AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಕೆಟ್ಟ ಚಟ ಬಿಡೋಕೆ ತುಂಬಾನೇ ಪ್ರಯತ್ನಿಸುತ್ತಿದ್ದಾರೆ ನಟಿ ಕಾಜೋಲ್​

ಕಾಜೋಲ್​ ಹಾಗೂ ಅಜಯ್​ ದೇವಗನ್ ದಂಪತಿ ಇತ್ತೀಚೆಗೆ ಮುಬೈನಲ್ಲಿ ದುಬಾರಿ ಬೆಲೆಯ ಬಂಗಲೆ ಒಂದನ್ನು ಖರೀದಿಸಿದ್ದರು. ಕಳೆದ ಒಂದು ವರ್ಷದಿಂದ ಮುಂಬೈನಲ್ಲಿ ಇವರು ಹೊಸ ಮನೆಯ ಹುಡುಕಾಟದಲ್ಲಿ ಅವರು ತೊಡಗಿದ್ದರು.

ಈ ಕೆಟ್ಟ ಚಟ ಬಿಡೋಕೆ ತುಂಬಾನೇ ಪ್ರಯತ್ನಿಸುತ್ತಿದ್ದಾರೆ ನಟಿ ಕಾಜೋಲ್​
ಕಾಜೋಲ್
Follow us
ರಾಜೇಶ್ ದುಗ್ಗುಮನೆ
|

Updated on:Jun 15, 2021 | 9:46 PM

ವ್ಯಕ್ತಿ ಎಂದಮೇಲೆ ಒಂದಷ್ಟು ಕೆಟ್ಟ ಚಟ ಇದ್ದೇ ಇರುತ್ತದೆ. ಕೆಲವರು ಕುಡಿದರೆ, ಇನ್ನೂ ಕೆಲವರು ಸಿಗರೇಟ್​ ಸೇದುತ್ತಾರೆ. ಕೆಲವರು ಗುಟ್ಕಾ ಹಾಕುತ್ತಾರೆ. ಅನೇಕರು ಈ ಕೆಟ್ಟ ಚಟದಿಂದಹೊರ ಬರೋಕೆ ಪ್ರಯತ್ನ ಮಾಡುತ್ತಾರೆ. ಸಾಕಷ್ಟು ಸೆಲೆಬ್ರಿಟಿಗಳು ಈ ರೀತಿಯ ಕೆಟ್ಟ ಹವ್ಯಾಸಗಳನ್ನು ಬಿಟ್ಟು ಅನೇಕರಿಗೆ ಮಾದರಿಯಾಗಿದ್ದಾರೆ. ಈಗ ಬಾಲಿವುಡ್​ ನಟಿ, ಅಜಯ್​ ದೇವಗನ್​ ಪತ್ನಿ ಕಾಜೋಲ್​ ಕೂಡ ತಮ್ಮಲ್ಲಿರುವ ಕೆಟ್ಟ ಗುಣ ಬಿಡೋಕೆ ಪ್ರಯತ್ನ ಪಡುತ್ತಿದ್ದಾರಂತೆ.

ಹಾಗಾದರೆ, ಕಾಜೋಲ್​ಗೆ ಯಾವ ಕೆಟ್ಟ ಹವ್ಯಾಸ ಇದೆ? ಬಾಯಲ್ಲಿ ಉಗುರು ಕಡಿಯುವುದು. ಹೌದು, ಕಾಜೋಲ್ ಅವರಿಗೆ ಗೊತ್ತಾಗದಂತೆ ಒಮ್ಮೊಮ್ಮೆ ಉಗುರು ಕಡಿಯುತ್ತಾರಂತೆ. ಇನ್​ಸ್ಟಾಗ್ರಾಂನಲ್ಲಿ ಅವರು ಸ್ಕ್ರಿಪ್ಟ್​ ಓದುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬಾಯಲ್ಲಿ ಉಗುರು ಕಡಿಯುತ್ತಿದ್ದಾರೆ. ಈ ಫೋಟೋಗೆ ಕ್ಯಾಪ್ಶನ್​ ನೀಡಿರುವ ಅವರು, ‘ನಾನು ಇಂದು ನನ್ನ ಉಗುರನ್ನು ಕಡಿಯುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

ನಿತ್ಯ ಕೈಯಿಂದ ಹಲವು ವಸ್ತುಗಳನ್ನು ಮುಟ್ಟುತ್ತೇವೆ. ಹೀಗೆ ಮುಟ್ಟಿದ ಸಂದರ್ಭದಲ್ಲಿ ರೋಗಾಣುಗಳು ಹಾಗು ಕೆಸರು ಉಗುರ ಸಂದಿಯಲ್ಲಿ ಸೇರಿಕೊಳ್ಳುತ್ತವೆ. ಬಾಯಲ್ಲಿ ಉಗುರು ಕಚ್ಚುವುದರಿಂದ ಅದು ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು. ಅದರಲ್ಲೂ ಕೊವಿಡ್ ಹರಡುತ್ತಿರುವ ಈ ಸಂದರ್ಭದಲ್ಲಿ ಇದು ಮತ್ತೂ ಅಪಾಯ. ಈ ಕಾರಣಕ್ಕೆ ಕಾಜೋಲ್​ ಈ ರೀತಿ ಹೇಳಿದ್ದಾರೆ.

ಕಾಜೋಲ್​ ಹಾಗೂ ಅಜಯ್​ ದೇವಗನ್ ದಂಪತಿ ಇತ್ತೀಚೆಗೆ ಮುಬೈನಲ್ಲಿ ದುಬಾರಿ ಬೆಲೆಯ ಬಂಗಲೆ ಒಂದನ್ನು ಖರೀದಿಸಿದ್ದರು. ಕಳೆದ ಒಂದು ವರ್ಷದಿಂದ ಮುಂಬೈನಲ್ಲಿ ಇವರು ಹೊಸ ಮನೆಯ ಹುಡುಕಾಟದಲ್ಲಿ ತೊಡಗಿದ್ದರು. ಆದರೆ ಇವರಿಗೆ ಒಳ್ಳೆಯ ಮನೆ ಸಿಕ್ಕಿರಲಿಲ್ಲ. ಇತ್ತೀಚೆಗೆ ಅವರು ಮುಂಬೈನಲ್ಲಿ ಹೊಸ ಬಂಗಲೆ ಖರೀದಿ ಮಾಡಿದ್ದಾರೆ. ಇದು 590 ಚದರ ಅಡಿ ಇದ್ದು, ಐಷಾರಾಮಿಯಾಗೂ ಇದೆಯಂತೆ. ಅಜಯ್​ ಹಾಗೂ ಕಾಜಲ್​ ಇಬ್ಬರಿಗೂ ಈ ಬಂಗಲೆ ಇಷ್ಟವಾಗಿದ್ದು, ಬರೋಬ್ಬರಿ 60 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ಮಂದಿಗೆ ಬಂಗಲೆ ಖರೀದಿಸೋ ಕ್ರೇಜ್​; 60 ಕೋಟಿ ಕೊಟ್ಟು ಅಜಯ್​ ದೇವಗನ್​ ಮನೆ ಖರೀದಿ

Published On - 9:44 pm, Tue, 15 June 21