ಸುಶಾಂತ್​-ಸಾರಾ ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರಾ? ಕೊನೆಗೂ ಕಳಚಿತು ಕಳಂಕ

Rajesh Duggumane

Rajesh Duggumane | Edited By: TV9 SEO

Updated on: Jun 09, 2021 | 3:20 PM

ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಕೆಲವು ಶಾಕಿಂಗ್​ ವಿಚಾರಗಳನ್ನು ಬಾಯ್ಬಿಟ್ಟಿದ್ದರು.

ಸುಶಾಂತ್​-ಸಾರಾ ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರಾ? ಕೊನೆಗೂ ಕಳಚಿತು ಕಳಂಕ
ಸುಶಾಂತ್​-ಸಾರಾ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಸಾವಿನ ಪ್ರಕರಣ ನಾನಾ ಕವಲುಗಳನ್ನು ಪಡೆದುಕೊಂಡಿದೆ. ಸುಶಾಂತ್​ ಸಿಂಗ್ ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಒಂದು ಕಡೆಯಲ್ಲಿ ಚರ್ಚೆಯಾದರೆ, ಮತ್ತೊಂದು ಕಡೆಯಲ್ಲಿ ಅವರು ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಚರ್ಚೆ ಆಗುತ್ತಿದೆ. ಹೀಗಿರುವಾಗಲೇ ಸುಶಾಂತ್​ ಬಗ್ಗೆ ಬಾಲಿವುಡ್​ ನಟನೋರ್ವ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ಸುಶಾಂತ್​ ಸಿಂಗ್​ ಆತ್ಮಹತ್ಯೆ ನಂತರದಲ್ಲಿ ಡ್ರಗ್ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಮಾದಕವಸ್ತು ನಿಯಂತ್ರಣ ಮಂಡಳಿ ಈ ಪ್ರಕರಣದಲ್ಲಿ ತನಿಖೆ ಆರಂಭಿಸಿತ್ತು. ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಕೆಲವು ಶಾಕಿಂಗ್​ ವಿಚಾರಗಳನ್ನು ಬಾಯ್ಬಿಟ್ಟಿದ್ದರು.

ಸುಶಾಂತ್​ ಸಿಂಗ್​ ಹಾಗೂ ಸೈಫ್​ ಅಲಿ ಖಾನ್​ ಮಗಳು ಸಾರಾ ಅಲಿ ಖಾನ್​, ಕೇದಾರ್​ನಾಥ್​ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಶೂಟಿಂಗ್​ ವೇಳೆ ಸಾರಾ ಹಾಗೂ ಸುಶಾಂತ್​ ಡ್ರಗ್​ ತೆಗೆದುಕೊಳ್ಳುತ್ತಿದ್ದರು ಎಂದು ರಿಯಾ ಎನ್​ಸಿಬಿ ಎದುರು ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರದ ಬಗ್ಗೆ ಕೇದಾರ್​​ನಾಥ್​​​ ಸಿನಿಮಾದಲ್ಲಿ ನಟಿಸಿದ್ದ ನಿತೀಶ್​ ಭಾರದ್ವಾಜ್​ ಮಾತನಾಡಿದ್ದಾರೆ. ಅಲ್ಲದೆ, ಈ ವಿಚಾರದ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದಾರೆ.

‘ಸಾರಾ ಮತ್ತು ನಾನು ಒಮ್ಮೆ ಡ್ರಗ್​ ವಿಚಾರದ ಬಗ್ಗೆ ಮಾತನಾಡಿದ್ದೆವು. ‘ಬಾಲಿವುಡ್​ನಲ್ಲಿ ಡ್ರಗ್​ ಸಮಸ್ಯೆ ಇದೆ’ ಎಂದು ಸಾರಾ ಹೇಳಿಕೊಂಡಿದ್ದರು. ಈ ವೇಳೆ ನಾನು ಸಾರಾ ಬಳಿ ಡ್ರಗ್​​ನಿಂದ ದೂರವೇ ಉಳಿಯುವಂತೆ ಹೇಳಿದ್ದೆ. ಆಗ ಅವರು ಡ್ರಗ್​ ಸುದ್ದಿಗೆ ಹೋಗಿಲ್ಲ, ಹೋಗುವುದೂ ಇಲ್ಲ ಎಂಬುದಾಗಿ ಭಾಷೆ ನೀಡಿದ್ದರು’ ಎಂದಿದ್ದಾರೆ ನಿತೀಶ್​.

‘ಸುಶಾಂತ್​ ಸೆಟ್​ನಲ್ಲಿ ಎಲ್ಲಾದರೂ ಒಮ್ಮೆ ಸಿಗರೇಟ್​ ಸೇದುತ್ತಿದ್ದರು. ಆದರೆ, ಅವರು ಎಂದಿಗೂ ಡ್ರಗ್​ ತೆಗೆದುಕೊಂಡಿದ್ದನ್ನು ನಾನಂತೂ ನೋಡಿಲ್ಲ. ಡ್ರಗ್​ ಸೇವಿಸಿದಾಗ ಕಣ್ಣು ಊದಿಕೊಳ್ಳುತ್ತದೆಯಂತೆ. ಆದರೆ, ನಾನು ಸುಶಾಂತ್​-ಸಾರಾ ಕಣ್ಣನ್ನು ಎಂದಿಗೂ ಆ ರೀತಿ ನೋಡಲೇ ಇಲ್ಲ’ ಎಂದು ಹೇಳುವ ಮೂಲಕ ನಿತೀಶ್​ ಸ್ಪಷ್ಟನೆ ನೀಡಿದ್ದಾರೆ.

ಸುಶಾಂತ್​ ಸಿಂಗ್​ ಬಗ್ಗೆ ನಿತೀಶ್​ ಭಾರದ್ವಾಜ್ ನೀಡಿದ ಹೇಳಿಕೆ ಪ್ರಮುಖವಾಗಲಿದೆ. ರಿಯಾ ಹೇಳಿದ ಹೇಳಿಕೆ ಆಧರಿಸಿ ನಿತೀಶ್​ ಅವರನ್ನು ಕರೆಸಿ ವಿಚಾರಣೆ ನಡೆಸಿದರೆ, ಅವರು ನೀಡುವ ಹೇಳಿಕೆ ಮಹತ್ವದ್ದಾಗಲಿದೆ. ಸದ್ಯ, ನಿತೀಶ್​ ನೀಡಿರುವ ಹೇಳಿಕೆ ಕೇಳಿ ಅನೇಕರು ಸುಶಾಂತ್​-ಸಾರಾ ಮೇಲಿದ್ದ ಕಳಂಕ ಕಳೆಯಿತು ಎಂದಿದ್ದಾರೆ.

ಇದನ್ನೂ ಓದಿ: ಸೈಫ್​ ಪುತ್ರಿಯ ಗಾಂಜಾ ಪುರಾಣ ಬಯಲು ಮಾಡಿದ ರಿಯಾ ಚಕ್ರವರ್ತಿ; ಎನ್​ಸಿಬಿ ಮುಂದೆ ಶಾಕಿಂಗ್​ ಹೇಳಿಕೆ

ಸುಶಾಂತ್ ಜತೆ ಅವರ ಅಕ್ಕ-ಭಾವನೂ ಡ್ರಗ್ಸ್​ ಸೇವಿಸಿದ್ದಾರೆ; ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ರಿಯಾ ಚಕ್ರವರ್ತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada