22ನೇ ವಯಸ್ಸಿಗೆ ಕಾರು ಓಡಿಸಲಾರಂಭಿಸಿದ್ದ ಸಿದ್ಧಾರ್ಥ್ ಶುಕ್ಲಾಗೂ ಇತ್ತು ದುಬಾರಿ ಕಾರು ಮತ್ತು ಬೈಕ್​ಗಳ ವ್ಯಾಮೋಹ

ತಾರೆಯರು, ಸೆಲಿಬ್ರಿಟಿಗಳು; ಕಾರು, ಬೈಕ್ ಇಲ್ಲವೇ ಗ್ಯಾಜೆಟ್ಗಳ ಬಗ್ಗೆ ವಿಪರೀತ ವ್ಯಾಮೋಹ ಇಟ್ಟುಕೊಂಡಿರುತ್ತಾರೆ. ಅದಕ್ಕೆ ಸಿದ್ಧಾರ್ಥ ಹೊರತಾಗಿರಲಿಲ್ಲ. ಅವರು ಎರಡು ದುಬಾರಿ ಕಾರುಗಳನ್ನಿಟ್ಟುಕೊಂಡಿದ್ದರು.

ಸ್ಫುರದ್ರೂಪಿ, ಅಜಾನುಬಾಹು, ಫಿಟ್ನೆಸ್ ಫ್ರೀಕ್ ಆಗಿದ್ದರಿಂದ ಸಾಮು ಮಾಡಿದ ಮಟ್ಟಸು ದೇಹ, ಹಣ, ಅಂತಸ್ತು, ಜನಪ್ರಿಯತೆ, ಅವಕಾಶಗಳು ಯಾವುದು ಕಮ್ಮಿಯಿತ್ತು ಸಿದ್ಧಾರ್ಥ್ ಶುಕ್ಲಾಗೆ? 40 ಯಾವತ್ತೂ ಸಾಯುವ ವಯಸ್ಸಲ್ಲ, ಅದೂ ಕೂಡ ಹೃದಯಾಘಾತದಿಂದ? ಪ್ರತಿನಿತ್ಯ ಗಂಟಗಟ್ಟಲೆ ಜಿಮ್ನಲ್ಲಿ ದೇಹ ದಂಡಿಸುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾಯುತ್ತಾನೆಂದರೆ, ಹೇಗೆ ನಂಬಲು ಸಾಧ್ಯವಾದೀತು? ಟಿವಿ ಮತ್ತು ಚಿತ್ರಲೋಕಗಳೊಂದಿಗೆ ಜಾಹೀರಾತು ಪ್ರಪಂಚ ಸಹ ಆಘಾತಕ್ಕೊಳಗಾಗಿದೆ. 13 ನೇ ಅವೃತ್ತಿಯ ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರತಿದಿನ ಸಿದ್ಧಾರ್ಥ್ ನನ್ನು ನೋಡುತ್ತಿದ್ದ ವೀಕ್ಷಕರು ಅವರನ್ನು ತಮ್ಮ ಕುಟುಂಬದ ಒಂದು ಭಾಗವಾಗಿ ಪರಿಗಣಿಸಿದ್ದರು, ಅವರಿಗೆಲ್ಲ ಸುಂದರಾಂಗನಾಗಿದ್ದ ಸಿದ್ಧಾರ್ಥ್ ಇನ್ನು ನೆನೆಪು ಮಾತ್ರ.

ತಾರೆಯರು, ಸೆಲಿಬ್ರಿಟಿಗಳು; ಕಾರು, ಬೈಕ್ ಇಲ್ಲವೇ ಗ್ಯಾಜೆಟ್ಗಳ ಬಗ್ಗೆ ವಿಪರೀತ ವ್ಯಾಮೋಹ ಇಟ್ಟುಕೊಂಡಿರುತ್ತಾರೆ. ಅದಕ್ಕೆ ಸಿದ್ಧಾರ್ಥ ಹೊರತಾಗಿರಲಿಲ್ಲ. ಅವರು ಎರಡು ದುಬಾರಿ ಕಾರುಗಳನ್ನಿಟ್ಟುಕೊಂಡಿದ್ದರು. ಒಂದು 78 ಲಕ್ಷ ರೂ. ಬೆಲೆ ಬಾಳುವ ಬಿ ಎಮ್ ಡಬ್ಲ್ಯೂ ಎಕ್ಸ್ 5 ಮತ್ತು 41 ಲಕ್ಷ ರೂ. ಗಳ ಮರ್ಸಿಡಿಸ್ ಎಎಮ್ಜಿ. ಇದಲ್ಲದೆ ಅವರಲ್ಲಿ 15 ಲಕ್ಷ ಬೆಲೆಯ ಸುಜುಕಿ ಹಯಬೂಸಾ ಬೈಕ್ ಅವರಲ್ಲಿ ಇತ್ತು.

ಸಿದ್ದಾರ್ಥ ಅವರ ಆಸ್ತಿಯ ಮೌಲ್ಯ ಸುಮಾರು 15 ಕೋಟಿ ಎಂದು ಹೇಳಲಾಗುತ್ತಿದೆ. ಅವರ ವಾರ್ಷಿಕ ಆದಾಯ ರೂ 2 ಕೋಟಿ ಆಗಿತ್ತು. ಮಾಸಿಕ ಸರಾಸರಿ ಗಳಿಕೆ ರೂ 20 ಲಕ್ಷ ಆಗಿತ್ತು. ಬಿಗ್ ಬಾಸ್ ಸೀಸನ್ 13 ಗೆದ್ದ ನಂತರ ಅವರ ಬೇಡಿಕೆ ಮತ್ತು ಗಳಿಕೆ ಜಾಸ್ತಿಯಾಗಿದ್ದವು.

ತಾವು ಅತಿಯಾಗಿ ಪ್ರೀತಿಸುತ್ತಿದ್ದ ಅಪ್ಪ-ಅಮ್ಮ ತಂದೆ ಅಶೋಕ್ ಶುಕ್ಲಾ-ರೀಟಾ ಶುಕ್ಲಾ ಹಾಗೂ ಮನದನ್ನೆ ಶೆಹನಾಹ್ ಗಿಲ್ ಮತ್ತು ಇಬ್ಬರು ಸಹೋದರರನ್ನು ಇಷ್ಟು ಬೇಗ ಸಿದ್ಧಾರ್ಥ್ ಅಗಲಿ ಹೋಗಿದ್ದಾರೆ.

ಇದನ್ನೂ ಓದಿ:  ಅಂಪೈರ್ ವೈಡ್ ನೀಡದೇ ಇರುವುದಕ್ಕೆ ಕೋಪಗೊಂಡು ಪಿಚ್​ನಿಂದ ದೂರ ಹೋಗಿ ನಿಂತ ಪೊಲಾರ್ಡ್; ವಿಡಿಯೊ ನೋಡಿ

Click on your DTH Provider to Add TV9 Kannada