Armaan Kohli: ಡ್ರಗ್ಸ್​ ಕೇಸ್​ನಲ್ಲಿ ನಟ ಅರ್ಮಾನ್​ ಕೊಹ್ಲಿ ಬಂಧನ; ಮನೆಯಲ್ಲಿ ಮಾದಕ ವಸ್ತು​ ಪತ್ತೆ

Armaan Kohli arrest: ಡ್ರಗ್ಸ್​ ಕೇಸ್​ನಲ್ಲಿ ಕಿರುತೆರೆ ನಟ ಗೌರವ್​ ದೀಕ್ಷಿತ್ ಅವರನ್ನು ಶನಿವಾರ (ಆ.28) ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ ಅರ್ಮಾನ್​ ಕೊಹ್ಲಿ ಅವರನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

Armaan Kohli: ಡ್ರಗ್ಸ್​ ಕೇಸ್​ನಲ್ಲಿ ನಟ ಅರ್ಮಾನ್​ ಕೊಹ್ಲಿ ಬಂಧನ; ಮನೆಯಲ್ಲಿ ಮಾದಕ ವಸ್ತು​ ಪತ್ತೆ
ಡ್ರಗ್ಸ್​ ಕೇಸ್​ನಲ್ಲಿ ನಟ ಅರ್ಮಾನ್​ ಕೊಹ್ಲಿ ಬಂಧನ
Follow us
TV9 Web
| Updated By: ಮದನ್​ ಕುಮಾರ್​

Updated on: Aug 29, 2021 | 11:49 AM

ಚಿತ್ರರಂಗಕ್ಕೆ ಅಂಟಿರುವ ಡ್ರಗ್ಸ್​​ (Drugs Case) ಜಾಲದ ನಂಟು ತುಂಬಾ ವಿಸ್ತಾರವಾಗಿದೆ. ತನಿಖೆ ಮಾಡಿದಂತೆಲ್ಲ ಇದರ ವ್ಯಾಪ್ತಿ ವಿಸ್ತಾರ ಆಗುತ್ತಲೇ ಇದೆ. ಮಾದಕ ವಸ್ತು ಸೇವನೆ ಮತ್ತು ಮಾರಾಟ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಈಗಾಗಲೇ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳನ್ನು ಎನ್​ಸಿಬಿ (NCB) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈಗ ನಟ ಅರ್ಮಾನ್​ ಕೊಹ್ಲಿ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿ, ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅರ್ಮಾನ್​ ಕೊಹ್ಲಿ (Armaan Kohli) ಅವರನ್ನು ಬಂಧಿಸಲಾಗಿದೆ.

ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಅರ್ಮಾನ್​ ಕೊಹ್ಲಿ ಫೇಮಸ್​ ಆಗಿದ್ದಾರೆ. ಮುಂಬೈನಲ್ಲಿ ಹರಡಿರುವ ಡ್ರಗ್ಸ್​ ಜಾಲವನ್ನು ಎನ್​ಸಿಬಿ ಅಧಿಕಾರಿಗಳು ಭೇದಿಸುತ್ತಿದ್ದಾರೆ. ಶನಿವಾರ (ಆ.28) ಅಜಯ್​ ರಾಜು ಸಿಂಗ್​ ಎಂಬ ಡ್ರಗ್​ ಪೆಡ್ಲರ್​ನನ್ನು ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ ಅರ್ಮಾನ್​ ಕೊಹ್ಲಿ ಮನೆ ಮೇಲೆ ದಾಳಿ ಮಾಡಲಾಯಿತು. ಆಗ ಅನೇಕ ಮಾದಕ ವಸ್ತುಗಳು ಅವರ ಮನೆಯಲ್ಲಿ ಪತ್ತೆ ಆಗಿವೆ ಎನ್ನಲಾಗಿದೆ.

ಬಾಲಿವುಡ್​ ನಿರ್ದೇಶಕ ರಾಜ್​ಕುಮಾರ್​ ಕೊಹ್ಲಿ ಹಾಗೂ ನಟಿ ನಿಶಿ ಅವರ ಪುತ್ರ ಅರ್ಮಾನ್​ ಕೊಹ್ಲಿ. ಬಾಲನಟನಾಗಿಯೇ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1992ರಲ್ಲಿ ಅವರ ತಂದೆಯೇ ನಿರ್ದೇಶಿಸಿದ ‘ವಿರೋಧಿ’ ಸಿನಿಮಾ ಮೂಲಕ ಅವರು ಹೀರೋ ಆದರು. ನಂತರ ಅನೇಕ ಸಿನಿಮಾಗಳಲ್ಲಿ ಅವರು ನಾಯಕನಾಗಿ ನಟಿಸಿದರು. ಹಿಂದಿ ಬಿಗ್​ ಬಾಸ್​ ಸೀಸನ್​ 7ರಲ್ಲಿ ಅವರು ಸ್ಪರ್ಧಿಸಿದ್ದರು. 98 ದಿನಗಳ ಕಾಲ ಪೈಪೋಟಿ ನೀಡಿದ್ದರು. ಈಗ ಡ್ರಗ್ಸ್​ ಕೇಸ್​ನಲ್ಲಿ ಆರೋಪಿಯಾಗಿ ಪೊಲೀಸರ ಅತಿಥಿಯಾಗಿದ್ದಾರೆ.

ಇದೇ ಕೇಸ್​ನಲ್ಲಿ ಶನಿವಾರ (ಆ.28) ಕಿರುತೆರೆ ನಟ ಗೌರವ್​ ದೀಕ್ಷಿತ್ ಅವರನ್ನು ಬಂಧಿಸಲಾಗಿತ್ತು. ಇನ್ನೂ ಅನೇಕರು ಈ ಜಾಲದಲ್ಲಿ ತೊಡಗಿಕೊಂಡಿರುವ ಸಾಧ್ಯತೆ ಇದ್ದು, ಅವರೆಲ್ಲರಿಗೂ ಬಂಧನದ ಭೀತಿ ಎದುರಾಗಿದೆ. ಕನ್ನಡ, ತೆಲುಗು ಸೇರಿ ಎಲ್ಲ ಭಾಷೆಯ ಚಿತ್ರರಂಗದಲ್ಲೂ ಡ್ರಗ್ಸ್​ ವಾಸನೆ ಬಡಿಯುತ್ತಿದೆ. ಈ ದಂಧೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯಲ್ಲೂ ಸೆಲೆಬ್ರಿಟಿಗಳು ಭಾಗಿ ಆಗಿರುವ ಶಂಕೆ ಇದೆ. ಹಾಗಾಗಿ ಕೆಲವೇ ದಿನಗಳ ಹಿಂದೆ ಟಾಲಿವುಡ್​ನ ಅನೇಕ ಟಾಪ್​ ನಟ-ನಟಿಯರಿಗೆ ಜಾರಿ ನಿರ್ದೇಶನಾಲಯ ಸಮನ್ಸ್​ ನೀಡಿತ್ತು.

ಇದನ್ನೂ ಓದಿ:

ಡ್ರಗ್ಸ್​ ಕೇಸ್​: ರಾಣಾ ದಗ್ಗುಬಾಟಿ, ರಾಕುಲ್, ರವಿತೇಜ ಸೇರಿ ಟಾಲಿವುಡ್​ನ 8 ಸೆಲೆಬ್ರಿಟಿಗಳಿಗೆ ಇಡಿ ಸಮನ್ಸ್​

ವಿಡಿಯೋದಲ್ಲಿ ಅಪ್ಪನ ಜೊತೆಯೇ ಲೈಂಗಿಕತೆ, ಪ್ರೆಗ್ನೆನ್ಸಿ, ಡ್ರಗ್ಸ್​ ಬಗ್ಗೆ ಮಾತಾಡಿದ ಆಲಿಯಾಗೆ ನೆಟ್ಟಿಗರಿಂದ ಕೆಟ್ಟ ಕಮೆಂಟ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ