ಪತಿ ರಾಜ್ ಕುಂದ್ರಾಗೆ ವಿಚ್ಛೇದನ ನೀಡ್ತಾರಾ ಶಿಲ್ಪಾ ಶೆಟ್ಟಿ? ಮಕ್ಕಳ ಭವಿಷ್ಯಕ್ಕಾಗಿ ದೊಡ್ಡ ನಿರ್ಧಾರ ಸಾಧ್ಯತೆ
ಶಿಲ್ಪಾ ಶೆಟ್ಟಿ ಆಪ್ತರು ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಶಿಲ್ಪಾ ಶೆಟ್ಟಿಗೆ ಈ ಬೆಳವಣಿಗೆಯನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ.
ಉದ್ಯಮಿ ರಾಜ್ ಕುಂದ್ರಾ ಕಾಮಕಾಂಡದಿಂದ ಶಿಲ್ಪಾ ಶೆಟ್ಟಿ ತುಂಬಾನೇ ಅಪ್ಸೆಟ್ ಆಗಿದ್ದಾರೆ. ಪತಿ ಮಾಡುತ್ತಿದ್ದ ಉದ್ಯಮದ ಅರಿವಿರಲಿಲ್ಲ ಎಂದು ಶಿಲ್ಪಾ ಶೆಟ್ಟಿ ಪೊಲೀಸರ ಬಳಿ ಹೇಳಿಕೆ ನೀಡಿದ್ದರು. ಈಗ ರಾಜ್ ಕುಂದ್ರಾ ಅಸಲಿ ಮುಖ ಒಂದೊಂದಾಗಿಯೇ ಕಳಚುತ್ತಿರುವುದು ಶಿಲ್ಪಾ ಅವರನ್ನು ಕುಗ್ಗಿಸುತ್ತಿದೆ. ಇನ್ನು, ಮಕ್ಕಳ ಭವಿಷ್ಯದ ಚಿಂತೆ ಶಿಲ್ಪಾಗೆ ಕಾಡಿದೆ. ಈ ಕಾರಣಕ್ಕೆ ಪತಿಯಿಂದ ಬೇರೆ ಆಗಲು ಅವರು ಚಿಂತನೆ ನಡೆಸಿದ್ದಾರೆ ಎನ್ನುವ ವರದಿ ಬಿತ್ತರವಾಗಿದೆ.
ಶಿಲ್ಪಾ ಶೆಟ್ಟಿ ಆಪ್ತರು ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಶಿಲ್ಪಾ ಶೆಟ್ಟಿಗೆ ಈ ಬೆಳವಣಿಗೆಯನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಇನ್ನು, ಶಿಲ್ಪಾ-ರಾಜ್ ಮಕ್ಕಳು ಈಗಿನ್ನೂ ಸಣ್ಣವರು. ಮುಂದೆ ಅವರ ಭವಿಷ್ಯ ಉತ್ತಮವಾಗಿರಬೇಕು ಎಂದಾದರೆ, ಪತಿಯಿಂದ ದೂರ ಉಳಿಯಲೇಬೇಕಾದ ಅನಿವಾರ್ಯತೆ ಶಿಲ್ಪಾಗೆ ಎದುರಾಗಿದೆ ಎನ್ನುತ್ತಿವೆ ಮೂಲಗಳು.
ರಾಜ್ ಕುಂದ್ರಾ ಸದ್ಯ ಜೈಲಿನಲ್ಲಿದ್ದಾರೆ. ಅವರು ಎಲ್ಲಾ ರೀತಿಯ ಪ್ರಯತ್ನ ನಡೆಸಿದರೂ ಜಾಮೀನು ಸಿಗುತ್ತಿಲ್ಲ. ಎಲ್ಲಾ ಸಾಕ್ಷ್ಯಗಳು ಅವರ ವಿರುದ್ಧವಾಗಿಯೇ ಇವೆ. ಇನ್ನು ಸಾಕ್ಷ್ಯ ನಾಶದ ಭಯ ಕೂಡ ಕಾಡುತ್ತಿದೆ. ಈ ಎಲ್ಲಾ ಕಾರಣಕ್ಕೆ ಅವರಿಗೆ ಬೇಲ್ ಸಿಗುತ್ತಿಲ್ಲ. ಅವರು ಜೈಲಿನಿಂದ ಹೊರ ಬಂದ ಕೂಡಲೇ ಶಿಲ್ಪಾ ವಿಚ್ಛೇದನ ವಿಚಾರ ಮಾತನಾಡಲಿದ್ದಾರೆ ಎನ್ನಲಾಗಿದೆ.
ಚಿತ್ರರಂಗದಲ್ಲಿ ಸೆಲೆಬ್ರಿಟಿಗಳು ಮದುವೆ ಆಗುವುದು ಹಾಗೂ ವಿಚ್ಛೇದನ ಪಡೆಯುವುದು ದೊಡ್ಡ ವಿಚಾರವಾಗಿಯೇ ಉಳಿದಿಲ್ಲ. ಸಾಕಷ್ಟು ಸೆಲೆಬ್ರಿಟಿಗಳು ನಾನಾ ಕಾರಣ ನೀಡಿ ಡಿವೋರ್ಸ್ ಪಡೆದ ಉದಾಹರಣೆ ಇದೆ. ಈಗ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬೀಸಿದ್ದರಿಂದ ಅವರ ಮುಂದಿರುವ ಆಯ್ಕೆ ವಿಚ್ಛೇದನವೇ ಎನ್ನುತ್ತಿವೆ ಮೂಲಗಳು. ವಿಚ್ಛೇದನ ಪಡೆದ ನಂತರದಲ್ಲಿ ಮಕ್ಕಳು ಅಮ್ಮನ ಜತೆ ಇದ್ದರೂ ತಂದೆಯನ್ನೂ ಆಗಾಗ ಭೇಟಿ ಮಾಡುತ್ತಿರುತ್ತಾರೆ. ಆದರೆ, ಶಿಲ್ಪಾ ಇದಕ್ಕೆ ಅವಕಾಶ ನೀಡದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ರಾಜ್ ಕುಂದ್ರಾ ಗಳಿಕೆ ಮಾಡಿದ ಹಣ ಕೆಟ್ಟ ಮಾರ್ಗದ್ದು. ಹೀಗಾಗಿ, ಆ ಹಣದಿಂದ ಮಕ್ಕಳನ್ನು ದೂರ ಇಡಬೇಕು ಎನ್ನುವುದು ಅವರ ಆಲೋಚನೆ.
ರಾಜ್ ಕುಂದ್ರಾ ವಿರುದ್ಧ ಮಾಡೆಲ್, ನಟಿ ಶೆರ್ಲಿನ್ ಚೋಪ್ರಾ ಗಂಭೀರ ಆರೋಪ ಮಾಡಿದ್ದರು. ಸಿನಿಮಾ ಆಫರ್ ಕೊಡುವುದಾಗಿ ನಂಬಿಸಿ ರಾಜ್ ಕುಂದ್ರಾ ಮೋಸ ಮಾಡಿದ್ದರು. ತಮ್ಮನ್ನು ಬೆತ್ತಲೆಯಾಗಿ ಚಿತ್ರೀಕರಿಸಲಾಗಿತ್ತು ಎಂದು ಅವರು ಆರೋಪಿಸಿದ್ದರು. ಈ ಆರೋಪದಿಂದ ರಾಜ್ಗೆ ಮತ್ತಷ್ಟು ತೊಂದರೆ ಎದುರಾಗಿತ್ತು.
ಇದನ್ನೂ ಓದಿ: Shilpa Shetty: ರಾಜ್ ಕುಂದ್ರಾ ಜೈಲಿನಲ್ಲಿರುವಾಗಲೇ ಗುಡ್ ನ್ಯೂಸ್ ನೀಡಿದ ಶಿಲ್ಪಾ ಶೆಟ್ಟಿ
ನೀಲಿ ಚಿತ್ರ ನಿರ್ಮಾಣ ಪ್ರಕರಣ; ಜೈಲಿನಲ್ಲಿರುವ ರಾಜ್ ಕುಂದ್ರಾಗೆ ಮಧ್ಯಂತರ ರಿಲೀಫ್ ನೀಡಿದ ಬಾಂಬೆ ಹೈಕೋರ್ಟ್