ಕಿಚ್ಚ ಸುದೀಪ್​ ಜನ್ಮದಿನ: ಬರಬೇಡಿ ಎಂದರೂ ಮನೆ ಬಾಗಿಲಿಗೆ ಬಂದು ಕಾದ ಫ್ಯಾನ್ಸ್​

ಅಭಿಮಾನದ ಭರದಲ್ಲಿ ಕೆಲವರು ಕಿಚ್ಚನ ಮಾತಿಗೆ ಬೆಲೆ ಕೊಟ್ಟಿಲ್ಲ. ಇಂದು (ಸೆ.2) ಸುದೀಪ್​ ಹುಟ್ಟುಹಬ್ಬದ ಪ್ರಯುಕ್ತ ಅವರ ಮನೆ ಮುಂದೆ ಕೆಲವು ಅಭಿಮಾನಿಗಳು ಜಮಾಯಿಸಿದ್ದರು.

ಕೊರೊನಾ ವೈರಸ್​ ಹಾವಳಿ ಇರುವುದರಿಂದ ಸ್ಟಾರ್​ ನಟರು ತಮ್ಮ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳುತ್ತಿಲ್ಲ. ಕಿಚ್ಚ ಸುದೀಪ್​ ಅವರದ್ದು ಕೂಡ ಇದೇ ನಿರ್ಧಾರ. ಹಾಗಾಗಿ ಕೆಲವು ದಿನಗಳ ಮುನ್ನವೇ ಅವರು ಈ ಬಗ್ಗೆ ಅಭಿಮಾನಿಗಳಿಗೆ ಸಂದೇಶ ನೀಡಿದ್ದರು. ಆದರೆ ಅಭಿಮಾನದ ಭರದಲ್ಲಿ ಕೆಲವರು ಕಿಚ್ಚನ ಮಾತಿಗೆ ಬೆಲೆ ಕೊಟ್ಟಿಲ್ಲ. ಇಂದು (ಸೆ.2) ಸುದೀಪ್​ ಹುಟ್ಟುಹಬ್ಬದ ಪ್ರಯುಕ್ತ ಅವರ ಮನೆಯ ಎದುರು ಕೆಲವು ಅಭಿಮಾನಿಗಳು ಜಮಾಯಿಸಿದ್ದರು. ಕೇಕ್​, ಉಡುಗೊರೆಗಳನ್ನು ತಂದು ತಮ್ಮ ನೆಚ್ಚಿನ ನಟನ ದರ್ಶನಕ್ಕಾಗಿ ಕಾದರು.

ಹಲವು ರಾಜ್ಯಗಳಿಂದ ಬಂದ ಅಭಿಮಾನಿಗಳು ಕಿಚ್ಚನನ್ನು ನೋಡಲು ಹಂಬಲಿಸಿದರು. ‘ಪ್ರತಿ ವಿಷಯದಲ್ಲೂ ಸುದೀಪ್​ ಅವರು ನಮಗೆ ಇಷ್ಟ ಆಗುತ್ತಾರೆ. ಜನ್ಮದಿನವನ್ನು ಆಚರಿಸಲು ಬರಬೇಡಿ ಎಂದು ಅವರು ಹೇಳಿದ್ದರು. ಆದರೂ ನಾವು ಅಭಿಮಾನಕ್ಕಾಗಿ ಬಂದಿದ್ದೇವೆ’ ಎಂದು ಫ್ಯಾನ್ಸ್​ ಹೇಳಿದ್ದಾರೆ.

ಇದನ್ನೂ ಓದಿ:

Sudeep Birthday: ಕಿಚ್ಚ ಸುದೀಪ್​ಗೆ ಮುದ್ದು ಮಗಳ ವಿಶ್​; ಅಪ್ಪನ 10 ಗುಣಗಳನ್ನು ಕೊಂಡಾಡಿದ ಸಾನ್ವಿ

ಕಿಚ್ಚ ಸುದೀಪ್​ ಹುಟ್ಟುಹಬ್ಬ; ‘ಅಭಿನಯ ಚಕ್ರವರ್ತಿ’ ಜೀವನದ 10 ಇಂಟರೆಸ್ಟಿಂಗ್​ ವಿಷಯಗಳು ಇಲ್ಲಿವೆ

Click on your DTH Provider to Add TV9 Kannada