೇಶ್ ಮಗನಾದರೂ ಯಾರ ಮುಂದೆಯೂ ಕೈ ಒಡ್ಡದೇ ಚಾನ್ಸ್​ಗಾಗಿ 14 ವರ್ಷ ಸೈಕಲ್​ ಹೊಡೆದಿದ್ದೇನೆ’; ವೇದಿಕೆ ಮೇಲೆ ಅತ್ತ ಸೃಜನ್​

Click on your DTH Provider to Add TV9 Kannada