‘ಪರಮ ಸುಂದರಿ’ ಮನೆ ಸೇರಿತು 2.4 ಕೋಟಿ ರೂ. ಕಾರು; ‘ಮಿಮಿ’ ಗೆದ್ದ ಬಳಿಕ ಬದಲಾಯ್ತು ಕೃತಿ ಬದುಕು

‘ಮರ್ಸಿಡಿಸ್​ ಮೇಬ್ಯಾಕ್​ ಜಿಎಲ್​ಎ 600’ ಕಾರನ್ನು ಕೃತಿ ಸನೋನ್ ಖರೀದಿಸಿದ್ದಾರೆ. ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸ್ಟಾರ್​ ನಟರ ಮನೆಯಲ್ಲಿ ಮಾತ್ರ ಈ ಕಾರು ಇದೆ.

‘ಪರಮ ಸುಂದರಿ’ ಮನೆ ಸೇರಿತು 2.4 ಕೋಟಿ ರೂ. ಕಾರು; ‘ಮಿಮಿ’ ಗೆದ್ದ ಬಳಿಕ ಬದಲಾಯ್ತು ಕೃತಿ ಬದುಕು
ಕೃತಿ ಸನೋನ್
Follow us
TV9 Web
| Updated By: ಮದನ್​ ಕುಮಾರ್​

Updated on:Sep 12, 2021 | 3:11 PM

ಬಾಲಿವುಡ್​ ನಟಿ ಕೃತಿ ಸನೋನ್​ ಅವರು ಈಗ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ ‘ಮಿಮಿ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದ ಈ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರು ಶಹಭಾಷ್​ ಎಂದಿದ್ದಾರೆ. ಬಾಡಿಗೆ ತಾಯಿ ಪಾತ್ರದಲ್ಲಿ ಅವರ ಅಭಿನಯಕ್ಕೆ ಎಲ್ಲರಿಂದ ಮೆಚ್ಚುಗೆ ಕೇಳಿಬಂದಿದೆ. ಇದೇ ಸಿನಿಮಾದ ‘ಪರಮ ಸುಂದರಿ’ ಹಾಡು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಎಲ್ಲ ಖುಷಿಗಳ ನಡುವೆ ಕೃತಿ ಮನೆಗೆ ಹೊಸ ಕಾರು ಬಂದಿದೆ. ಬರೋಬ್ಬರಿ 2.43 ಕೋಟಿ ರೂ. ಬೆಲೆ ಬಾಳುವ ಐಷಾರಾಮಿ ಕಾರನ್ನು ಅವರು ಖರೀದಿಸಿದ್ದಾರೆ. ಅದು ಈಗ ಎಲ್ಲರ ಕಣ್ಣು ಕುಕ್ಕುತ್ತಿದೆ.

‘ಮರ್ಸಿಡಿಸ್​ ಮೇಬ್ಯಾಕ್​ ಜಿಎಲ್​ಎ 600’ ಕಾರನ್ನು ಕೃತಿ ಖರೀದಿಸಿದ್ದಾರೆ. ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸ್ಟಾರ್​ ನಟರ ಮನೆಯಲ್ಲಿ ಮಾತ್ರ ಈ ಕಾರು ಇದೆ. ಈ ಮೊದಲು ರಣವೀರ್​ ಸಿಂಗ್, ಅರ್ಜುನ್​ ಕಪೂರ್​ ಅವರು ‘ಮರ್ಸಿಡಿಸ್​ ಮೇಬ್ಯಾಕ್​ ಜಿಎಲ್​ಎ 600’ ಖರೀದಿಸಿದ್ದರು. ಈಗ ಅವರ ಸಾಲಿಗೆ ಕೃತಿ ಕೂಡ ಸೇರ್ಪಡೆ ಆಗಿದ್ದಾರೆ. ಇತ್ತೀಚೆಗೆ ಮೆಕಾಡ್​ ಫಿಲ್ಸ್ಮ್​ ನಿರ್ಮಾಣ ಸಂಸ್ಥೆಯ ಆಫೀಸ್​ಗೆ ಕೃತಿ ಸನೋನ್​ ಭೇಟಿ ನೀಡಿದ್ದರು. ಆಗ ಇದೇ ಕಾರಿನಲ್ಲಿ ಅವರು ಬಂದಿದ್ದರು. ಅದನ್ನು ಕಂಡು ಎಲ್ಲರೂ ಹುಬ್ಬೇರಿಸಿದ್ದಾರೆ.

‘ಮಿಮಿ ಚಿತ್ರದ ಯಶಸ್ಸಿನಿಂದ ಕೃತಿಗೆ ತುಂಬ ಖುಷಿ ಆಯಿತು. ಹಾಗಾಗಿ ಏನಾದರೂ ಅಮೂಲ್ಯವಾದದ್ದನ್ನು ಖರೀದಿಸಲು ಅವರು ನಿರ್ಧರಿಸಿದರು. ಈ ಕಾರು ಕೊಂಡುಕೊಳ್ಳಬೇಕು ಎಂಬುದು ಅವರ ಬಹುದಿನಗಳ ಕನಸಾಗಿತ್ತು. ಅದೀಗ ನನಸಾಗಿದೆ’ ಎಂದು ಅವರ ಆಪ್ತರು ಹೇಳಿದ್ದಾರೆ. ಮಿಮಿ ಚಿತ್ರ ಗೆದ್ದ ಬಳಿಕ ಅವರ ಡಿಮ್ಯಾಂಡ್​ ಕೂಡ ಹೆಚ್ಚಿದೆ. ಕೃತಿಯ ಕಾಲ್​ಶೀಟ್​ ಪಡೆಯಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ಯಾವುದೇ ಸ್ಟಾರ್​ ನಟ ಇಲ್ಲದಿದ್ದರೂ ಸಿನಿಮಾವನ್ನು ಸೂಪರ್​ ಹಿಟ್​ ಮಾಡಿಸಬಲ್ಲ ಸಾಮರ್ಥ್ಯ ತಮಗೆ ಇದೆ ಎಂಬುದನ್ನು ‘ಮಿಮಿ’ ಮೂಲಕ ಕೃತಿ ಸಾಬೀತು ಪಡಿಸಿದ್ದಾರೆ.

ಸದ್ಯ ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ನಟಿಸುತ್ತಿರುವ ‘ಆದಿಪುರುಷ್​’ ಚಿತ್ರಕ್ಕೆ ಕೃತಿ ಸನೋನ್​ ನಾಯಕಿ. ಅಕ್ಷಯ್​ ಕುಮಾರ್​ ನಾಯಕತ್ವದ ‘ಬಚ್ಚನ್​ ಪಾಂಡೆ’, ‘ಗಣಪತ್​’, ‘ಹಮ್​ ದೋ ಹಮಾರೇ ದೋ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ:

‘ಪರಮ ಸುಂದರಿ’ ಹಾಡಿನಿಂದ ಮಿಂಚುತ್ತಿರುವ ನಟಿ ಕೃತಿ ಸನೋನ್​ ಸಂಭಾವನೆ ಎಷ್ಟು? ಇಲ್ಲಿವೆ ಇಂಟರೆಸ್ಟಿಂಗ್​ ವಿಷಯಗಳು

ಸ್ಪ್ರಿಂಗ್​ನಂತೆ ಸೊಂಟ ಬಳುಕಿಸುವ ಕೃತಿ ಸನೋನ್​ಗೆ ಖಾರವಾಗಿ ಬೈದಿದ್ದ ಕೊರಿಯೋಗ್ರಾಫರ್​

Published On - 1:50 pm, Sun, 12 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ