Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲೇಡಿ ಗ್ಯಾಂಗ್’ನೊಂದಿಗೆ ಕರೀನಾ ಕಪೂರ್; ಮಲೈಕಾ ಅರೋರಾ, ಕರಿಷ್ಮಾ ಮೊದಲಾದವರ ಜೊತೆ ಫೊಟೊಗೆ ಭರ್ಜರಿ ಪೋಸ್

ಬಾಲಿವುಡ್​ನ ಖ್ಯಾತ ನಟಿ ಕರೀನಾ ಕಪೂರ್ ತಮ್ಮ ಆಪ್ತ ಸ್ನೇಹಿತೆಯರೊಂದಿಗೆ ಕಳೆದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಮಲೈಕಾ ಅರೋರಾ, ಕರಿಷ್ಮಾ ಕಪೂರ್ ಕೂಡಾ ಇದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯರನ್ನು ಒಂದೆಡೆ ನೋಡಿ ಸಂತಸಪಟ್ಟಿದ್ದಾರೆ.

‘ಲೇಡಿ ಗ್ಯಾಂಗ್’ನೊಂದಿಗೆ ಕರೀನಾ ಕಪೂರ್; ಮಲೈಕಾ ಅರೋರಾ, ಕರಿಷ್ಮಾ ಮೊದಲಾದವರ ಜೊತೆ ಫೊಟೊಗೆ ಭರ್ಜರಿ ಪೋಸ್
ಕರೀನಾ ಕಪೂರ್ ಹಂಚಿಕೊಂಡಿರುವ ಚಿತ್ರ (ಕೃಪೆ: ಕರೀನಾ ಕಪೂರ್/ ಇನ್ಸ್ಟಾಗ್ರಾಂ)
Follow us
TV9 Web
| Updated By: shivaprasad.hs

Updated on: Aug 29, 2021 | 2:58 PM

ಬಾಲಿವುಡ್​ನ ಬಹುಬೇಡಿಕೆಯ ನಟಿಯರಲ್ಲೊಬ್ಬರಾದ ಕರೀನಾ ಕಪೂರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪೋಸ್ಟ್​ಗಳಿಂದ ಆಗಾಗ ಸುದ್ದಿಯಾಗುತ್ತಾರೆ. ತಮ್ಮ ದಿನಚರಿ, ಮಕ್ಕಳು, ಪತಿ, ಬಾಲಿವುಡ್, ಫಿಟ್​ನೆಸ್.. ಹೀಗೆ ಹಲವಾರು ವಿಷಯಗಳ ಕುರಿತು ಕರೀನಾ ಅಲ್ಲಿ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ‘ಲೇಡಿ ಗ್ಯಾಂಗ್​’ನೊಂದಿಗೆ ಕರೀನಾ ಭರ್ಜರಿ ಪೋಸ್ ಕೊಟ್ಟಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಕರೀನಾ ಸಹೋದರಿ ಕರಿಷ್ಮಾ ಕಪೂರ್, ಮಲೈಕಾ ಅರೋರಾ ಸೇರಿದಂತೆ ಹಲವರಿರುವ ಈ ಚಿತ್ರ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕರೀನಾ ಕಪೂರ್, ಅದರಲ್ಲಿ ತಮ್ಮ ಸ್ನೇಹಿತೆಯರು ಹಾಗೂ ಸಹೋದರಿಯೊಂದಿಗೆ ಭರ್ಜರಿ ಪೋಸ್ ಕೊಟ್ಟಿದ್ದಾರೆ. ‘ಮೈ ಫಾರೆವರ್ ಗರ್ಲ್ಸ್’ ಎಂದು ಅವರು ಶೀರ್ಷಿಕೆ ನೀಡಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಕರೀನಾ ಸಹೋದರಿ ಕರಿಷ್ಮಾ ಕಪೂರ್, ಬಾಲಿವುಡ್ ನಟಿಯರಾದ ಮಲೈಕಾ ಅರೋರಾ, ಅಮೃತಾ ಅರೋರಾ ಹಾಗೂ ಮೇಕಪ್ ಆರ್ಟಿಸ್ಟ್ ಮಲ್ಲಿಕಾ ಭಟ್ ಕಾಣಿಸಿಕೊಂಡಿದ್ದು, ಭರ್ಜರಿ ಪೋಸ್ ನೀಡಿದ್ದಾರೆ.

ಕರೀನಾ ಹಂಚಿಕೊಂಡ ಚಿತ್ರ ಇಲ್ಲಿದೆ:

ಇತ್ತೀಚೆಗಷ್ಟೇ ಪತಿ ಸೈಫ್ ಅಲಿ ಖಾನ್ ಹಾಗೂ ಮಕ್ಕಳಾದ ತೈಮೂರ್ ಹಾಗೂ ಜೇಹ್ ಜೊತೆ ಕರೀನಾ ಮಾಲ್ಡೀವ್ಸ್​ಗೆ ಹೋಗಿ ಬಂದಿದ್ದರು. ಸೈಫ್ ಜನ್ಮದಿನವನ್ನು ಅಲ್ಲಿ ಸಂತಸದಿಂದ ಆಚರಿಸಿದ್ದ ಕರೀನಾ ಕುಟುಂಬ, ಎರಡನೇ ಮಗ ಜೇಹ್​ಗೆ ಆರು ತಿಂಗಳು ತುಂಬಿದ ಸಂಭ್ರಮವನ್ನೂ ಆಚರಿಸಿಕೊಂಡಿತ್ತು. ಕೆಲ ಸಮಯದ ಹಿಂದಷ್ಟೇ ಕರೀನಾ ತಮ್ಮ ಮೊದಲ ಪುಸ್ತಕ ‘ಪ್ರೆಗ್ನನ್ಸಿ ಬೈಬಲ್’ ಅನ್ನು ಬಿಡುಗಡೆಗೊಳಿಸಿದ್ದರು. ಅದರಲ್ಲಿ ಹಲವಾರು ವಿಷಯಗಳನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದರು.

ಚಿತ್ರಗಳ ವಿಷಯಕ್ಕೆ ಬಂದರೆ ಕರೀನಾ ಅಮೀರಾ ಖಾನ್ ಹಾಗೂ ಕಿರಣ್ ರಾವ್ ನಿರ್ಮಾಣ ಮಾಡುತ್ತಿರುವ, ಅಮೀರಾ ಖಾನ್ ನಟಿಸುತ್ತಿರುವ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಹೊರತಾಗಿ ಅವರು ಬೇರೆ ಯಾವುದೇ ಚಿತ್ರಗಳನ್ನು ಘೋಷಿಸಿಲ್ಲ. ಆದರೆ, ನಿರ್ಮಾಣ ಕ್ಷೇತ್ರಕ್ಕೆ ಕಾಲಿಡುತ್ತಿರುವ ಅವರು, ತಮ್ಮ ಪ್ರೊಡಕ್ಷನ್​ನ ಮೊದಲ ಚಿತ್ರವನ್ನು ಘೋಷಿಸಿದ್ದಾರೆ. ಆ ಚಿತ್ರಕ್ಕೆ ಏಖ್ತಾ ಕಪೂರ್ ಜಂಟಿಯಾಗಿ ಬಂಡವಾಳ ಹೂಡಲಿದ್ದು, ಹನ್ಸಲ್ ಮೆಹ್ತಾ ನಿರ್ದೇಶಿಸಲಿದ್ದಾರೆ.

ಇದನ್ನೂ ಓದಿ:

ನೀನು ಗಂಡಸಾಗಿರಬಹುದು, ಆದರೆ ನಿನಗಿಂತ ಹೆಚ್ಚು ಪ್ರಬುದ್ಧತೆ ನನಗಿದೆ; ಸಿಟ್ಟಾದ ವೈಷ್ಣವಿ

‘ರಮ್ಯಾ-ರಕ್ಷಿತಾ ನಡುವೆ ಆ ವಿಚಾರಕ್ಕೆ ಕಿರಿಕ್​ ಆಗಿತ್ತು’; ಶೂಟಿಂಗ್​ ಸಮಯದ ವಿವರ ತೆರೆದಿಟ್ಟ ಕವಿತಾ ಲಂಕೇಶ್​

(Kareena Kapoor poses with Karishma Malaika and her Lady gang got fans attention)