AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪ್ರಿಂಗ್​ನಂತೆ ಸೊಂಟ ಬಳುಕಿಸುವ ಕೃತಿ ಸನೋನ್​ಗೆ ಖಾರವಾಗಿ ಬೈದಿದ್ದ ಕೊರಿಯೋಗ್ರಾಫರ್​

ಕೃತಿ ಮಾಡೆಲಿಂಗ್​ನಲ್ಲಿ ಗುರುತಿಸಿಕೊಂಡು ನಂತರ ಚಿತ್ರರಂಗಕ್ಕೆ ಬಂದವರು. ಮಾಡೆಲಿಂಗ್​ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು ಅವರು. ಆದರೆ, ಆರಂಭದಲ್ಲಿ ಕೃತಿ ಕಷ್ಟಗಳನ್ನು ಎದುರಿಸಿದ್ದರು.

ಸ್ಪ್ರಿಂಗ್​ನಂತೆ ಸೊಂಟ ಬಳುಕಿಸುವ ಕೃತಿ ಸನೋನ್​ಗೆ ಖಾರವಾಗಿ ಬೈದಿದ್ದ ಕೊರಿಯೋಗ್ರಾಫರ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Aug 29, 2021 | 11:05 PM

Share

ಬಾಲಿವುಡ್​ ನಟಿ ಕೃತಿ ಸನೋನ್​ ನಟನೆಯ ಜತೆಗೆ ನೃತ್ಯದ ಮೂಲಕವೂ ಸುದ್ದಿ ಮಾಡಿದ್ದಾರೆ. ‘ಮಿಮಿ’ ಚಿತ್ರದ ‘ಪರಮ ಸುಂದರಿ..’ ಹಾಡಿನಲ್ಲಿ ಅವರ ಡ್ಯಾನ್ಸ್​ ಮೆಚ್ಚಿಕೊಳ್ಳದವರಿಲ್ಲ. ಸದ್ಯ, ಈ ಹಾಡು ಸಾಕಷ್ಟು ವೈರಲ್​ ಆಗಿದೆ. ಇನ್ನು, ಕೃತಿ ಡ್ಯಾನ್ಸ್​ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಡ್ಯಾನ್ಸ್​ನಲ್ಲಿ ಪಳಗಿರುವ ಅವರು ಈ ಮೊದಲು ಕೊರಿಯೋಗ್ರಾಫರ್​​​​ನಿಂದ ಬೈಸಿಕೊಂಡಿದ್ದರು. ಅವರು ಸರಿಯಾಗಿ ಹೆಜ್ಜೆ ಹಾಕಿರಲಿಲ್ಲ ಎಂಬುದೇ ಇದಕ್ಕೆ ಕಾರಣ.

ಕೃತಿ ಮಾಡೆಲಿಂಗ್​ನಲ್ಲಿ ಗುರುತಿಸಿಕೊಂಡು ನಂತರ ಚಿತ್ರರಂಗಕ್ಕೆ ಬಂದವರು. ಮಾಡೆಲಿಂಗ್​ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು ಅವರು. ಆದರೆ, ಆರಂಭದಲ್ಲಿ ಕೃತಿ ಕಷ್ಟಗಳನ್ನು ಎದುರಿಸಿದ್ದರು. ಸುಮಾರು 20 ಮಾಡೆಲ್​ಗಳ ಎದುರು ಕೃತಿಗೆ ಕೊರಿಯೋಗ್ರಾಫರ್​ನಿಂದ ಅವಮಾನವಾಗಿತ್ತು. ಈ ಬಗ್ಗೆ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಅದು ನನ್ನ ಮೊದಲ ರ್ಯಾಂಪ್​ ಶೋ. ನಾನು ಹೆಜ್ಜೆ ತಪ್ಪಿದ್ದೆ. ಕೋರಿಯೋಗ್ರಾಫರ್​ ಹೇಳಿದ್ದಕ್ಕೆ ವಿರುದ್ಧವಾಗಿ ಮಾಡಿದ್ದೆ. ಅವರು ತುಂಬಾನೇ ಸಿಟ್ಟಾದರು. 20 ಮಾಡೆಲ್​ಗಳ ಎದುರು ನನ್ನನ್ನು ಬೈದಿದ್ದರು. ಯಾರಾದರೂ ನನ್ನನ್ನು ಬೈದರೆ ನಾನು ಅಳೋಕೆ ಪ್ರಾರಂಭಿಸುತ್ತೇನೆ. ಅಂದು ಕೂಡ ನಾನು ಗಳಗಳನೆ ಅತ್ತಿದ್ದೆ’ ಎಂದರು ಕೃತಿ.

‘ಆಟೋದಲ್ಲಿ ಅಂದು ನಾನು ಮನೆಗೆ ತೆರಳಿದ್ದೆ. ದಾರಿಯುದ್ದಕೂ ಅಳುತ್ತಲೇ ಇದ್ದೆ. ನಾನು ಅಮ್ಮನ ಎದುರು ಕುಳಿತು ಅತ್ತಿದೆ. ನಿನಗೆ ಈ ವೃತ್ತಿ ಸರಿ ಹೊಂದುತ್ತದೆಯೋ ಎಂಬುದು ನನಗೆ ಗೊತ್ತಿಲ್ಲ. ಆದರೆ, ಮಾನಸಿಕವಾಗಿ ನೀನು ಗಟ್ಟಿ ಆಗಬೇಕು ಎಂದು ಅಮ್ಮ ಹುರಿದುಂಬಿಸಿದ್ದರು’ ಎಂದಿದ್ದಾರೆ ಅವರು.

2014ರಲ್ಲಿ ತೆರೆಗೆ ಬಂದ ತೆಲುಗಿನ ‘1: ನೆನೊಕ್ಕಡಿನೆ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ಕೃತಿ. ಅದೇ ವರ್ಷ ತೆರೆಗೆ ಬಂದ ‘ಹೀರೋಪಂತಿ’ ಸಿನಿಮಾ ಕೃತಿಗೆ ಹೆಸರು ತಂದುಕೊಟ್ಟಿತು. ಈ ವರ್ಷ ಒಟಿಟಿಯಲ್ಲಿ ರಿಲೀಸ್​ ಆದ ‘ಮಿಮಿ’ ಸಿನಿಮಾ ದೊಡ್ಡಮಟ್ಟದಲ್ಲಿ ಹೆಸರು ಮಾಡಿದೆ. ಸದ್ಯ, ಅವರ ಕೈಯಲ್ಲಿ ನಾಲ್ಕು ಹಿಂದಿ ಚಿತ್ರಗಳಿವೆ. ಇದರಲ್ಲಿ ಕೆಲ ಸಿನಿಮಾಗಳ ಕೆಲಸಗಳು ಪೂರ್ಣಗೊಂಡಿದ್ದು, ರಿಲೀಸ್​ಗೆ  ರೆಡಿ ಇದೆ.

ಇದನ್ನೂ ಓದಿ: ‘ಪರಮ ಸುಂದರಿ’ ಹಾಡಿನಿಂದ ಮಿಂಚುತ್ತಿರುವ ನಟಿ ಕೃತಿ ಸನೋನ್​ ಸಂಭಾವನೆ ಎಷ್ಟು? ಇಲ್ಲಿವೆ ಇಂಟರೆಸ್ಟಿಂಗ್​ ವಿಷಯಗಳು

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ