ಬಿಗ್​ಬಾಸ್​​ ಮನೆಯೊಳಗೆ ಮತ್ತೆ ಹೋಗೋಕೆ ಬ್ಯಾಗ್​ ಪ್ಯಾಕ್ ಮಾಡಿದ ಸ್ಪರ್ಧಿಗಳು; ಒಳಹೋಗುವವರು ಬರೀ 11 ಮಂದಿ ಅಲ್ಲ!

Bigg Boss Kannada: ವಾಹಿನಿ ಇದೀಗ ಹಂಚಿಕೊಂಡಿರುವ ಫೋಟೋದಲ್ಲಿ 12 ಸೂಟ್​ಕೇಸ್​ಗಳು ಇರುವುದು ಕಂಡುಬಂದಿದ್ದು, ಇನ್ನೊಂದು ಸ್ಪರ್ಧಿ ಯಾರು ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಕೆಲವರ ಪ್ರಕಾರ ಆಟ ಅರ್ಧಕ್ಕೆ ನಿಂತು ಮುಂದುವರೆಯುತ್ತಿರುವ ಕಾರಣ ಒಂಚೂರು ಗಮ್ಮತ್ತಿರಲಿ ಎಂದು ವೈಲ್ಡ್ ಕಾರ್ಡ್​ ಎಂಟ್ರಿ ಇರಲಿದೆ ಎಂಬ ಮಾತು ಕೇಳಿಬರುತ್ತಿದೆ.

ಬಿಗ್​ಬಾಸ್​​ ಮನೆಯೊಳಗೆ ಮತ್ತೆ ಹೋಗೋಕೆ ಬ್ಯಾಗ್​ ಪ್ಯಾಕ್ ಮಾಡಿದ ಸ್ಪರ್ಧಿಗಳು; ಒಳಹೋಗುವವರು ಬರೀ 11 ಮಂದಿ ಅಲ್ಲ!
ಬಿಗ್​​ಬಾಸ್​​ ಕನ್ನಡ 8
TV9kannada Web Team

| Edited By: Apurva Kumar Balegere

Jun 16, 2021 | 10:28 AM


ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಲಾಕ್​ಡೌನ್​ ಹೇರಿದ್ದ ಕಾರಣ ಅರ್ಧಕ್ಕೇ ಸ್ಥಗಿತಗೊಂಡಿದ್ದ ಕನ್ನಡದ ಬಿಗ್​ಬಾಸ್ ಸೀಸನ್​ 8 (BBK 8) ರಿಯಾಲಿಟಿ ಶೋ ಮತ್ತೆ ಆರಂಭವಾಗುವ ಸೂಚನೆ ವಾಹಿನಿ ಕಡೆಯಿಂದಲೇ ಸಿಕ್ಕಿದೆ. ಕಲರ್ಸ್​ ಕನ್ನಡ ವಾಹಿನಿಯ ಸಾಮಾಜಿಕ ಜಾಲತಾಣಗಳಲ್ಲಿ ಇಂದು (ಜೂನ್ 16) ಬೆಳ್ಳಂಬೆಳಗ್ಗೆ ಹಂಚಿಕೊಳ್ಳಲಾಗಿರುವ ಫೋಟೋ ಒಂದು ಬಿಗ್​ಬಾಸ್​ ಮುಂದುವರೆಯಲಿದೆ ಎಂಬುದಕ್ಕೆ ಪುಷ್ಟಿ ನೀಡಿದ್ದು, ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಈ ಫೋಟೋದಲ್ಲಿ ಮತ್ತೊಂದು ಕುತೂಹಲಕಾರಿ ಅಂಶವೂ ಕಂಡುಬಂದಿದ್ದು, ನೋಡುಗರು ಅದರೊಳಗಿನ ಲೆಕ್ಕಾಚಾರವೇನು ಎಂದು ತಲೆಕೆಡಿಸಿಕೊಂಡಿದ್ದಾರೆ.

ಕೊರೊನಾ ಸೋಂಕಿನ ಅಬ್ಬರ ಕಡಿಮೆಯಾಗಲಾರಂಭಿಸಿ ಅನ್​ಲಾಕ್​ ಸೂಚನೆ ಸಿಗುತ್ತಿದ್ದಂತೆಯೇ ಬಿಗ್​ಬಾಸ್ ಮತ್ತೆ ಆರಂಭವಾಗಲಿದೆ ಎಂಬ ಅಂತೆಕಂತೆ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಲಾರಂಭಿಸಿದ್ದವಾದರೂ ಅದು ನಿಜವೇ ಎಂಬ ಬಗ್ಗೆ ಕೆಲವರಲ್ಲಿ ಸಣ್ಣ ಅನುಮಾನವೊಂದು ಉಳಿದುಕೊಂಡಿತ್ತು. ಅಲ್ಲದೇ, ಎಲ್ಲಾ ಸ್ಪರ್ಧಿಗಳು ಈಗಾಗಲೇ ಒಮ್ಮೆ ಮನೆಯಿಂದ ಹೊರಬಂದಿರುವ ಕಾರಣ ಮತ್ತೆ ಆಟ ಮುಂದುವರೆಸಿದರೆ ಅವರ ನಡವಳಿಕೆ, ಆಟ ಎಲ್ಲವೂ ಬದಲಾಗುವುದಿಲ್ಲವಾ ಎಂಬ ಗೊಂದಲವೂ ಇತ್ತು. ಆದರೆ, ಈಗ ವಾಹಿನಿಯೇ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿರುವ ಕಾರಣ ಬಿಗ್​ಬಾಸ್ ಮುಂದುವರೆಯುವುದಂತೂ ಖಚಿತವಾಗಿದೆ.

ಆದರೆ, ಈ ಸುಳಿವಿನಲ್ಲಿ ಮಹತ್ತರ ತಿರುವೂ ಇರುವ ಸಾಧ್ಯತೆ ಇದೆ. ಏಕೆಂದರೆ, ಬಿಗ್​ಬಾಸ್ ಅರ್ದಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ್.ಕೆ.ಪಿ, ಮಂಜು ಪಾವಗಡ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್​, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್​, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ ಸೇರಿ ಒಟ್ಟು 10 ಜನ ಇದ್ದರು. ದಿವ್ಯಾ ಉರುಡುಗ ಎಲಿಮಿನೇಟ್ ಆಗದಿದ್ದರೂ ಅನಾರೋಗ್ಯದ ಕಾರಣ ಹೊರಬಂದಿದ್ದರು. ಒಂದುವೇಳೆ ಅವರನ್ನು ಸೇರಿಸಿಕೊಂಡರೂ ಶೋ ನಿಲ್ಲುವಾಗ 11 ಜನರಿದ್ದಂತೆ ಆಗುತ್ತದೆ.

ಅಂದರೆ ಈಗ ಬಿಗ್​ಬಾಸ್​ ಮುಂದುವರೆಯುವುದಾದರೆ ಈ 11 ಜನರನ್ನು ಇಟ್ಟುಕೊಂಡು ಮುಂದುವರೆಯಬೇಕು. ಆದರೆ, ವಾಹಿನಿ ಇದೀಗ ಹಂಚಿಕೊಂಡಿರುವ ಫೋಟೋದಲ್ಲಿ 12 ಸೂಟ್​ಕೇಸ್​ಗಳು ಇರುವುದು ಕಂಡುಬಂದಿದ್ದು, ಇನ್ನೊಂದು ಸ್ಪರ್ಧಿ ಯಾರು ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಕೆಲವರ ಪ್ರಕಾರ ಆಟ ಅರ್ಧಕ್ಕೆ ನಿಂತು ಮುಂದುವರೆಯುತ್ತಿರುವ ಕಾರಣ ಒಂಚೂರು ಗಮ್ಮತ್ತಿರಲಿ ಎಂದು ವೈಲ್ಡ್ ಕಾರ್ಡ್​ ಎಂಟ್ರಿ ಇರಲಿದೆ ಎಂಬ ಮಾತು ಕೇಳಿಬರುತ್ತಿದೆ.

ಮೂಲಗಳ ಪ್ರಕಾರ ಜೂನ್​ ಕೊನೆಯಲ್ಲಿ ಬಿಗ್​ ಬಾಸ್ ಆರಂಭವಾಗಲಿದ್ದು, ಹೊಸ ರೀತಿಯಲ್ಲಿ ಶೋ ಮುಂದುವರಿಯಲಿದೆಯಂತೆ. ಈ ವಿಚಾರ ಸದ್ಯ ಅಭಿಮಾನಿಗಳಿಗೆ ಖುಷಿಯಂತೂ ನೀಡಿದೆ. ಇನ್ನು, ಬಿಗ್​ ಬಾಸ್ ಮತ್ತೆ ಆರಂಭವಾದರೆ, ಬಾಕಿ ಉಳಿದ 30 ದಿನಕ್ಕಷ್ಟೇ ಅದನ್ನು ಸೀಮಿತಗೊಳಿಸದೆ ಇನ್ನೂ ವಿಸ್ತರಣೆ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಬಿಗ್​ ಬಾಸ್​ ಪುನರಾರಂಭದ ಕುರಿತು ವಾಹಿನಿ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್​ ತಮ್ಮ ಸಾಮಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:
Bigg Boss Kannada 8: ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಬಗ್ಗೆ ಬಿಗ್​ ಅಪ್​ಡೇಟ್​; ಇನ್ನೂ ಮುಗಿದಿಲ್ಲ ಶೋ? 

ಬಿಗ್​ ಬಾಸ್​ ಹೊಸ ಸೀಸನ್​ನಲ್ಲಿ ರವಿಚಂದ್ರನ್​ ಸಿನಿಮಾ ನಾಯಕಿ? ಕೇಳಿಬರ್ತಿದೆ ಸ್ಟಾರ್ ನಟಿ ಹೆಸರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada