AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shilpa Shetty: ರಾಜ್​ ಕುಂದ್ರಾ ಪೋರ್ನ್​ ದಂಧೆಯಲ್ಲಿ ಶಿಲ್ಪಾ ಶೆಟ್ಟಿ ತಪ್ಪು ಒಪ್ಪಿಕೊಳ್ಳಲಿ ಎಂದು ಹಠ ಹಿಡಿದ ಶೆರ್ಲಿನ್​ ಚೋಪ್ರಾ

Sherlyn Chopra: ‘ಸೂಪರ್​ ಡ್ಯಾನ್ಸರ್​ 4’ ರಿಯಾಲಿಟಿ ಶೋಗೆ ಜಡ್ಜ್​ ಆಗಿರುವ ಶಿಲ್ಪಾ ಶೆಟ್ಟಿ ಅವರು ರಾಣಿ ಲಕ್ಷ್ಮೀ ಬಾಯಿ ಬಗ್ಗೆ ಇತ್ತೀಚೆಗೆ ಮಾತನಾಡಿದ್ದರು. ಅದೇ ಮಾತನ್ನು ಇಟ್ಟುಕೊಂಡು ಈಗ ಅವರನ್ನು ಶೆರ್ಲಿನ್​ ಚೋಪ್ರಾ ಟೀಕಿಸಿದ್ದಾರೆ.

Shilpa Shetty: ರಾಜ್​ ಕುಂದ್ರಾ ಪೋರ್ನ್​ ದಂಧೆಯಲ್ಲಿ ಶಿಲ್ಪಾ ಶೆಟ್ಟಿ ತಪ್ಪು ಒಪ್ಪಿಕೊಳ್ಳಲಿ ಎಂದು ಹಠ ಹಿಡಿದ ಶೆರ್ಲಿನ್​ ಚೋಪ್ರಾ
ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ, ಶೆರ್ಲಿನ್​ ಚೋಪ್ರಾ
TV9 Web
| Edited By: |

Updated on: Aug 31, 2021 | 11:58 AM

Share

ಪತಿ ರಾಜ್ ​ಕುಂದ್ರಾ ಮಾಡಿದ ಅವಾಂತರದಿಂದಾಗಿ ಶಿಲ್ಪಾ ಶೆಟ್ಟಿ ಹೋದಲ್ಲೆಲ್ಲ ಮುಜುಗರ ಅನುಭವಿಸುವಂತಾಗಿದೆ. ಎಲ್ಲರೂ ಕೂಡ ಅವರನ್ನು ಟೀಕಿಸುತ್ತಿದ್ದಾರೆ. ಈಗ ನಟಿ ಶೆರ್ಲಿನ್​ ಚೋಪ್ರಾ ಅವರು ಶಿಲ್ಪಾಗೆ ನೇರ ಸವಾಲು ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು ಶಿಲ್ಪಾ ಶೆಟ್ಟಿಯ ಪೊಳ್ಳು ಮಾತುಗಳಿಗೆ ತಿರುಗೇಟು ನೀಡಿದ್ದಾರೆ. ‘ಹಾಯ್​ ಶಿಲ್ಪಾ ಅಕ್ಕ.. ಸಂತ್ರಸ್ತ ಯುವತಿಯರ ಬಗ್ಗೆ ಸ್ವಲ್ಪ ಕರುಣೆ ತೋರಿಸಿ ಅಂತ ಮನವಿ ಮಾಡಿಕೊಳ್ಳುತ್ತೇನೆ. ತಪ್ಪು ಒಪ್ಪಿಕೊಳ್ಳುವುದರಿಂದ ಯಾರೂ ಚಿಕ್ಕವರಾಗುವುದಿಲ್ಲ’ ಎಂಬ ಕ್ಯಾಪ್ಷನ್​ನೊಂದಿಗೆ ಶೆರ್ಲಿನ್​ ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ.

‘ಸೂಪರ್​ ಡ್ಯಾನ್ಸರ್​ 4’ ರಿಯಾಲಿಟಿ ಶೋಗೆ ಜಡ್ಜ್​ ಆಗಿರುವ ಶಿಲ್ಪಾ ಶೆಟ್ಟಿ ಅವರು ರಾಣಿ ಲಕ್ಷ್ಮೀ ಬಾಯಿ ಬಗ್ಗೆ ಇತ್ತೀಚೆಗೆ ಮಾತನಾಡಿದ್ದರು. ಸಮಸ್ಯೆಗಳನ್ನು ಎದುರಿಸಿ ಬದುಕುತ್ತಿರುವ ಮಹಿಳೆಯರ ಬಗ್ಗೆ ತಮಗೆ ತುಂಬ ಗೌರವ ಇದೆ ಎಂದು ಅವರು ಹೇಳಿದ್ದರು. ಅದೇ ಮಾತನ್ನು ಇಟ್ಟುಕೊಂಡು ಈಗ ಅವರನ್ನು ಶೆರ್ಲಿನ್​ ಚೋಪ್ರಾ ಟೀಕಿಸಿದ್ದಾರೆ. ‘ಅಶ್ಲೀಲ ಸಿನಿಮಾ ದಂಧೆಯ ವಿರುದ್ಧ ಬೇರೆ ಬೇರೆ ಪೊಲೀಸ್​ ಠಾಣೆಗಳಿಗೆ ತೆರಳಿ ಧೈರ್ಯವಾಗಿ ತಮ್ಮ ಹೇಳಿಕೆಗಳನ್ನು ನೀಡುತ್ತಿರುವ ಯುವತಿಯರು ಕೂಡ ನೀವು ಹೇಳುವಂತೆ ಸಮಸ್ಯೆಗಳನ್ನು ಎದುರಿಸಿ ಬದುಕುತ್ತಿರುವ ಮಹಿಳೆಯರ ಸಾಲಿಗೆ ಸೇರುತ್ತಾರಾ?’ ಎಂದು ಶೆರ್ಲಿನ್​ ಪ್ರಶ್ನಿಸಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ನಾನು ಏನೇ ಪೋಸ್ಟ್​ ಮಾಡಿದರೂ ನಿಮ್ಮ ಅಭಿಮಾನಿಗಳು ಬಂದು ನನ್ನನ್ನು ಟ್ರೋಲ್​ ಮಾಡುತ್ತಾರೆ. ನಾನು ಹಾಕುವ ಫೋಟೋಗಳೆಲ್ಲವೂ ಫೋಟೋಶಾಪ್​ ಮಾಡಿರುವಂಥವು ಎನ್ನುತ್ತಾರೆ. ಆದರೆ ಈ ಪ್ರಕರಣವನ್ನು ತನಿಖೆ ಮಾಡುತ್ತಿರುವ ಅಧಿಕಾರಿಗಳು ನನಗಿಂತ, ನಿಮಗಿಂತ ಹಾಗೂ ನಿಮ್ಮ ಅಭಿಮಾನಿಗಳಿಗಿಂತಲೂ ಬುದ್ಧಿವಂತರು. ಸತ್ಯ ಹೇಗೆ ಹೊರತೆಗೆಯಬೇಕು ಎಂಬುದು ಅವರಿಗೆ ಗೊತ್ತು’ ಎಂದು ಶೆರ್ಲಿನ್​ ಹೇಳಿದ್ದಾರೆ.

ರಾಜ್​ ಕುಂದ್ರಾ ನಡೆಸುತ್ತಿದ್ದರು ಎನ್ನಲಾದ ಅಶ್ಲೀಲ ಸಿನಿಮಾ ದಂಧೆಯಲ್ಲಿ ಶೆರ್ಲಿನ್​ ಕೂಡ ಭಾಗಿ ಆಗಿದ್ದರು ಎಂಬ ಆರೋಪ ಇದೆ. ಆದರೆ ತಮ್ನನ್ನು ರಾಜ್​ ಕುಂದ್ರಾ ಅವರು ಯಾಮಾರಿಸಿ ಈ ಕೆಲಸಕ್ಕೆ ತಳ್ಳಿದರು ಎಂದು ಶೆರ್ಲಿನ್​ ಹೇಳಿಕೆ ನೀಡಿದ್ದಾರೆ. ರಾಜ್​ ಕುಂದ್ರಾ ವಿರುದ್ಧ ಅವರು ಹಲವು ಕೇಸ್​ಗಳನ್ನು ದಾಖಲಿಸಿದ್ದಾರೆ. ಸದ್ಯ ಶೆರ್ಲಿನ್​ ಹಂಚಿಕೊಂಡಿರುವ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಕೆಲವರು ಶೆರ್ಲಿನ್​ಗೆ ಬೆಂಬಲ ಸೂಚಿಸಿದ್ದಾರೆ. ಮತ್ತೆ ಕೆಲವರು ಶಿಲ್ಪಾ ಶೆಟ್ಟಿ ಪರವಾಗಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಪತಿ ರಾಜ್​ ಕುಂದ್ರಾಗೆ ವಿಚ್ಛೇದನ ನೀಡ್ತಾರಾ ಶಿಲ್ಪಾ ಶೆಟ್ಟಿ? ಮಕ್ಕಳ ಭವಿಷ್ಯಕ್ಕಾಗಿ ದೊಡ್ಡ ನಿರ್ಧಾರ ಸಾಧ್ಯತೆ

ಮುಂದುವರಿದಿದೆ ಶಿಲ್ಪಾ ಶೆಟ್ಟಿ ತಂಗಿಯ ಮುತ್ತಿನಾಟ; ‘ಈಗಲೇ ನನಗೆ ಕಿಸ್​ ಮಾಡು’ ಎಂದ ಶಮಿತಾ ವಿಡಿಯೋ ವೈರಲ್​

Follow Us
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ