AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಅಂತಹ ದೃಶ್ಯಗಳಲ್ಲಿ ನಟಿಸುವಾಗ ನನಗೆ ಮುಜುಗರವಾಯಿತು, ಆದರೆ…”; ಮುಕ್ತವಾಗಿ ಮಾತನಾಡಿದ ಜಾಕಿ ಶ್ರಾಫ್

ಬಾಲಿವುಡ್​ನ ಹಿರಿಯ ನಟ ಜಾಕಿ ಶ್ರಾಫ್ ಸರಸದ ದೃಶ್ಯದಲ್ಲಿ ಕಾಣಿಸಿಕೊಳ್ಳಬೇಕಾಗಿ ಬಂದಾಗ ಅನುಭವಿಸಿದ ಮುಜುಗರದ ಸಂದರ್ಭವನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಅಂತಹ ದೃಶ್ಯಗಳಲ್ಲಿ ನಟಿಸುವಾಗ ನನಗೆ ಮುಜುಗರವಾಯಿತು, ಆದರೆ...; ಮುಕ್ತವಾಗಿ ಮಾತನಾಡಿದ ಜಾಕಿ ಶ್ರಾಫ್
ಜಾಕಿ ಶ್ರಾಫ್ ‘ದಿ ಇಂಡರ್​ವ್ಯೂ’ ಚಿತ್ರದಲ್ಲಿ
Follow us
TV9 Web
| Updated By: shivaprasad.hs

Updated on: Aug 29, 2021 | 6:44 PM

ಚಿತ್ರರಂಗದಲ್ಲಿ ಪಾತ್ರ ಬೇಡಿದಾಗ ನಟ ಅಥವಾ ನಟಿಯರು ಸರಸದ ದೃಶ್ಯಗಳಲ್ಲಿ ಮೈ ಚಳಿ ಬಿಟ್ಟು ನಟಿಸಬೇಕಾಗುತ್ತದೆ. ಕೆಲವೊಮ್ಮೆ ಇಂತಹ ಸನ್ನಿವೇಶದಲ್ಲಿ ಸೆಟ್​ನಲ್ಲಿ ಎದುರಾದ ಮುಜುಗರದ ಸನ್ನಿವೇಶವನ್ನು ನಂತರದಲ್ಲಿ ಮುಕ್ತವಾಗಿ ಹೇಳಿಕೊಳ್ಳುವ ನಟರೂ ಇದ್ದಾರೆ. ಅಂಥದ್ದೇ ಒಂದು ಸನ್ನಿವೇಶವನ್ನು ಬಾಲಿವುಡ್ ಹಿರಿಯ ನಟ 64 ವರ್ಷ ಪ್ರಾಯದ ಜಾಕಿ ಶ್ರಾಫ್ ಮುಚ್ಚುಮರೆಯಿಲ್ಲದೆ ಹಂಚಿಕೊಂಡಿದ್ದಾರೆ. ತಮ್ಮ ಮುಂದಿನ ‘ದಿ ಇಂಟರ್ ವ್ಯೂ: ನೈಟ್ ಆಫ್ 26/11’ ಚಿತ್ರದಲ್ಲಿ ಸರಸದ ದೃಶ್ಯದಲ್ಲಿ ಅಭಿನಯಿಸಬೇಕಾಗಿ ಬಂದಾಗ ಎದುರಿಸಿದ ಮುಜುಗರವನ್ನು ‘ಬಾಲಿವುಡ್ ಹಂಗಾಮಾ’ಕ್ಕೆ ನೀಡಿದ ಸಂದರ್ಶನದ ಸಂದರ್ಭದಲ್ಲಿ ಅವರು ವಿವರಿಸಿದ್ದಾರೆ.

‘ದಿ ಇಂಟರ್ ವ್ಯೂ: ನೈಟ್ ಆಫ್ 26/11’ ಚಿತ್ರದಲ್ಲಿ ಯುದ್ಧಗಳನ್ನು ವರದಿ ಮಾಡುವ ಪತ್ರಕರ್ತನ ಪಾತ್ರದಲ್ಲಿ ಜಾಕಿ ಶ್ರಾಫ್ ಬಣ್ಣ ಹಚ್ಚಿದ್ದಾರೆ. ಆ ಪತ್ರಕರ್ತನಿಗೆ ಬಾಲಿವುಡ್ ಸ್ಟಾರ್ ನಟಿ ಓರ್ವಳನ್ನು ಸಂದರ್ಶನ ಮಾಡಬೇಕಾಗುತ್ತದೆ. ಅದರ ಕತೆಯನ್ನು ಚಿತ್ರ ಒಳಗೊಂಡಿದ್ದು, ಡಚ್ ಭಾಷೆಯ ‘ದಿ ಇಂಟರ್​ವ್ಯೂ’ ಚಿತ್ರದ ರಿಮೇಕ್ ಇದಾಗಿದೆ. ಈ ಚಿತ್ರದಲ್ಲಿ ಸರಸದ ಸನ್ನಿವೇಶದಲ್ಲಿ ಕಾಣಿಸಿಕೊಂಡಿರುವ ಕುರಿತು ಜಾಕಿ ಶ್ರಾಫ್ ಮಾತನಾಡುತ್ತಾ, “ಪಾತ್ರ ಅದನ್ನು ಬಯಸಿತು. ಆಗ ಅನಿವಾರ್ಯವಾಗಿ ನಾನು ಮಾಡಬೇಕಾಯಿತು” ಎಂದು ಹೇಳಿದ್ದಾರೆ.

“ನನಗೆ ನಿಜವಾಗಿಯೂ ಮುಜುಗರವಾಯಿತು. ಅಂತಹ ದೃಶ್ಯಗಳನ್ನು ಮಾಡುವಾಗ ನನಗೆ ದಿಗ್ಭ್ರಮೆಯಾಗುತ್ತದೆ. ಆದರೂ ನಾನು ನಟಿಸಬೇಕಾಗುತ್ತದೆ. ಕಾರಣ, ನಾನೊಬ್ಬ ನಟ” ಎಂದಿದ್ದಾರೆ ಜಾಕಿ ಶ್ರಾಫ್. ಶೂಟಿಂಗ್ ಸಂದರ್ಭದಲ್ಲಿ ಸೆಟ್ ನಲ್ಲಿ ಅನುಭವಿಸಿದ ತೊಳಲಾಟವನ್ನು ವಿವರಿಸಿದ ಅವರು, “ಸೆಟ್ ನಲ್ಲಿ ಎಲ್ಲರೂ ಬಿಟ್ಟ ಕಣ್ಣುಗಳಿಂದ ನೋಡುತ್ತಿರುತ್ತಾರೆ. ಡೈರೆಕ್ಟರ್, ಸಹಾಯಕರು, ತಂಡದವರು ಮತ್ತು ಎಲ್ಲರೂ ನಮ್ಮನ್ನೇ ನೋಡುವಾಗ ಮುಜುಗರವಾಗುತ್ತದೆ. ಆದರೆ, ಇದನ್ನು ನಾನು ನನ್ನ ಕೆಲಸದಂತೆ ಮಾಡಬೇಕಿತ್ತು. ಪಾತ್ರ ಬಯಸಿದರೆ ಅದನ್ನು ಮಾಡುವುದು ನನ್ನ ಧರ್ಮ” ಎಂದಿದ್ದಾರೆ.

‘ದಿ ಇಂಟರ್​ವ್ಯೂ’ ಚಿತ್ರದ ಟ್ರೈಲರ್:

ಜಾಕಿ ಶ್ರಾಫ್ ಈ ವರ್ಷ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ರಾಧೆ’, ಆಧಾರ್ ಜೈನ್ ನಟನೆಯ ‘ಹೆಲ್ಲೊ ಚಾರ್ಲಿ’ ಮೊದಲಾದ ಚಿತ್ರಗಳಲ್ಲಿ ಜಾಕಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಡಿಸ್ನೆ ಹಾಟ್ ಸ್ಟಾರ್ ನಲ್ಲಿ ಪ್ರಸಾರದವಾದ ‘ಓಕೆ ಕಂಪ್ಯೂಟರ್’ ಸೀರೀಸ್ ನಲ್ಲಿ‌ ಅವರು ಕಾಣಿಸಿಕೊಂಡಿದ್ದಾರೆ. ರೋಹಿತ್ ಶೆಟ್ಟಿಯವರ ‘ಸೂರ್ಯವಂಶಿ’ಯಲ್ಲಿ ಜಾಕಿ ಶ್ರಾಫ್ ಬಣ್ಣ ಹಚ್ಚಲಿದ್ದು, ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ಮೊದಲಾದ ಬೃಹತ್ ತಾರಾಗಣವಿದೆ.

ಇದನ್ನೂ ಓದಿ:

ಅಫ್ಘಾನಿಸ್ತಾನದಲ್ಲಿರುವ ನನ್ನ ಕುಟುಂಬದವರು ಸಂಪರ್ಕಕ್ಕೆ ಸಿಗುತ್ತಿಲ್ಲ; ಕಣ್ಣೀರಿಟ್ಟ ಕಿರುತೆರೆ ನಟಿ

ಏಕಾಏಕಿ ರಿಯಾಲಿಟಿ ಶೋನಿಂದ ಹೊರ ನಡೆದ ಖ್ಯಾತ ನಿರೂಪಕ; ಮತ್ತೆ ಮರಳಲ್ಲ ಎಂದ ನಟ

(Jackie Shroff opens up about his intimate scenes in new movie The Interview)

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ