AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Marvel Loki: ಲೋಕಿಗೆ ಇದೆ ಚೆನ್ನೈ ನಂಟು; ಸಂದರ್ಶನದಲ್ಲಿ ಹೊರ ಬಿತ್ತು ಅಚ್ಚರಿಯ ವಿಚಾರ

ಡಿಸ್ನಿ ಹಾಟ್​ಸ್ಟಾರ್ ಟ್ವಿಟರ್​ನಲ್ಲಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಟಾಮ್​ ಹಿಡ್ಲಸ್ಟನ್ ಸಾಕಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ.

Marvel Loki: ಲೋಕಿಗೆ ಇದೆ ಚೆನ್ನೈ ನಂಟು; ಸಂದರ್ಶನದಲ್ಲಿ ಹೊರ ಬಿತ್ತು ಅಚ್ಚರಿಯ ವಿಚಾರ
ಲೋಕಿ ಪಾತ್ರ
ರಾಜೇಶ್ ದುಗ್ಗುಮನೆ
|

Updated on: Jun 09, 2021 | 4:50 PM

Share

ಟಾಮ್​ ಹಿಡ್ಲಸ್ಟನ್ ಅವರು ಮಾರ್ವೆಲ್​ ಸರಣಿಯಲ್ಲಿ ಲೋಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ಲೋಕಿ’ ಹೆಸರಿನಲ್ಲೇ ಸೀರಿಸ್​ ಬಂದಿದೆ. ಇಂದಿನಿಂದ ಈ ಸೀರೀಸ್​ನ ಪ್ರಸಾರ ಆರಂಭವಾಗಿದೆ. ವಿಶೇಷ ಎಂದರೆ, ಟಾಮ್​ ಅವರಿಗೆ ಚೆನ್ನೈ ನಂಟಿದೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಡಿಸ್ನಿ ಹಾಟ್​ಸ್ಟಾರ್ ಟ್ವಿಟರ್​ನಲ್ಲಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಟಾಮ್​ ಹಿಡ್ಲಸ್ಟನ್ ಸಾಕಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಒಂದು ಶಬ್ದವನ್ನು ನೀಡಲಾಗುತ್ತದೆ. ಅದನ್ನು ನೋಡಿದ ತಕ್ಷಣ ಅವರ ಮನಸ್ಸಿನಲ್ಲಿ ಏನು ಬರುತ್ತದೆ ಎನ್ನುವುದನ್ನು ಟಾಮ್​ ಹೇಳಬೇಕು. ಈ ವೇಳೆ ಭಾರತ ಎನ್ನುವ ಶಬ್ದವನ್ನು ಹೇಳಲಾಯಿತು. ಆಗ ಟಾಮ್​ ‘ಶಾರುಖ್​ ಖಾನ್​’ ಎಂದು ಉತ್ತರಿಸಿದರು. ಇನ್ನು, ಬಾಲಿವುಡ್​ ಎಂದಾಗಲೂ ಅವರು ಹೇಳಿದ್ದು ಶಾರುಖ್​ ಖಾನ್​ ಹೆಸರನ್ನೇ.

ಶಾರುಖ್​ ಖಾನ್​ ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಇಡೀ ಜಗತ್ತಿಗೇ ಪರಿಚಯವಾಗಿದ್ದಾರೆ. ಹೀಗಾಗಿ, ಶಾರುಖ್​ ಹೆಸರು ಟಾಮ್​ ಬಾಯಲ್ಲಿ ಬಂದಿದೆ.

ಇಲ್ಲಿ ಮತ್ತೊಂದು ಅಚ್ಚರಿಯ ವಿಚಾರ ಇದೆ. ಚೆನ್ನೈಗೂ ಟಾಮ್​ಗೂ ಕನೆಕ್ಷನ್​ ಇದೆ. ಭಾರತದ ನಗರ ಎನ್ನುವ ಶಬ್ದವನ್ನು ಟಾಮ್​ ಮುಂದೆ ಇಟ್ಟಾಗ, ‘ಚೆನ್ನೈ’ ಎನ್ನುವ ಉತ್ತರ ಬಂತು. ‘ಮೈ ಅಕ್ಕಾ ಲಿವ್ಸ್​ ದೇರ್.​ (ನನ್ನ ಅಕ್ಕ ಅಲ್ಲಿ ವಾಸವಾಗಿದ್ದಾರೆ) ನಾನು ಅಲ್ಲಿಗೆ ಅನೇಕ ಬಾರಿಗೆ ತೆರಳಿದ್ದೇನೆ. ಚೆನ್ನೈ ಅದ್ಭುತವಾಗಿದೆ’ ಎಂದರು.

ಲೋಕಿ ಮಾರ್ವೆಲ್​ನ ಅವೆಂಜರ್ಸ್​ ಸರಣಿಯಲ್ಲಿ ಕಾಣಿಸಿಕೊಳ್ಳುವ ವಿಲನ್​ ಪಾತ್ರ. 2012ರಲ್ಲಿ ಮೊದಲ ಬಾರಿಗೆ ಅವರು ದಿ ಅವೇಂಜರ್ಸ್​​ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರು ಸಾಕಷ್ಟು ಅವೇಂಜರ್ಸ್​ ಸರಣಿಯಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ:  ಶಾರುಖ್​ ಖಾನ್​ ಮಗಳು ಸುಹಾನಾಗೆ ಬಂತು ಮ್ಯಾರೇಜ್​ ಪ್ರಪೋಸಲ್​; ಹುಡುಗನ ಸ್ಯಾಲರಿ ಎಷ್ಟು ಗೊತ್ತಾ?

ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ