ಅಂಪೈರ್ ವೈಡ್ ನೀಡದೇ ಇರುವುದಕ್ಕೆ ಕೋಪಗೊಂಡು ಪಿಚ್​ನಿಂದ ದೂರ ಹೋಗಿ ನಿಂತ ಪೊಲಾರ್ಡ್; ವಿಡಿಯೊ ನೋಡಿ

ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ ಕೀರನ್ ಪೊಲಾರ್ಡ್ ಕೆರೆಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಳಪೆ ಅಂಪೈರಿಂಗ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸುದ್ದಿಯಲ್ಲಿದ್ದಾರೆ.

ಅಂಪೈರ್ ವೈಡ್ ನೀಡದೇ ಇರುವುದಕ್ಕೆ ಕೋಪಗೊಂಡು ಪಿಚ್​ನಿಂದ ದೂರ ಹೋಗಿ ನಿಂತ ಪೊಲಾರ್ಡ್; ವಿಡಿಯೊ ನೋಡಿ
ಪಿಚ್​ನಿಂದ ದೂರ ಹೋಗಿ ನಿಂತ ಕೀರನ್ ಪೊಲಾರ್ಡ್
Follow us
TV9 Web
| Updated By: shivaprasad.hs

Updated on:Sep 01, 2021 | 9:31 PM

ವೆಸ್ಟ್ ಇಂಡೀಸ್​ನ ಬ್ಯಾಟಿಂಗ್ ದೈತ್ಯ ಕೀರನ್ ಪೊಲಾರ್ಡ್ ತಮ್ಮ ಆಟದ ಮೂಲಕ ಎಷ್ಟು ಸುದ್ದಿಯಾಗುತ್ತಾರೋ, ನಡವಳಿಕೆಯಿಂದಲೂ ಅಷ್ಟೇ ಸುದ್ದಿಯಾಗುತ್ತಾರೆ. ಮೈದಾನದಲ್ಲಿ ಅಂಪೈರ್ ವಿರುದ್ಧ ಅಸಮಾಧಾನವನ್ನು ತೋರಿಸಲು ಕೂಡ ಅವರು ಹಿಂದೆ ಮುಂದೆ ನೋಡುವುದಿಲ್ಲ. ಈ ಹಿಂದೆ ಐಪಿಎಲ್​ಗಳಲ್ಲೂ ಅವರು ಹೀಗೆ ವರ್ತಿಸಿ ಸುದ್ದಿಯಾಗಿದ್ದಿದೆ. ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​(ಸಿಪಿಎಲ್)ನಲ್ಲೂ, ಕೆಟ್ಟ ಅಂಪೈರಿಂಗ್ ವಿರುದ್ಧ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿ ಸುದ್ದಿಯಾಗಿದ್ದಾರೆ.

ಸಿಪಿಎಲ್​ನಲ್ಲಿ ಪೊಲಾರ್ಡ್ ಟ್ರಿನ್ಬಾಗೋ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸುತ್ತಾರೆ. ಸರಣಿಯ ಒಂಬತ್ತನೇ ಪಂದ್ಯದಲ್ಲಿ ನೈಟ್ ರೈಡರ್ಸ್ ಹಾಗೂ ಲೂಸಿಯಾ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದಿದ್ದ ನೈಟ್ ರೈಡರ್ಸ್, 12ನೇ ಓವರ್ ಮುಕ್ತಾಯದ ವೇಳೆಗೆ 68 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಜೊತೆಯಾದ ಕಪ್ತಾನ ಕೀರನ್ ಪೊಲಾರ್ಡ್ ಹಾಗೂ ಟಿಮ್ ಸೈಫರ್ಟ್ ತಂಡವನ್ನು ಆಧರಿಸಿದರು.

ಡೆತ್ ಓವರ್​ನಲ್ಲಿ ಸಾಧ್ಯವಾದಷ್ಟು ರನ್ ಪೇರಿಸಲು ಪೊಲಾರ್ಡ್, ಸೈಫರ್ಟ್​ ಪ್ರಯತ್ನಿಸುತ್ತಿದ್ದರು. 19ನೇ ಓವರ್​ ಬೌಲ್ ಮಾಡಿದ ವಹಾಬ್ ರಿಯಾಜ್ ತಮ್ಮ ಐದನೇ ಎಸೆತದಲ್ಲಿ ವೈಡ್ ಯಾರ್ಕರ್ ಬೌಲ್ ಮಾಡಲು ಯತ್ನಿಸಿದರು. ಅದು ವೈಡ್ ಲೈನ್​ಗಿಂತ ಆಚೆ ಬಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ಸೈಫರ್ಟ್ ಬಿದ್ದು, ಅದನ್ನು ಹೊಡೆಯಲು ಪ್ರಯತ್ನಿಸಿದರೂ ಅವರಿಗೆ ಬಾಲ್ ಸಿಗಲಿಲ್ಲ. ಆದರೆ ಅಂಪೈರ್ ಅದನ್ನು ವೈಡ್ ಎಂದು ಘೋಷಿಸಲಿಲ್ಲ. ಇದು ನಾನ್​ ಸ್ಟ್ರೈಕರ್ ಎಂಡ್​ನಲ್ಲಿದ್ದ ಪೊಲಾರ್ಡ್​ರನ್ನು ಕೆರಳಿಸಿತು. ಅಸಮಾಧಾನಗೊಂಡ ಪೊಲಾರ್ಡ್ ನೇರವಾಗಿ ಹೋಗಿ 30 ಯಾರ್ಡ್ ಸರ್ಕಲ್​ನ ಸಮೀಪ ನಿಂತುಕೊಂಡರು. ಸದ್ಯ, ಪೊಲಾರ್ಡ್ ಅವರ ಈ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಪೊಲಾರ್ಡ್ ಅಸಮಾಧಾನ ವ್ಯಕ್ತಪಡಿಸಿದ ವಿಡಿಯೊ:

ಪಂದ್ಯದಲ್ಲಿ ಪೊಲಾರ್ಡ್ ಹಾಗೂ ಸೈಫರ್ಟ್ ಆಟದಿಂದಾಗಿ ನೈಟ್ ರೈಡರ್ಸ್ ತಂಡ ಅಂತಿಮವಾಗಿ 158 ರನ್​ ಕಲೆ ಹಾಕಿತು. ನಾಯಕ ಪೊಲಾರ್ಡ್ 29 ಎಸೆತಗಳಲ್ಲಿ 41 ರನ್ ಸಿಡಿಸಿದರೆ, ಸೈಫರ್ಟ್ 25 ಎಸೆತಗಳಲ್ಲಿ 37 ರನ್ ಗಳಿಸಿದರು. ಇವರೀವರ್ವರೂ ಐದನೇ ವಿಕೆಟ್ ಜೊತೆಯಾಟದಲ್ಲಿ 78 ರನ್ ಪೇರಿಸಿದರು.

ಇದನ್ನೂ ಓದಿ:

Afghanistan Cricket: ಅಫ್ಘಾನಿಸ್ತಾನದ ಕ್ರಿಕೆಟ್ ಕುರಿತಾಗಿ ಹೊಸ ಆದೇಶ ಹೊರಡಿಸಿದ ತಾಲಿಬಾನ್

Viral Video: ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗೆ ಎಚ್ಚರಿಕೆ ನೀಡಿದ ಪೊಲಾರ್ಡ್

(Kieron Pollard walks away when umpire denies to give wide in CPL)

Published On - 12:33 pm, Wed, 1 September 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ