Mission Majnu: ಬಾಲಿವುಡ್ನಲ್ಲಿ ಮೊದಲ ಮುಖ್ಯ ಹಂತ ಮುಗಿಸಿದ ರಶ್ಮಿಕಾ; ಸಿದ್ಧಾರ್ಥ್ ಜೊತೆಗಿನ ಫೋಟೋ ವೈರಲ್
Rashmika Mandann: ದಿನದಿಂದ ದಿನಕ್ಕೆ ರಶ್ಮಿಕಾ ಮಂದಣ್ಣ ಉತ್ತುಂಗಕ್ಕೆ ಏರುತ್ತಿರುವುದನ್ನು ನೋಡಿ ಅವರ ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಆದಷ್ಟು ಬೇಗ ಅವರ ಮೊದಲ ಹಿಂದಿ ಸಿನಿಮಾ ‘ಮಿಷನ್ ಮಜ್ನು’ ತೆರೆಕಾಣಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಸಿನಿಪಯಣ ಬಾಲಿವುಡ್ನತ್ತ ಸಾಗಿದೆ. ತಮ್ಮ ವೃತ್ತಿಜೀವನದಲ್ಲಿ ಎದುರಾದ ಹಲವಾರು ಅಡೆತಡೆಗಳನ್ನು ನಿವಾರಿಸಿಕೊಳ್ಳುತ್ತ ಮುಂದೆ ಸಾಗುತ್ತಿರುವ ಅವರು ತಮ್ಮ ಮೊದಲ ಹಿಂದಿ ಸಿನಿಮಾ ‘ಮಿಷನ್ ಮಜ್ನು’ (Mission Majnu) ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ವಿಶೇಷ ಎಂದರೆ ಈಗ ಅವರು ಬಾಲಿವುಡ್ನಲ್ಲಿ ಒಂದು ಮುಖ್ಯ ಹಂತವನ್ನು ಪೂರ್ಣಗೊಳಿಸಿದ್ದಾರೆ. ಅಂದರೆ ಅವರ ಮೊದಲ ಹಿಂದಿ ಸಿನಿಮಾದ ಶೂಟಿಂಗ್ ಮುಗಿದಿದೆ. ಯಾವುದೇ ವಿಘ್ನಗಳಿಲ್ಲದೇ ಚಿತ್ರೀಕರಣ ಮುಗಿದಿರುವುದಕ್ಕೆ ಇಡೀ ತಂಡ ಖುಷಿಯಾಗಿದೆ. ಈ ಸಿನಿಮಾದಲ್ಲಿ ‘ಶೇರ್ಷಾ’ ಖ್ಯಾತಿಯ ನಟ ಸಿದ್ಧಾರ್ಥ್ ಮಲ್ಹೋತ್ರಾ (Mission Majnu) ಅವರಿಗೆ ರಶ್ಮಿಕಾ ಜೋಡಿಯಾಗಿದ್ದಾರೆ.
ದಿನದಿಂದ ದಿನಕ್ಕೆ ರಶ್ಮಿಕಾ ಅವರು ಉತ್ತುಂಗಕ್ಕೆ ಏರುತ್ತಿರುವುದನ್ನು ನೋಡಿ ಅವರ ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಆದಷ್ಟು ಬೇಗ ಅವರ ಮೊದಲ ಹಿಂದಿ ಸಿನಿಮಾ ‘ಮಿಷನ್ ಮಜ್ನು’ ತೆರೆಕಾಣಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅಂಥವರಿಗೆಲ್ಲ ಈ ಸುದ್ದಿ ಖುಷಿ ನೀಡಿದೆ. ಶೂಟಿಂಗ್ ಪೂರ್ಣಗೊಂಡಿರುವ ಸಂತಸಕ್ಕೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ರಶ್ಮಿಕಾ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಈ ಫೋಟೋಗೆ, ‘ನಿಮ್ಮ ಜೊತೆ ಕೆಲಸ ಮಾಡಿದ್ದಕ್ಕೆ ತುಂಬ ಖುಷಿಯಾಗಿದೆ. ಧನ್ಯವಾದಗಳು. ಆದಷ್ಟು ಬೇಗ ಮತ್ತೆ ಭೇಟಿ ಆಗೋಣ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಅದನ್ನು ಕಂಡು ರಶ್ಮಿಕಾ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ. ‘ಸಿದ್ ನೀವು ತುಂಬ ಚೆನ್ನಾಗಿ ನಡೆದುಕೊಂಡಿದ್ದೀರಿ. ನಿಮ್ಮೊಂದಿಗೆ ಕೆಲಸ ಮಾಡಿದ್ದು ಚೆನ್ನಾಗಿತ್ತು. ನೀವು ಅತ್ಯುತ್ತಮ ವ್ಯಕ್ತಿ. ನಾನು ಹೆಚ್ಚು ಖುಷಿಯಾಗಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಅವರ ನಾಗಾಲೋಟ ಮುಂದುವರಿಯುತ್ತಿದೆ. ‘ಗುಡ್ಬೈ’ ಸಿನಿಮಾದಲ್ಲಿ ಅವರು ಭಾರತೀಯ ಚಿತ್ರರಂಗದ ದಿಗ್ಗಜ ಅಮಿತಾಭ್ ಬಚ್ಚನ್ ಜೊತೆ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ ನಟಿಸಿರುವ ‘ಪುಷ್ಪ’ ಸಿನಿಮಾ ಈ ವರ್ಷ ಕ್ರಿಸ್ಮಸ್ ಹಬ್ಬಕ್ಕೆ ತೆರೆಕಾಣಲಿದೆ. ಅವರ ಕಾಲ್ಶೀಟ್ ಪಡೆಯಲು ಅನೇಕ ನಿರ್ಮಾಪಕ/ನಿರ್ದೇಶಕರು ರಶ್ಮಿಕಾ ಮನೆಮುಂದೆ ಕಾಯುತ್ತಿದ್ದಾರೆ. ಈ ನಡುವೆ ಅವರು ಬಿಡುವು ಮಾಡಿಕೊಂಡು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆಗೂ ಸಂಪರ್ಕದಲ್ಲಿ ಇರಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ:
ಜಿಮ್ನಲ್ಲಿ ಒಟ್ಟಾಗಿ ವರ್ಕೌಟ್ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ; ಫೋಟೋ ವೈರಲ್
ಮಾಡೋಕೆ ಏನೂ ಕೆಲಸ ಇಲ್ಲದಿದ್ದರೆ ರಶ್ಮಿಕಾ ಮಂದಣ್ಣ ಏನು ಮಾಡ್ತಾರೆ? ಫೋಟೋ ಸಹಿತ ಸಿಕ್ತು ಉತ್ತರ