AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karishma Prakash: ಡ್ರಗ್ಸ್​​ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ ಮಾಜಿ ಮ್ಯಾನೇಜರ್​ಗೆ ಬಂಧನದ ಭೀತಿ!

Deepika Padukone: ಬಾಲಿವುಡ್​ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರ ಮಾಜಿ ಮ್ಯಾನೇಜರ್ ಕರಿಷ್ಮಾ ಅವರಿಗೆ ಡ್ರಗ್ಸ್ ಪ್ರಕರಣದಲ್ಲಿ ಬಂಧನದ ಭೀತಿ ಎದುರಾಗಿದೆ. ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿನ ಅರ್ಜಿಯನ್ನು ಮುಂಬೈನ ವಿಶೇಷ ನ್ಯಾಯಾಲಯವು ತಿರಸ್ಕರಿಸಿದೆ.

Karishma Prakash: ಡ್ರಗ್ಸ್​​ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ ಮಾಜಿ ಮ್ಯಾನೇಜರ್​ಗೆ ಬಂಧನದ ಭೀತಿ!
ನಟಿ ದೀಪಿಕಾ ಪಡುಕೋಣೆ ಮತ್ತು ಅವರ ಮಾಜಿ ಮ್ಯಾನೇಜರ್ ಕರಿಷ್ಮಾ ಪ್ರಕಾಶ್
TV9 Web
| Edited By: |

Updated on:Aug 06, 2021 | 10:44 AM

Share

ಮುಂಬೈ: ನಟಿ ದೀಪಿಕಾ ಪಡುಕೋಣೆ ಮಾಜಿ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರಿಗೆ ಬಂಧನದ ಭೀತಿ ಎದುರಾಗಿದೆ. ಬಾಲಿವುಡ್  ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡ್ರಗ್ಸ್ ಕೇಸ್​ನಲ್ಲಿ ಹಲವರ ಹೆಸರು ಕೇಳಿಬಂದಿತ್ತು. ಅದರಲ್ಲಿ ದೀಪಿಕಾ ಪಡುಕೋಣೆ ಅವರ ಮಾಜಿ ಮ್ಯಾನೇಜರ್ ಆಗಿದ್ದ ಕರಿಷ್ಮಾ ಪ್ರಕಾಶ್ ಹೆಸರೂ ಇದ್ದಿದ್ದರಿಂದ  ಅವರಿಗೆ ಬಂಧನದ ಭೀತಿ ಎದುರಾಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಕರಿಷ್ಮಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈಗ ಮುಂಬೈನ ವಿಶೇಷ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದ್ದು, ಅವರಿಗೆ ಬಂಧನದ ಭೀತಿ ಎದುರಾಗಿದೆ.

ಕಳೆದ ಅಕ್ಟೋಬರ್​ನಲ್ಲಿ ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಫಿಕ್ ಸಬ್ಸ್ಟೆನ್ಸಸ್ ಆಕ್ಟ್ (ಎನ್​ಡಿಪಿಎಸ್​) ಕೋರ್ಟ್​ನಲ್ಲಿ ಕರಿಷ್ಮಾ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಎನ್​ಸಿಬಿ ಮತ್ತು ಕರಿಷ್ಮಾ ಅವರ ವಾದ ಪ್ರತಿವಾದಗಳನ್ನು ಆಲಿಸಿ ಕರಿಷ್ಮಾ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಅದಾಗ್ಯೂ ಕರಿಷ್ಮಾಗೆ ಆಗಸ್ಟ್ 25ರ ಒಳಗೆ ಬಾಂಬೆ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ವಿಶೇಷ ನ್ಯಾಯಮೂರ್ತಿ ವಿ.ವಿ.ವಿದ್ವಾನ್ ಅವರಿದ್ದ ಪೀಠವು ನೀಡಿದೆ.

ಸುಶಾಂತ್ ಸಿಂಗ್ ಅವರ ನಿಧನಾನಂತರ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಡ್ರಗ್ ಪೆಡ್ಲರ್​ಗಳ ನಡುವೆ ಇದ್ದ ಸಂಬಂಧವು ಒಂದೊಂದಾಗೇ ಹೊರಬರುತ್ತಾ ಹೋಯಿತು. ಆಗ ದೀಪಿಕಾ ಅವರ  ಮಾಜಿ ಮ್ಯಾನೇಜರ್ ಆಗಿದ್ದ ಕರಿಷ್ಮಾ ಅವರ ಹೆಸರೂ ಕಾಣಿಸಿಕೊಂಡಿದೆ. ಡ್ರಗ್ಸ್ ಪೆಡ್ಲರ್​ಗಳನ್ನು ತನಿಖೆ ಮಾಡುವಾಗ ಅವರು ಕರಿಷ್ಮಾ ಅವರ ಹೆಸರನ್ನು ಹೇಳಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ಧ ಎನ್​ಸಿಬಿ ಬಳಿ ಪ್ರಬಲ ಸಾಕ್ಷಿಗಳಿವೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಸುಮಾರು 20ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಸುಶಾಂತ್ ಅವರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರು ಬಂಧನಕ್ಕೊಳಗಾಗಿದ್ದು, ಈಗ ಅವರೆಲ್ಲರೂ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.

ಎನ್​ಸಿಬಿ ಇದುವರೆಗೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖ್ಯಾತನಾಮರನ್ನು ಕರೆಸಿ, ಹೇಳಿಕೆಗಳನ್ನು ಪಡೆದುಕೊಂಡಿದೆ. ಅದರಲ್ಲಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಸೇರಿದ್ದಾರೆ.  ಈ ಪ್ರಕರಣವನ್ನು ಎನ್​ಸಿಬಿ ಅಲ್ಲದೇ, ಸಿಬಿಐ ಕೂಡಾ ಪ್ರತ್ಯೇಕವಾಗಿ ತನಿಖೆ ಮಾಡುತ್ತಿದೆ.

ಇದನ್ನೂ ಓದಿ:

ದೀಪಿಕಾ ಪಡುಕೋಣೆ ಮ್ಯಾನೇಜರ್ ಮನೆಯಲ್ಲಿ ಡ್ರಗ್ಸ್ ಪತ್ತೆ, ಆಕೆ ನಾಪತ್ತೆ!

‘ಅಂದು ನನ್ನ ಜೀವನ ಮುಗಿಯಿತು ಅಂದುಕೊಂಡಿದ್ದೆ’; ಭೀಕರ ಅಪಘಾತ ನೆನಪಿಸಿಕೊಂಡ ಮಂಜು ಪಾವಗಡ

(Deepika Padukone former manager Karishma Prakash does not get anticipatory bail from special court)

Published On - 10:38 am, Fri, 6 August 21