ಸಿದ್ಧಾರ್ಥ್​ ಮಲ್ಹೋತ್ರಾ ಜತೆ ಲವ್ವಿಡವ್ವಿ? ಎಲ್ಲವನ್ನೂ ಹೇಳಿಕೊಂಡ ನಟಿ ಕಿಯಾರಾ

ಕಿಯಾರಾ ಹಾಗೂ ಸಿದ್ಧಾರ್ಥ್​ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇನ್ನು, ಕಿಯಾರಾ ಅವರು ಸಿದ್ಧಾರ್ಥ್​ ಪಾಲಕರನ್ನು ಭೇಟಿ ಮಾಡಿದ್ದರು. ಈ ಭೇಟಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.

ಸಿದ್ಧಾರ್ಥ್​ ಮಲ್ಹೋತ್ರಾ ಜತೆ ಲವ್ವಿಡವ್ವಿ? ಎಲ್ಲವನ್ನೂ ಹೇಳಿಕೊಂಡ ನಟಿ ಕಿಯಾರಾ
ಸಿದ್ಧಾರ್ಥ್​ ಮಲ್ಹೋತ್ರಾ ಜತೆ ಲವ್ವಿಡವ್ವಿ? ಎಲ್ಲವನ್ನೂ ಹೇಳಿಕೊಂಡ ನಟಿ ಕಿಯಾರಾ

ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್​ ಮಲ್ಹೋತ್ರಾ ರಿಲೇಶನ್​ಶಿಪ್​ನಲ್ಲಿದ್ದಾರೆ ಎನ್ನುವ ಗುಸುಗುಸು ಬಾಲಿವುಡ್​ ಅಂಗಳದಲ್ಲಿ ಹರಿದಾಡಿತ್ತು. ಈ ವದಂತಿಯನ್ನು ನಂಬುವ ರೀತಿಯಲ್ಲಿ ಸಾಕಷ್ಟು ಘಟನೆಗಳು ನಡೆದವು. ಹೀಗಾಗಿ, ಅಭಿಮಾನಿಗಳು ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಭಾವಿಸಿದ್ದರು. ಇದಕ್ಕೆ ಕಿಯಾರಾ ಈಗ ಸ್ಪಷ್ಟನೆ ನೀಡಿದ್ದಾರೆ.

ಕಿಯಾರಾ ಹಾಗೂ ಸಿದ್ಧಾರ್ಥ್​ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇನ್ನು, ಕಿಯಾರಾ ಅವರು ಸಿದ್ಧಾರ್ಥ್​ ಪಾಲಕರನ್ನು ಭೇಟಿ ಮಾಡಿದ್ದರು. ಈ ಭೇಟಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಈ ಘಟನೆ ನಂತರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹುಟ್ಟಿಕೊಳ್ಳಲು ಆರಂಭಿಸಿದವು. ಆದರೆ, ಈ ಬಗ್ಗೆ ಕಿಯಾರಾ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಆದರೆ, ಈಗ ಈ ವಿಚಾರದಲ್ಲಿ ಅವರಿಗೆ ಮೌನ ವಹಿಸೋಕೆ ಸಾಧ್ಯವಾಗಿಲ್ಲ.

ಇತ್ತೀಚೆಗೆ ಕಿಯಾರಾ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ಈ ವಿಚಾರದ ಬಗ್ಗೆ ಮತ್ತೆ ಪ್ರಶ್ನಿಸಲಾಯಿತು. ಇದಕ್ಕೆ ಕಿಯಾರಾ ಉತ್ತರ ನೀಡಿದ್ದಾರೆ. ನಾವಿಬ್ಬರೂ ಉತ್ತಮ ಗೆಳೆಯರಷ್ಟೇ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಮದುವೆ ಬಗ್ಗೆ ಕಿಯಾರಾ ತಮ್ಮದೇ ಆದ ಕಲ್ಪನೆ ಇಟ್ಟುಕೊಂಡಿದ್ದಾರೆ. ‘ನಾನು ಅರೇಂಜ್​ ಮ್ಯಾರೇಜ್​ ಆಗುವುದಿಲ್ಲ. ನಾನು ಆಗುವುದಾದರೆ ಅದು ಲವ್​ ಮ್ಯಾರೇಜ್​ ಮಾತ್ರ’ ಎಂದಿದ್ದಾರೆ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಬಾಲಿವುಡ್​ನ ಬಹುಬೇಡಿಕೆಯ ನಟಿಯರಲ್ಲಿ ಕಿಯಾರಾ ಅಡ್ವಾಣಿ ಕೂಡ ಪ್ರಮುಖರು. ಹಲವು ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಎಂ.ಎಸ್​. ಧೋನಿ: ಅನ್​ಟೋಲ್ಡ್​ ಸ್ಟೋರಿ, ಕಬೀರ್​ ಸಿಂಗ್, ಗುಡ್​ ನ್ಯೂಸ್​, ಲಕ್ಷ್ಮೀ ಮುಂತಾದ ಚಿತ್ರಗಳಿಂದ ಅವರಿಗೆ ಭಾರಿ ಯಶಸ್ಸು ಸಿಕ್ಕಿದೆ. ಲಸ್ಟ್​ ಸ್ಟೋರೀಸ್​ ವೆಬ್​ ಸರಣಿ ಮೂಲಕವೂ ಅವರ ಜನಪ್ರಿಯತೆ ಹೆಚ್ಚಿತು. ಈ ಬಾಲಿವುಡ್​ ಬೆಡಗಿಗೆ ದಕ್ಷಿಣ ಭಾರತದಲ್ಲೂ ಸಖತ್​ ಡಿಮ್ಯಾಂಡ್​ ಇದೆ. ತೆಲುಗಿನ ಸ್ಟಾರ್​ ನಟರ ಜೊತೆ ಅಭಿನಯಿಸಿರುವ ಅವರಿಗೆ ಇತ್ತೀಚೆಗೆ ಬಂಪರ್​ ಆಫರ್​ ಸಿಕ್ಕಿತ್ತು. ನಟ ರಾಮ್​ ಚರಣ್​ ಮತ್ತು ನಿರ್ದೇಶಕ ಶಂಕರ್​ ಕಾಂಬಿನೇಷನ್​ನ ಹೊಸ ಚಿತ್ರಕ್ಕೆ ಕಿಯಾರಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಬಗ್ಗೆ ಅಪ್ಸೆಟ್​ ಆದ ಕುಟುಂಬದವರು; ಸಂದರ್ಶನದಲ್ಲಿ ಅಳಲು ತೋಡಿಕೊಂಡ ನಟಿ

Click on your DTH Provider to Add TV9 Kannada