AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕಾಏಕಿ ರಿಯಾಲಿಟಿ ಶೋನಿಂದ ಹೊರ ನಡೆದ ಖ್ಯಾತ ನಿರೂಪಕ; ಮತ್ತೆ ಮರಳಲ್ಲ ಎಂದ ನಟ

ಈ ಬಗ್ಗೆ ಸಂದರ್ಶನವೊಂದರಲ್ಲಿ ಆದಿತ್ಯ ಮಾತನಾಡಿದ್ದಾರೆ. ನಿರೂಪಣೆ ಮಾಡಿದ್ದು ಅವರಿಗೆ ಸಾಕೆನಿಸಿದೆಯಂತೆ. ಜತೆಗೆ ಹೊಸದೇನಾದರೂ ಮಾಡಬೇಕು ಎನ್ನುವ ತುಡಿತ ಹುಟ್ಟಿದೆ.

ಏಕಾಏಕಿ ರಿಯಾಲಿಟಿ ಶೋನಿಂದ ಹೊರ ನಡೆದ ಖ್ಯಾತ ನಿರೂಪಕ; ಮತ್ತೆ ಮರಳಲ್ಲ ಎಂದ ನಟ
ಏಕಾಏಕಿ ರಿಯಾಲಿಟಿ ಶೋನಿಂದ ಹೊರ ನಡೆದ ಖ್ಯಾತ ನಿರೂಪಕ; ಮತ್ತೆ ಮರಳಲ್ಲ ಎಂದ ನಟ
TV9 Web
| Edited By: |

Updated on:Aug 29, 2021 | 5:13 PM

Share

ಉದಿತ್​ ನಾರಾಯಣ್​ ಮಗ ಆದಿತ್ಯ ನಾರಾಯಣ್​ ಅವರು ನಟನೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ, ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ರಿಯಾಲಿಟಿ ಶೋ ನಿರೂಪಣೆ. ಸಾಕಷ್ಟು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿರುವ ಅವರು, ತಮ್ಮ ಭಿನ್ನ ನಿರೂಪಣೆ ಮೂಲಕ ವೀಕ್ಷಕರಿಗೆ ಇಷ್ಟವಾಗಿದ್ದಾರೆ. ಆದರೆ, ಈಗ ಅವರು ಏಕಾಏಕಿ ರಿಯಾಲಿಟಿ ಶೋ ನಿರೂಪಣೆಗೆ ಗುಡ್​ಬೈ ಹೇಳಿದ್ದಾರೆ. ಅಷ್ಟೇ ಅಲ್ಲ, ಮತ್ತೆ ಈ ಕ್ಷೇತ್ರಕ್ಕೆ ಮರಳುವುದಿಲ್ಲ ಎಂದಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಆದಿತ್ಯ ಮಾತನಾಡಿದ್ದಾರೆ. ನಿರೂಪಣೆ ಮಾಡಿದ್ದು ಅವರಿಗೆ ಸಾಕೆನಿಸಿದೆಯಂತೆ. ಜತೆಗೆ ಹೊಸದೇನಾದರೂ ಮಾಡಬೇಕು ಎನ್ನುವ ತುಡಿತ ಹುಟ್ಟಿದೆ. ‘ಶೋಗಳನ್ನು ಹೋಸ್ಟ್​ ಮಾಡುವುದು ಸಾಕೆನಿಸಿದೆ. ಇನ್ನೂ ಮೇಲೆ ಹೋಗಬೇಕು ಎಂಬುದು ನನ್ನ ಆಸೆ. ನಾನು ಕೆಲ ಪ್ರಾಜೆಕ್ಟ್​ಗಳನ್ನು ನಿರ್ಮಾಣ ಮಾಡಬೇಕು. ಒಟಿಟಿ, ಟಿವಿ ಹಾಗೂ ಮ್ಯೂಸಿಕ್​ ಆಲ್ಬಮ್​ಗಳನ್ನು ನಿರ್ಮಾಣ ಮಾಡಬೇಕು ಎಂದುಕೊಂಡಿದ್ದೇನೆ. ಅದಕ್ಕೆ ಇದು ಸರಿಯಾದ ಸಮಯ. ನಾನು ಇದನ್ನೇ ಮಾಡಬೇಕು ಎಂದು ನನ್ನ ಮನಸ್ಸು ಹೇಳುತ್ತಿದೆ’ ಎಂದು ಮನಸಿನ ಮಾತನ್ನು ಹೇಳಿದ್ದಾರೆ ಅವರು.

ಚಿಕ್ಕ ವಯಸ್ಸಿನಲ್ಲಿ ಎಲ್ಲರಿಗೂ ಒಂದು ಕನಸು ಇರುತ್ತದೆ. ಆ ಕನಸನ್ನು ಪೂರ್ಣಗೊಳಿಸಬೇಕು ಎಂದು ಹಲವರು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಆ ಕನಸನ್ನು ಅರ್ಧಕ್ಕೆ ಬಿಡುತ್ತಾರೆ. ಆದರೆ, ಈಗ ಆದಿತ್ಯ ನಾರಾಯಣ್​ ಬಾಲ್ಯದ ಕನಸನ್ನು ಪೂರ್ಣಗೊಳಿಸುತ್ತಿದ್ದಾರೆ. ‘ಭಾರತಕ್ಕೋಸ್ಕರ ಗ್ರ್ಯಾಮಿ ಅವಾರ್ಡ್​ ಗೆಲ್ಲಬೇಕು ಎನ್ನುವುದು ನನ್ನ ಸಣ್ಣ ವಯಸ್ಸಿನ ಕನಸು. ಆ ಕನಸನ್ನು ನನಸು ಮಾಡಿಕೊಳ್ಳುವ ಕಾಲ ಸಮೀಪಿಸಿದೆ. ಎಲ್ಲರ ದೃಷ್ಟಿ ಭಾರತದ ಮೇಲಿದೆ. ವಿಶ್ವ ಮಟ್ಟದಲ್ಲಿ ನಾವು ಮಿಂಚಬೇಕು’ ಎಂದಿದ್ದಾರೆ ಅವರು.

ಆದಿತ್ಯ ನಾರಾಯಣ್​ ಅವರು ರಿಯಾಲಿಟಿ ಶೋ ನಿರೂಪಣೆ ಬಿಡುತ್ತಿದ್ದಾರೆ ಎನ್ನುವ ವಿಚಾರ ಅನೇಕ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇನ್ನು, ಅವರು ಬೇರೆಬೇರೆ ಆಲೋಚನೆಯೊಂದಿಗೆ ಹೊಸ ಪ್ರಯತ್ನಕ್ಕೆ ಮುಂದಾಗುತ್ತಿರುವುದಕ್ಕೆ ಅನೇಕರು ಶುಭಾಶಯ ಕೋರುತ್ತಿದ್ದಾರೆ.

ಇದನ್ನೂ ಓದಿ: ನೀನು ಗಂಡಸಾಗಿರಬಹುದು, ಆದರೆ ನಿನಗಿಂತ ಹೆಚ್ಚು ಪ್ರಬುದ್ಧತೆ ನನಗಿದೆ; ಸಿಟ್ಟಾದ ವೈಷ್ಣವಿ

‘ಡ್ಯಾನ್ಸ್​​ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಆ್ಯಂಕರ್ ಅನುಶ್ರೀಗೆ ಸಿಕ್ಕರು ಈ ವಿಶೇಷ ವ್ಯಕ್ತಿ

Published On - 4:54 pm, Sun, 29 August 21

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು