ಕೆಬಿಸಿ ವೇದಿಕೆಯಲ್ಲಿ ಒಲಂಪಿಕ್ಸ್ ಪದಕ ವಿಜೇತರಾದ ನೀರಜ್ ಚೋಪ್ರಾ, ಪಿ.ಶ್ರೀಜೇಶ್; ಮೈ ನವಿರೇಳಿಸುವ ಪ್ರೋಮೋ ಇಲ್ಲಿದೆ

Neeraj Chopra: ಟೊಕಿಯೊ ಒಲಂಪಿಕ್ಸ್​ನಲ್ಲಿ ಭಾರತದ ಪದಕದ ರೂವಾರಿಗಳಾದ ನೀರಜ್ ಚೋಪ್ರಾ ಹಾಗೂ ಪಿ.ಶ್ರೀಜೇಶ್ ಕೌನ್ ಬನೇಗಾ ಕರೋಡ್​ಪತಿಯ 13ನೇ ಸೀಸನ್​ನ ಸೆಲೆಬ್ರಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ಚಾನೆಲ್ ನೂತನ ಪ್ರೋಮೋ ಬಿಡುಗಡೆ ಮಾಡಿದ್ದು, ವೀಕ್ಷಕರು ರೋಮಾಂಚನಗೊಂಡಿದ್ದಾರೆ.

ಕೆಬಿಸಿ ವೇದಿಕೆಯಲ್ಲಿ ಒಲಂಪಿಕ್ಸ್ ಪದಕ ವಿಜೇತರಾದ ನೀರಜ್ ಚೋಪ್ರಾ, ಪಿ.ಶ್ರೀಜೇಶ್; ಮೈ ನವಿರೇಳಿಸುವ ಪ್ರೋಮೋ ಇಲ್ಲಿದೆ
ಅಮಿತಾಭ್ ಬಚ್ಚನ್, ಪಿ.ಶ್ರೀಜೇಶ್, ನೀರಜ್ ಚೋಪ್ರಾ

KBC 13: ಕೌನ್ ಬನೇಗಾ ಕರೋಡ್ ಪತಿ(ಕೆಬಿಸಿ) 13ನೇ‌ಸೀಸನ್ ಭರ್ಜರಿಯಾಗಿ ಮೂಡಿಬರುತ್ತಿದೆ. ಈಗಾಗಲೇ ಹಲವು ಖ್ಯಾತ ಸೆಲೆಬ್ರಿಟಿಗಳು ಶುಕ್ರವಾರದ ಸಂಚಿಕೆಯಲ್ಲಿ ಭಾಗವಹಿಸಿ ವೀಕ್ಷಕರ ಮನಗೆದ್ದಿದ್ದಾರೆ. ಕಳೆದ ವಾರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ(Deepika Padukone) ಹಾಗೂ ನಿರ್ದೇಶಕಿ ಫರಾ ಖಾನ್(Farah Khan) ಭಾಗವಹಿಸಿದ್ದರು. ಈ ವಾರ ಯಾವ ಸೆಲೆಬ್ರಿಟಿ‌ ಭಾಗವಹಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ವಾಹಿನಿಯು ನೂತನ‌ ಪ್ರೋಮೋ ಬಿಡುಗಡೆ ಮಾಡಿದ್ದು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳಿಗೆ ರೂವಾರಿಗಳಾದ ಈರ್ವರು ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಾರತಕ್ಕೆ ಬಂಗಾರ ತಂದುಕೊಟ್ಟ ನೀರಜ್ ಚೋಪ್ರಾ(Neeraj Chopra) ಹಾಗೂ ಪುರುಷರ ಹಾಕಿ ತಂಡದ ಗೋಲ್ ಕೀಪರ್ ಪಿ.ಶ್ರೀಜೇಶ್(P.Sreejesh) ಶೋನಲ್ಲಿ ಭಾಗವಹಿಸಲಿದ್ದಾರೆ.

ಅಮಿತಾಭ್ ಬಚ್ಚನ್(Amitabh Bachchan) ನಡೆಸಿಕೊಡುವ ಕೆಬಿಸಿ ಈ ಬಾರಿ ಭರ್ಜರಿಯಾಗಿ ಮೂಡಿಬರುತ್ತಿದೆ. ಪ್ರತಿ‌ ಶುಕ್ರವಾರ ‘ಶಾನ್ದಾರ್ ಶುಕ್ರವಾರ್’ ಎಂಬ ಸಂಚಿಕೆಯಲ್ಲಿ ಸೆಲೆಬ್ರಿಟಿಗಳು ಚಾರಿಟಿಯ ಸಲುವಾಗಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಅದರಲ್ಲಿ ಗೆದ್ದ ಹಣವನ್ನು ವಿವಿಧ ಕಾರ್ಯಗಳಿಗೆ ದಾನ ಮಾಡಲಾಗುತ್ತದೆ. ಈ ಬಾರಿಯ ಕೆಬಿಸಿಯ ಮೊದಲ ವಾರದಲ್ಲಿ ಕ್ರಿಕೆಟ್ ತಾರೆಯರಾದ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು. ಕಳೆದ ವಾರ ದೀಪಿಕಾ ಪಡುಕೋಣೆ ಹಾಗೂ ಫರಾ ಖಾನ್ ಭಾಗವಹಿಸಿದ್ದರು. ಈ ವಾರ ಭಾರತಕ್ಕೆ ಅಥ್ಲೆಟಿಕ್ಸ್ ನಲ್ಲಿ ಮೊದಲ ಪದಕ ತಂದುಕೊಟ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹಾಗೂ ಭಾರತದ ಪುರುಷರ ಹಾಕಿ ತಂಡದ ಗೋಲ್ ಕೀಪರ್ ಪಿ.ಶ್ರೀಜಿತ್ ಭಾಗವಹಿಸಲಿದ್ದಾರೆ. ಚಾನೆಲ್ ಬಿಡುಗಡೆ ಮಾಡಿರುವ ಪ್ರೋಮೊ ವೀಕ್ಷಕರ ಮೈನವಿರೇಳಿಸುವಂತಿದೆ.

ಚಾನೆಲ್ ಬಿಡುಗಡೆ ಮಾಡಿರುವ ರೋಮಾಂಚನಕಾರಿ ಪ್ರೋಮೋ:

ಚಾನೆಲ್ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ನೀರಜ್ ಹಾಗೂ ಶ್ರೀಜೇಶ್ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಣ್ಣ ತುಣುಕಿದೆ. ಅವರ ಆಗಮನದ ವೇಳೆ ಅಮಿತಾಭ್ ಬಚ್ಚನ್ ‘ಹಿಂದೂಸ್ತಾನ್ ಜಿಂದಾಬಾದ್’ ಎಂದು ರೋಮಾಂಚನದಿಂದ ಘೋಷಣೆಗಳನ್ನು ಕೂಗುವ ದೃಶ್ಯವಿದೆ. ಇದನ್ನು ನೋಡಿರುವ ವೀಕ್ಷಕರು ಸಖತ್ ಥ್ರಿಲ್ ಆಗಿದ್ದು, ಈ ವಾರ ಭರ್ಜರಿ ಮನೋರಂಜನೆ ಖಂಡಿತಾ ಎಂಬ ಸಂತಸದಲ್ಲಿದ್ದಾರೆ. ಈ ಕಾರ್ಯಕ್ರಮವು ಪ್ರತಿ ಶುಕ್ರವಾರ ರಾತ್ರಿ 9ಕ್ಕೆ ಸೋನಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ:

ಸೋತು ಸುಣ್ಣವಾದ ಶಾರುಖ್​ಗೆ ಈಗ ಓಟಿಟಿ ಅನಿವಾರ್ಯ; ಸತ್ಯ ಒಪ್ಪಿಕೊಂಡು ವಿಡಿಯೋ ಶೇರ್​ ಮಾಡಿದ ನಟ

‘ಚಿತ್ರರಂಗ ಪ್ರವೇಶಿಸಿ ಕುಟುಂಬದ ಗೌರವ ಹಾಳು ಮಾಡುತ್ತಿ’ ಎಂದ ತಂದೆಗೆ ಮಗಳ ಉತ್ತರವೇನು?; ಇದು ಮಲ್ಲಿಕಾ ಯಶಸ್ಸಿನ ಕತೆ

(Neeraj Chopra and P Sreejesh will appear on KBC 13 reveals new promo)

Published On - 1:09 pm, Sun, 12 September 21

Click on your DTH Provider to Add TV9 Kannada