ಬಾಯ್​ಫ್ರೆಂಡ್​ ಜತೆ ಗಾಂಜಾ ಸೇವಿಸುವಾಗ ಬಲೆಗೆ ಬಿದ್ದ ಮತ್ತೋರ್ವ ನಟಿ; ವೈದ್ಯಕೀಯ ಪರೀಕ್ಷೆಯಲ್ಲೂ ನಿಷೇಧಿತ ವಸ್ತು ಸೇವನೆ ದೃಢ

ಇವರು ಸೇವಿಸಿದ ಡ್ರಗ್ಸ್​ನ ಮೂಲ ಯಾವುದು, ಅದು ಎಲ್ಲಿಂದ ಬಂತು, ಯಾರ ಮೂಲಕ ಇವರ ಕೈ ಸೇರಿತು ಎಂಬೆಲ್ಲಾ ವಿಚಾರಗಳನ್ನು ತನಿಖೆ ಮಾಡಲಾಗುತ್ತಿದೆ. ಭಾನುವಾರ ಇವರನ್ನು ವಶಕ್ಕೆ ಪಡೆದರೂ ಸೋಮವಾರ ಜಾಮೀನು ಲಭಿಸಿದ ಕಾರಣ ಹೊರಬಿಡಲಾಗಿತ್ತು. ಇದೀಗ ವೈದ್ಯಕೀಯ ವರದಿಯಲ್ಲಿ ನಿಷೇಧಿತ ವಸ್ತು ಸೇವನೆ ದೃಢಪಟ್ಟಿರುವುದರಿಂದ ಪ್ರಕರಣ ಬಿಗಿಯಾಗಲಿದೆ.

ಬಾಯ್​ಫ್ರೆಂಡ್​ ಜತೆ ಗಾಂಜಾ ಸೇವಿಸುವಾಗ ಬಲೆಗೆ ಬಿದ್ದ ಮತ್ತೋರ್ವ ನಟಿ; ವೈದ್ಯಕೀಯ ಪರೀಕ್ಷೆಯಲ್ಲೂ ನಿಷೇಧಿತ ವಸ್ತು ಸೇವನೆ ದೃಢ
ನೈರಾ ಶಾಹ್

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಣ್ಣದ ಲೋಕದ ಮತ್ತೋರ್ವ ನಟಿ ಬಲೆಗೆ ಬಿದ್ದಿದ್ದಾರೆ. ಮುಂಬೈನ ಹೊಟೇಲ್​ವೊಂದರಲ್ಲಿ ಬರ್ತ್​ಡೇ ಪಾರ್ಟಿ ಸಮಯದಲ್ಲಿ ಗಾಂಜಾ ಸೇವಿಸುತ್ತಿದ್ದ ಟಾಲಿವುಡ್ ನಟಿ ನೈರಾ ಶಾಹ್ ಕಳೆದ ಭಾನುವಾರ (ಜೂನ್ 13) ಡ್ರಗ್ಸ್​ ಸೇವನೆ ವೇಳೆ ಸಿಕ್ಕಿಬಿದ್ದಿದ್ದು ಇದೀಗ ವೈದ್ಯಕೀಯ ಪರೀಕ್ಷೆಯಲ್ಲಿಯೂ ಗಾಂಜಾ ಸೇವಿಸಿರುವುದು ದೃಢವಾಗಿದೆ. ಬಾಯ್​ಫ್ರೆಂಡ್ ಜತೆಯಲ್ಲಿ ಗಾಂಜಾ ಸೇವಿಸುತ್ತಿರುವಾಗಲೇ ಎನ್​ಸಿಬಿ ಅಧಿಕಾರಿಗಳು ದಾಳಿ ಮಾಡಿ ನಟಿ ಹಾಗೂ ಆಕೆಯ ಬಾಯ್​ಫ್ರೆಂಡ್ ಇಬ್ಬರನ್ನೂ ಬಂಧಿಸಿದ್ದಾರೆ.

ಜುಹೂನಲ್ಲಿರುವ ಹೊಟೇಲ್​ನಲ್ಲಿ ಕಳೆದ ಭಾನುವಾರ ಬರ್ತ್​ಡೇ ಪಾರ್ಟಿ ಆಚರಿಸುತ್ತಿದ್ದ ವೇಳೆ ನಟಿ ನೈರಾ ಶಾಹ್ ತನ್ನ ಬಾಯ್​ಫ್ರೆಂಡ್ ಆಶಿಕ್ ಸಾಜೀದ್ ಜತೆಗೆ ಗಾಂಜಾ ಸೇವನೆ ಮಾಡಿದ್ದಾರೆ. ಈ ವೇಳೆ ಅಲ್ಲಿಗೆ ದಾಳಿ ಮಾಡಿದ ಎನ್​ಸಿಬಿ ಅಧಿಕಾರಿಗಳು ನಸುಕಿನ ಮೂರು ಗಂಟೆ ವೇಳೆಗೆ ಕೋಣೆಯ ಬಾಗಿಲು ಬಡಿದಿದ್ದಾರೆ. ಆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮಾದಕ ದ್ರವ್ಯಗಳು ಸಿಕ್ಕಿದ್ದು, ಅದರ ಆಧಾರದ ಮೇಲೆಯೇ ವಶಕ್ಕೆ ಪಡೆದಿದ್ದಾರೆ.

ಇಬ್ಬರ ಮೇಲೆಯೂ ಐಪಿಸಿ ಸೆಕ್ಷನ್​ 274ರ ಅಡಿಯಲ್ಲಿ ಪ್ರಕರಣ ದಾಖಲಿಸಿ ವೈದ್ಯಕೀಯ ಪರೀಕ್ಷೆಗೂ ಒಳಪಡಿಸಿದ್ದಾರೆ. ವೈದ್ಯಕೀಯ‌ ಪರೀಕ್ಷೆಯಲ್ಲಿ ನಿಷೇಧಿತ ಪದಾರ್ಥಗಳ ಸೇವನೆ ಮಾಡಿದ್ದಾಗಿ ವರದಿ ಬಂದ ಕಾರಣ ಅವರನ್ನು ಬಂಧಿಸಲಾಗಿದೆ. ಸದ್ಯ ಇವರು ಮಾದಕ ವಸ್ತು ಸೇವನೆಯಲ್ಲಿ ಮಾತ್ರ ತೊಡಗಿದ್ದರೇ ಅಥವಾ ಈ ದಂಧೆಯ ಪಾಲುದಾರರೂ ಆಗಿದ್ದರಾ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

 

View this post on Instagram

 

A post shared by Naira Shah (@iamnairashah)

ಅಲ್ಲದೇ, ಇವರು ಸೇವಿಸಿದ ಡ್ರಗ್ಸ್​ನ ಮೂಲ ಯಾವುದು, ಅದು ಎಲ್ಲಿಂದ ಬಂತು, ಯಾರ ಮೂಲಕ ಇವರ ಕೈ ಸೇರಿತು ಎಂಬೆಲ್ಲಾ ವಿಚಾರಗಳನ್ನು ತನಿಖೆ ಮಾಡಲಾಗುತ್ತಿದೆ. ಭಾನುವಾರ ಇವರನ್ನು ವಶಕ್ಕೆ ಪಡೆದರೂ ಸೋಮವಾರ ಜಾಮೀನು ಲಭಿಸಿದ ಕಾರಣ ಹೊರಬಿಡಲಾಗಿತ್ತು. ಇದೀಗ ವೈದ್ಯಕೀಯ ವರದಿಯಲ್ಲಿ ನಿಷೇಧಿತ ವಸ್ತು ಸೇವನೆ ದೃಢಪಟ್ಟಿರುವುದರಿಂದ ಪ್ರಕರಣ ಬಿಗಿಯಾಗಲಿದೆ.

ಇದೀಗ ನೈರಾ ಶಾಹ್​ ಮಾದಕ ವಸ್ತು ಸೇವನೆ ಮಾಡುತ್ತಿದ್ದ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅವರೆಡೆಗಿನ ಕುತೂಹಲ ಜಾಸ್ತಿಯಾಗಿದ್ದು, ಜನರು ಅವರನ್ನು ಹೆಚ್ಚೆಚ್ಚು ಹುಡುಕುತ್ತಿದ್ದಾರೆ. ಅವರ ಫೋಟೋಗಳು ಕೂಡಾ ಇದೇ ಕಾರಣಕ್ಕೆ ವೈರಲ್​ ಆಗಲಾರಂಭಿಸಿವೆ.

 

View this post on Instagram

 

A post shared by Naira Shah (@iamnairashah)

ಇದನ್ನೂ ಓದಿ:
ಸುಶಾಂತ್​-ಸಾರಾ ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರಾ? ಕೊನೆಗೂ ಕಳಚಿತು ಕಳಂಕ 

ಸಿಂಗಾಪೂರದಲ್ಲಿ 25 ವರ್ಷದಲ್ಲೇ ಅತಿ ದೊಡ್ಡ ಪ್ರಮಾಣದ ಮಾದಕವಸ್ತುಗಳು ವಶಕ್ಕೆ