ಬಾಲಿವುಡ್ ಅಥವಾ ಹಾಲಿವುಡ್- ನಿಮ್ಮ ಆಯ್ಕೆ ಯಾವುದು ಎಂಬ ಪ್ರಶ್ನೆಗೆ ಮುಖ ತಿರುಗಿಸಿಕೊಂಡು ನಡೆದ ಪ್ರಿಯಾಂಕ

ಬಾಲಿವುಡ್​ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಹಂಚಿಕೊಂಡ ವಿಡಿಯೊವೊಂದರಲ್ಲಿ ಬಾಲಿವುಡ್ ಅಥವಾ ಹಾಲಿವುಡ್, ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

ಬಾಲಿವುಡ್ ಅಥವಾ ಹಾಲಿವುಡ್- ನಿಮ್ಮ ಆಯ್ಕೆ ಯಾವುದು ಎಂಬ ಪ್ರಶ್ನೆಗೆ ಮುಖ ತಿರುಗಿಸಿಕೊಂಡು ನಡೆದ ಪ್ರಿಯಾಂಕ
ಪ್ರಿಯಾಂಕಾ ಚೋಪ್ರಾ

ಬಾಲಿವುಡ್​ನಲ್ಲಿ ಮಿಂಚಿ ಪ್ರಸ್ತುತ ಹಾಲಿವುಡ್ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿರುವ ಪ್ರಿಯಾಣಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ತಮ್ಮ ಪತಿಯೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಂಡು ಅವರು ಸುದ್ದಿಯಾಗಿದ್ದರು. ಪ್ರಸ್ತುತ ಅವರು ಹಂಚಿಕೊಂಡ ವಿಡಿಯೊವೊಂದು ವೈರಲ್ ಆಗಿದ್ದು, ಅದರಲ್ಲಿ ಹಲವಾರು ಪ್ರಶ್ನೆಗಳಿಗೆ ಪ್ರಿಯಾಂಕಾ ಉತ್ತರಿಸಿದ್ದಾರೆ.

‘ದಿ ಮ್ಯಾಟ್ರಿಕ್ಸ್’ ಸರಣಿಯ ಬಹು ನಿರೀಕ್ಷಿತ ಚಿತ್ರವಾದ ‘ದಿ ಮ್ಯಾಟ್ರಿಕ್ಸ್: ರಿಸರೆಕ್ಷನ್ಸ್’ ಚಿತ್ರದಲ್ಲಿ ಖ್ಯಾತ ನಟ ಕಿಯಾನು ರೀವ್ಸ್ ಅವರೊಂದಿಗೆ ಪ್ರಿಯಾಂಕಾ ಕಾಣಿಸಿಕೊಳ್ಳುತ್ತಿದ್ದಾರೆ. ಚಾಲೆಂಜ್ ವಿಡಿಯೊ ಒಂದರಲ್ಲಿ ಪ್ರಿಯಾಂಕ ತಮ್ಮ ಹಲವಾರು ಪ್ರಶ್ನೆಗಳಿಗೆ ತಮ್ಮ ಆಯ್ಕೆಯನ್ನು ತಿಳಿಸಿದ್ದಾರೆ. ಅದರಲ್ಲಿ ಪ್ರಿಯಾಂಕಾ, ಕ್ವಾಂಟಿಟಿಗಿಂತ ಕ್ವಾಲಿಟಿಯನ್ನು, ಬಿಸಿಬಿಸಿಯಾದ ಕಾಫಿಗಿಂತ ಕೋಲ್ಡ್ ಕಾಫಿಯನ್ನು ಇಷ್ಟಪಟ್ಟಿದ್ದಾರೆ. ಪ್ರಿಯಾಂಕಾ ಅವರ ಹೇರ್​ಕೇರ್ ಬ್ರಾಂಡ್ ಆದ ಅನೊಮಲಿ ಇಂದ ಈ ವಿಡಿಯೊ ಚಾಲೆಂಜ್ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಪ್ರಿಯಾಂಕಾ ಬಾಲಿವುಡ್ ಅಥವಾ ಹಾಲಿವುಡ್ ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ.

ವಿಡಿಯೊದಲ್ಲಿ ಬಾಲಿವುಡ್ ಅಥವಾ ಹಾಲಿವುಡ್ ಎಂಬ ಪ್ರಶ್ನೆ ಪ್ರಿಯಾಂಕಾಗೆ ಎದುರಾದಾಗ ಆಕೆ ನಗುತ್ತಾ, ‘ಐ ಕ್ವಿಟ್’ ಎಂದು ಹೇಳಿ ಮುಖ ತಿರುಗಿಸಿಕೊಂಡು ತೆರಳಿದ್ದಾರೆ. ಇದಕ್ಕೆ ಅಡಿಬರಹವೊಂದನ್ನೂ ನೀಡಿರುವ ಪ್ರಿಯಾಂಕಾ, ‘ಕೆಲವು ಪ್ರಶ್ನೆಗಳಿಗೆ ಉತ್ತರಿಸದಿರುವುದೇ ಒಳ್ಳೆಯದು’ ಎಂದು ಕಣ್ಣು ಹೊಡೆಯುವ ಇಮೋಜಿಯೊಂದಿಗೆ ಬರೆದುಕೊಂಡಿದ್ದಾರೆ. ಪ್ರಿಯಾಂಕಾ ಅವರ ಈ ಉತ್ತರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಆ ವಿಡಿಯೊ ಇಲ್ಲಿದೆ.

ಪ್ರಿಯಾಂಕಾ ಚೋಪ್ರಾ ವೆಬ್ ಸೀರಿಸ್​ಗಳಲ್ಲಿ ಬ್ಯುಸಿ ಇದ್ದು, ‘ಸಿಟಾಡೆಲ್’​ ವೆಬ್​ ಸೀರಿಸ್​ನಲ್ಲಿ ಪ್ರಿಯಾಂಕಾ ಚೋಪ್ರಾ ಸ್ಪೈ ಆಗಿ ಕಾಣಿಸಿಕೊಂಡಿದ್ದಾರೆ. ಗೇಮ್​ ಆಫ್​ ಥ್ರೋನ್ಸ್​ ಅಲಮ್ ಮತ್ತು ಎಟರ್ನಲ್ಸ್ ಸ್ಟಾರ್ ರಿಚರ್ಡ್ ಮ್ಯಾಡೆನ್ ಕೂಡ ಈ ವೆಬ್​ ಸೀರಿಸ್​ನಲ್ಲಿ ಇದ್ದಾರೆ. ಇದು ಅಮೇಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗುತ್ತಿದೆ.  ಈ ಮೂಲಕ ಅವರು ಇದೇ ಮೊದಲ ಬಾರಿಗೆ ಒಟಿಟಿಗೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಚಿತ್ರೀಕರಣದ ಸಂದರ್ಭದಲ್ಲಿ ಆದ ಸಣ್ಣ ಗಾಯದ ಕುರಿತು ಚಿತ್ರವೊಂದನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ:

ಕ್ಯಾಬ್​ ಡ್ರೈವರ್​ಗಳ ಕಥೆ ಹೇಳುವ ‘ಯೆಲ್ಲೋ ಬೋರ್ಡ್​’; ಕಿಚ್ಚ ಶುಭಕೋರಿದ ಈ ಸಿನಿಮಾದಲ್ಲಿ ಏನಿದೆ ವಿಶೇಷ?

Armaan Kohli: ಡ್ರಗ್ಸ್​ ಕೇಸ್​ನಲ್ಲಿ ನಟ ಅರ್ಮಾನ್​ ಕೊಹ್ಲಿ ಬಂಧನ; ಮನೆಯಲ್ಲಿ ಮಾದಕ ವಸ್ತು​ ಪತ್ತೆ

(Bollywood or Hollywood what is Priyanka Chopra’s selection here is a video)

Read Full Article

Click on your DTH Provider to Add TV9 Kannada