‘ಚಿತ್ರರಂಗ ಪ್ರವೇಶಿಸಿ ಕುಟುಂಬದ ಗೌರವ ಹಾಳು ಮಾಡುತ್ತಿ’ ಎಂದ ತಂದೆಗೆ ಮಗಳ ಉತ್ತರವೇನು?; ಇದು ಮಲ್ಲಿಕಾ ಯಶಸ್ಸಿನ ಕತೆ

Mallika Sherawath: ಬಾಲಿವುಡ್​ನ ಖ್ಯಾತ ನಟಿಯರಲ್ಲೊಬ್ಬರಾದ ಮಲ್ಲಿಕಾ ಶೆರಾವತ್ ಚಿತ್ರರಂಗಕ್ಕೆ ಪ್ರವೇಶಿಸುವ ಮುನ್ನ, ತಂದೆಯಿಂದ ಬಹಳ ವಿರೋಧವನ್ನು ಎದುರಿಸಬೇಕಾಯಿತು. ಅದನ್ನು ಮೀರಿ ಬೆಳೆದ ಪರಿಯನ್ನು ಅವರು ಸಂದರ್ಶನವೊಂದರಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

‘ಚಿತ್ರರಂಗ ಪ್ರವೇಶಿಸಿ ಕುಟುಂಬದ ಗೌರವ ಹಾಳು ಮಾಡುತ್ತಿ’ ಎಂದ ತಂದೆಗೆ ಮಗಳ ಉತ್ತರವೇನು?; ಇದು ಮಲ್ಲಿಕಾ ಯಶಸ್ಸಿನ ಕತೆ
ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್
Follow us
TV9 Web
| Updated By: shivaprasad.hs

Updated on:Sep 12, 2021 | 12:40 PM

ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸನ್ನು ಹೊಂದಿರುವವರಿಗೆ ಯಶಸ್ಸು ಸುಲಭವಾಗಿ ಲಭ್ಯವಾಗುವುದಿಲ್ಲ. ಕಾರಣ, ಈ ಹಾದಿಯ ಪ್ರಾರಂಭದಲ್ಲೇ ತಂದೆ- ತಾಯಿ, ಕುಟುಂಬದವರ ಮಾತುಗಳು ಅಡ್ಡಿಯಾಗುವ ಸಂದರ್ಭಗಳೂ ಇವೆ. ಕೆಲವರು ಇದನ್ನು ಧೈರ್ಯದಿಂದ ಎದುರಿಸಿ ಸಾಧಿಸಿ ತೋರಿಸುತ್ತಾರೆ.‌ಮತ್ತೆ ಕೆಲವರಿಗೆ ಚಿತ್ರರಂಗ ಪ್ರವೇಶಿಸಿದರೂ ಕೂಡ, ಅಲ್ಲಿನ ಪಯಣ ಸುಲಭವಾಗಿರುವುದಿಲ್ಲ. ಈ‌ ಎಲ್ಲಾ ಅಡೆತಡೆಗಳನ್ನು ಮೀರಿ ಕೆಲವೇ ಕೆಲವರು ವೃತ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ ಮತ್ತು ಹಲವು ವರ್ಷಗಳ ಕಾಲ ಸತತವಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿರುತ್ತಾರೆ. ಅಂತಹ ಸಾಲಿನಲ್ಲಿ ನಿಲ್ಲಬಲ್ಲ ಬಾಲಿವುಡ್ ನ ನಟಿಯರಲ್ಲಿ ಮಲ್ಲಿಕಾ ಶೆರಾವತ್ ಕೂಡ ಒಬ್ಬರು. ಚಿತ್ರರಂಗ ಪ್ರವೇಶಿಸುವಾಗ ತಂದೆ ವ್ಯಕ್ತಪಡಿಸಿದ್ದ ವಿರೋಧವನ್ನು ಅವರು ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ.

ಬಾಲಿವುಡ್‌ನಲ್ಲಿ ನಾಯಕಿಯಾಗಿ ಮಿಂಚಬೇಕು ಎಂಬುದು ಮಲ್ಲಿಕಾ ಅವರ ಕನಸಾಗಿತ್ತು. ಆದರೆ ಅವರ ತಂದೆಗೆ ಇದು ಎಳ್ಳಷ್ಟೂ ಇಷ್ಟವಿರಲಿಲ್ಲ. ಅವರು ಮಲ್ಲಿಕಾ ಬಾಲಿವುಡ್ ಪ್ರವೇಶಿಸಿದರೆ ತಮ್ಮ‌ ಕುಟುಂಬದ ಪ್ರತಿಷ್ಠೆ ಹಾಳಾಗುತ್ತದೆ ಎಂದು ಭಾವಿಸಿದ್ದರು. ವಾಸ್ತವವಾಗಿ ಮಲ್ಲಿಕಾ ಅವರ ಮೂಲ‌ ಹೆಸರು ರೀಮಾ ಲಂಬಾ. ಆದರೆ ತಂದೆ ಚಿತ್ರರಂಗಕ್ಕೆ ತೆರಳಲು ಆಕ್ಷೇಪ ವ್ಯಕ್ತಪಡಿಸಿದಾಗ ದಿಟ್ಟ ನಿರ್ಧಾರ ಕೈಗೊಂಡ ಮಲ್ಲಿಕಾ, ತಂದೆಯ ಕುಟುಂಬದ ಹೆಸರನ್ನೇ ಬಿಡಲು ಸಿದ್ಧರಾದರು. ಅವರ ಹೆಸರಿನಲ್ಲಿರುವ ‘ಶೆರಾವತ್’ ಮಲ್ಲಿಕಾರ ತಾಯಿಯವರ ಕುಟುಂಬದ್ದು. ಅದನ್ನೇ ತಾನು ಹೆಸರಿನಲ್ಲಿ ಇಟ್ಟುಕೊಳ್ಳುತ್ತೇನೆ ಎಂದ ಮಲ್ಲಿಕಾ, ರೀಮಾ ಲಂಬಾ ಇಂದ ‘ಮಲ್ಲಿಕಾ ಶೆರಾವತ್’ ಆಗಿ ಬದಲಾದರು.

ಈ ಕುರಿತು ಅವರು ಬಾಲಿವುಡ್ ಬಬಲ್ ಗೆ ನೀಡಿದ್ದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. “ನಾನು‌ ಚಿತ್ರರಂಗ ಪ್ರವೇಶಿಸುತ್ತೇನೆ ಎಂದಾಗ ತಂದೆ ಕುಟುಂಬದ ಹೆಸರನ್ನು ಹಾಳು ಮಾಡುತ್ತೀಯ ಎಂದು ಆಕ್ಷೇಪಿಸಿದರು. ಜೊತೆಗೆ ನಿನ್ನನ್ನು ಕುಟುಂಬದಿಂದ ಕೈ ಬಿಡುತ್ತೇನೆ ಎಂದು ಹೆದರಿಸಿದರು. ಪುರುಷ ಪ್ರಧಾನ ಸಮಾಜದ ವಿರುದ್ಧ ನಿಂತ ನಾನು, ತಂದೆಗೆ ಸ್ಪಷ್ಟವಾಗಿ ನಿಮ್ಮ ಹೆಸರನ್ನೇ ನಾನು ಬಿಟ್ಟಿದ್ದೇನೆ ಎಂದೆ. ನಿಮ್ಮನ್ನು(ತಂದೆ) ಗೌರವಿಸುತ್ತೇನೆ, ಪ್ರೀತಿಸುತ್ತೇನೆ. ಆದರೆ ಹೆಸರಿನಲ್ಲಿ ನನ್ನ ತಾಯಿಯ ನಾಮಧೇಯವನ್ನು ಬಳಸುತ್ತೇನೆ” ಎಂದಿದ್ದ ಮಲ್ಲಿಕಾ ಅದರಂತೆ, ಹೆಸರನ್ನು ಬದಲಾಯಿಸಿಕೊಂಡು ಬಾಲಿವುಡ್ ಪ್ರವೇಶಿಸಿದರು.

Mallika Sherawath

ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್

ಬಾಲಿವುಡ್ ಪ್ರವೇಶದ ನಂತರ ಅವರಿಗೆ ತಕ್ಷಣ ಬಹಳ ದೊಡ್ಡ ಹೆಸರೇನೂ ಸಿಗಲಿಲ್ಲ. ಆದರೆ ಇಮ್ರಾನ್ ಹಶ್ಮಿಯೊಂದಿಗೆ ನಟಿಸಿದ ‘ಮರ್ಡರ್’ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಮಲ್ಲಿಕಾ ಬಿಟೌನ್ ನಲ್ಲಿ ಸಖತ್ ಸುದ್ದಿ ಮಾಡಿದರು. ಅಲ್ಲಿಂದ ಅವರು ಸತತವಾಗಿ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಚಿತ್ರರಂಗದ ಯಶಸ್ಸಿನ ನಂತರ ಕುಟುಂಬ ಮಲ್ಲಿಕಾರನ್ನು ಸ್ವೀಕರಿಸಿದೆಯೇ ಎಂಬ ಪ್ರಶ್ನೆ ಸಹಜ. ಇದಕ್ಕೂ ಮಲ್ಲಿಕಾ ಒಂದು ಸಂದರ್ಶನದಲ್ಲಿ ಉತ್ತರಿಸಿದ್ದರು.

“ಕುಟುಂಬದವರು ನನ್ನನ್ನು ತಕ್ಷಣ ಒಪ್ಪಿಕೊಳ್ಳಲಿಲ್ಲ. ಈಗಲೂ ಅಸಮಾಧಾನವಿದೆ. ಹಾಗಂತ ವಯಸ್ಸಾದಂತೆ ಎಲ್ಲರೂ ಮೃದುವಾಗತ್ತಾರಲ್ಲ. ಹಾಗೆಯೇ ನಮ್ಮ ಕುಟುಂಬದಲ್ಲೂ ಆಗಿದೆ” ಎಂದು ನಸು ನಕ್ಕಿದ್ದರು. ಮಲ್ಲಿಕಾ ಬತ್ತಳಿಕೆಯಲ್ಲಿ ಪ್ರಸ್ತುತ ಹಲವು ಚಿತ್ರಗಳು, ಸೀರೀಸ್ ಗಳು ಇವೆ. ಒಟಿಟಿಗೆ ತಯಾರಾಗುತ್ತಿರುವ ‘ನಕಾಬ್’ನಲ್ಲೂ ಅವರು ಬಣ್ಣ ಹಚ್ಚುತ್ತಿದ್ದಾರೆ.

ಇದನ್ನೂ ಓದಿ:

ಸನ್ನಿ ಲಿಯೋನ್​ ಮನೆಯಲ್ಲಿ ಗಣಪತಿ ಹಬ್ಬದ ಸಂಭ್ರಮ; ಫ್ಯಾಮಿಲಿ ಸಡಗರಕ್ಕೆ ಈ ಪೋಟೋಗಳೇ ಸಾಕ್ಷಿ

ನರೇಂದ್ರ ಮೋದಿ, ರಜನಿಕಾಂತ್, ಅಕ್ಷಯ್ ಕುಮಾರ್ ನಂತರ ಭಾರತದ ಮತ್ತಿಬ್ಬರು ಸೆಲೆಬ್ರಿಟಿಗಳು ‘ಇನ್​ಟು ದಿ ವೈಲ್ಡ್​​’ನಲ್ಲಿ!

(Mallika sherawath opens up about her name changing when her dad opposes to enter film industry)

Published On - 12:37 pm, Sun, 12 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ