ನಿದ್ರೆಯಲ್ಲಿ ಹುಡುಗಿ ಹೆಸರು ಹೇಳಿ ಹೆಂಡತಿ ಬಳಿ ಸಿಕ್ಕಿ ಬಿದ್ದಿದ್ದ ಅಕುಲ್​ ಬಾಲಾಜಿ; ನಂತರ ಉಳಿಸಿದ್ದು ಯಾರು?

ಎಲ್ಲಾ ಸ್ಪರ್ಧಿಗಳ ಜತೆ ಅಕುಲ್​ ಅದ್ಭುತವಾಗಿ ಸಂಭಾಷಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಅಕುಲ್​ ತಮ್ಮ ಸಂಸಾರದಲ್ಲಿ ನಡೆದ ವಿಚಿತ್ರ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

ನಿದ್ರೆಯಲ್ಲಿ ಹುಡುಗಿ ಹೆಸರು ಹೇಳಿ ಹೆಂಡತಿ ಬಳಿ ಸಿಕ್ಕಿ ಬಿದ್ದಿದ್ದ ಅಕುಲ್​ ಬಾಲಾಜಿ; ನಂತರ ಉಳಿಸಿದ್ದು ಯಾರು?
ನಿದ್ರೆಯಲ್ಲಿ ಹುಡುಗಿ ಹೆಸರು ಹೇಳಿ ಹೆಂಡತಿ ಬಳಿ ಸಿಕ್ಕಿ ಬಿದ್ದಿದ್ದ ಅಕುಲ್​ ಬಾಲಾಜಿ; ನಂತರ ಉಳಿಸಿದ್ದು ಯಾರು?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 15, 2021 | 6:05 PM

ಅಕುಲ್​ ಬಾಲಾಜಿ ತಮ್ಮ ನಿರೂಪಣೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಅವರು ಬಿಗ್​ ಬಾಸ್​ ಮಿನಿ ಸೀಸನ್​ಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲಾ ಸ್ಪರ್ಧಿಗಳ ಜತೆ ಅವರು ಅದ್ಭುತವಾಗಿ ಸಂಭಾಷಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಅಕುಲ್​ ತಮ್ಮ ಸಂಸಾರದಲ್ಲಿ ನಡೆದ ವಿಚಿತ್ರ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಳ್ಳುತ್ತಿದ್ದಂತೆ ಬಿಗ್​ ಬಾಸ್​ ಮಿನಿ ಸೀಸನ್​ ಆರಂಭಗೊಂಡಿದೆ. ಕಲರ್ಸ್​ ಕನ್ನಡ ವಾಹಿನಿಯ ಧಾರಾವಾಹಿ ಬಳಗ ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದೆ. ಎಲ್ಲಾ ಸ್ಪರ್ಧಿಗಳು ದೊಡ್ಮನೆಗೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ.  ಈ ಮಧ್ಯೆ ಮನೆಯಲ್ಲಿ ಯಾರೆಲ್ಲ ಗೊರಕೆ ಹೊಡೆಯುತ್ತಾರೆ ಎನ್ನುವ ವಿಚಾರ ಚರ್ಚೆಗೆ ಬಂದಿದೆ. ಈ ವೇಳೆ ಅಕುಲ್​ ಬಾಲಾಜಿ ಅಚ್ಚರಿಯ ವಿಚಾರ ಬಾಯ್ಬಿಟ್ಟಿದ್ದಾರೆ.

‘ನಾನು ಮಲಗಿದ ಮೇಲೆ ಶಬ್ದ ಮಾಡುವುದಿಲ್ಲ. ಆದರೆ, ನಾನು ನಿದ್ರೆಯಲ್ಲಿ ತುಂಬಾ ಮಾತಾಡ್ತೀನಿ. ಇದು ತುಂಬಾನೇ ಸಮಸ್ಯೆ ಆಗಿ ಬಿಟ್ಟಿತ್ತು. ಒಂದು ದಿನ ಸಿನಿಮಾ ಶೂಟಿಂಗ್​ ಮುಗಿಸಿ ಬಂದು ಮಲಗಿದ್ದೆ. ಮುಂಜಾನೆ 4:30 ಹೊತ್ತಿಗೆ ಹೆಂಡತಿ ಅಳುವ ಧ್ವನಿ ಕೇಳಿತು. ಏಕೆ ಅಳುತ್ತಿದ್ದೀಯಾ ಎಂದು ಕೇಳಿದೆ?’ ಎಂದು ಅಂದಿನ ಘಟನೆ ನೆನೆದಿದ್ದಾರೆ ಅಕುಲ್​.

‘ನೀವು ಮಾಧುರಿ ಅಂತ ಹುಡುಗಿ ಹೆಸರು ಹೇಳಿದ್ರಿ. ಯಾರು ಆ ಮಾಧುರಿ? ನನಗೆ ಅವಳು ಯಾರು ಅಂತ ಗೊತ್ತಾಗಬೇಕು ಎಂದು ಪಟ್ಟು ಹಿಡಿದಳು. ಮಾಧುರಿ ಯಾರು ಅಂತಾನೇ ನನಗೆ ಗೊತ್ತಿರಲಿಲ್ಲ. ನಾನು ಹೇಳಿಲ್ಲ ಅಂದೆ. ಆದರೆ, ಹೆಂಡತಿ ಇದನ್ನು ಒಪ್ಪಿಲ್ಲ. ನಂತರ ನಿದ್ದೆಯಲ್ಲಿ ಹೇಳಿದ ಮಾತು ನಿಜವಿರುತ್ತದೆಯೋ ಅಥವಾ ಸುಳ್ಳಾಗಿರುತ್ತದೆಯೋ ಎಂಬುದನ್ನು ನನ್ನ ಹೆಂಡತಿ ಗೂಗಲ್​ನಲ್ಲಿ​ ಸರ್ಚ್​ ಮಾಡಿದಳು. ಆಗ ಸುಳ್ಳು ಎನ್ನುವ ಉತ್ತರ ಗೂಗಲ್​ನಿಂದ ಬಂತು. ಗೂಗಲ್​ ಕಡೆಯಿಂದ ಹೌದು ಎನ್ನುವ ಉತ್ತರ ಬಂದಿದ್ದೆ ನನ್ನ ಸಂಸಾರ ಹಾಳಾಗುತ್ತಿತ್ತು. ಗೂಗಲ್​ ನನ್ನ ಮನೆ ಉಳಿಸಿತು’ ಎಂದಿದ್ದಾರೆ ಅಕುಲ್​ ಬಾಲಾಜಿ. ಈ ವಿಚಾರ ಕೇಳಿ ಮನೆ ಮಂದಿ ನಿಜಕ್ಕೂ ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಪಾಸ್​ ಆದ ಮಂಜು ಕಾಲೇಜಿನಲ್ಲಿ 9 ಬಾರಿ ಪರೀಕ್ಷೆ ಕಟ್ಟಿದರೂ ಪಾಸ್​ ಆಗಲಿಲ್ಲ; ಅವರ ವಿದ್ಯಾರ್ಹತೆ ಏನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ