AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಳಿಕೆಯಲ್ಲಿ ಹಿಂದೆ ಬಿತ್ತು ಬಿಗ್​ ಬಿ, ಇಮ್ರಾನ್ ಹಶ್ಮಿ ನಟನೆಯ ‘ಚೆಹ್ರೆ’; ಎರಡು ದಿನದಲ್ಲಿ ಗಳಿಸಿದ್ದೆಷ್ಟು?

Chehre: ಬಾಲಿವುಡ್​ನ ಖ್ಯಾತ ನಟರಾದ ಅಮಿತಾಭ್ ಬಚ್ಚನ್ ಹಾಗೂ ಇಮ್ರಾನ್ ಹಶ್ಮಿ ನಟಿಸಿರುವ ‘ಚೆಹ್ರೆ’ ಚಿತ್ರ ಬಾಕ್ಸಾಫೀಸ್​ನಲ್ಲಿ ಹಿಂದೆ ಬಿದ್ದಿದೆ. ಆ ಚಿತ್ರದ ಎರಡು ದಿನದ ಗಳಿಕೆಯ ವಿವರ ಇಲ್ಲಿದೆ. ಈ ಚಿತ್ರ ಬೇರೆ ಚಿತ್ರಗಳ ಬಿಡುಗಡೆಗೆ ಯಾವ ಪರಿಣಾಮ ಬೀರಬಹುದು ಎಂಬ ಮಾಹಿತಿಯೂ ಇದೆ, ಓದಿ.

ಗಳಿಕೆಯಲ್ಲಿ ಹಿಂದೆ ಬಿತ್ತು ಬಿಗ್​ ಬಿ, ಇಮ್ರಾನ್ ಹಶ್ಮಿ ನಟನೆಯ ‘ಚೆಹ್ರೆ’; ಎರಡು ದಿನದಲ್ಲಿ ಗಳಿಸಿದ್ದೆಷ್ಟು?
ಚೆಹ್ರೆ ಚಿತ್ರದಲ್ಲಿ ಅಮಿತಾಭ್ ಹಾಗೂ ಇಮ್ರಾನ್ ಹಶ್ಮಿ
TV9 Web
| Updated By: shivaprasad.hs|

Updated on:Aug 29, 2021 | 7:23 PM

Share

ಕೊರೊನಾ ನಿಯಮಾವಳಿಗಳ‌ ನಡುವೆ ಚಿತ್ರರಂಗಕ್ಕೆ ಪುಷ್ಠಿ ನೀಡುವ ಬೆಳವಣಿಗೆಯೆಂದೇ ಹೇಳಲಾಗಿದ್ದ ಬಾಲಿವುಡ್​ನ ಎರಡು ಪ್ರಮುಖ ಚಿತ್ರಗಳ‌ ಬಿಡುಗಡೆ ನಿರೀಕ್ಷಿಸಿದಷ್ಟು ಯಶಸ್ಸನ್ನು ನೀಡಿಲ್ಲ. ಅಕ್ಷಯ್ ಕುಮಾರ್ ನಟನೆಯ ‘ಬೆಲ್ ಬಾಟಂ'(Bell Bottom) ಚಿತ್ರ ಎರಡನೇ ವಾರ ಚಿತ್ರಮಂದಿರದಲ್ಲಿ ಇದ್ದು ತಕ್ಕಮಟ್ಟಿಗೆ ಕಲೆಕ್ಷನ್ ಮಾಡುತ್ತಿದೆ. ಆದರೂ ಅದು ನಿರೀಕ್ಷೆಗಿಂತ ಕಡಿಮೆಯೇ. ಈ ನಡುವೆ ಶುಕ್ರವಾರ ಬಿಡುಗಡೆಯಾಗಿದ್ದ ಬಹುನಿರೀಕ್ಷಿತ ‘ಚೆಹ್ರೆ'(Chehre) ಚಿತ್ರ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಹಿಂದೆ ಬಿದ್ದಿದೆ. ಶುಕ್ರವಾರ ಹಾಗೂ ಶನಿವಾರ ಎರಡೂ ದಿನದ ಕಲೆಕ್ಷನ್ ಸೇರಿಸಿ ಸುಮಾರು ಒಂದು ಕೋಟಿಯ ಆಸುಪಾಸಿನಲ್ಲಿ ಅದು ವಹಿವಾಟು ನಡೆಸಿದೆ.

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್(Amitabh Bachchan) ಹಾಗೂ ಇಮ್ರಾನ್ ಹಶ್ಮಿ(Emraan Hashmi) ಮುಖ್ಯ ತಾರಾಗಣದಲ್ಲಿದ್ದ ಈ ಚಿತ್ರ, ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಮಾಯಿ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಆಗಸ್ಟ್ ನಲ್ಲಿ ಬಿಡುಗಡೆಯಾದ ಎರಡನೇ ಬಿಗ್ ಬಜೆಟ್ ಚಿತ್ರವಾದ ಇದು, ಗಳಿಕೆಯಲ್ಲಿ ಮಾತ್ರ ಹಿಂದೆ ಬಿದ್ದಿದೆ. ಬಾಕ್ಸಾಫೀಸ್.ಕಾಮ್ ವರದಿಯ ಪ್ರಕಾರ, ‘ಚೆಹ್ರೆ’ ಮೊದಲ ದಿನ ಕೇವಲ 45 ಲಕ್ಷ ರೂಗಳಷ್ಟನ್ನೇ ಗಳಿಸಿದೆ. ಎರಡನೇ ದಿನವಾದ ಶನಿವಾರ, ಸುಮಾರು 60 ಲಕ್ಷ ರೂ ಕಲೆಕ್ಷನ್ ಮಾಡಿದೆ. ಒಟ್ಟು ಸೇರಿ 1.05 ಕೋಟಿ ರೂ ಗಳಿಕೆಯಾಗಿದೆ. ದೆಹಲಿ ಹಾಗೂ ಪಂಜಾಬ್ ನ ಪೂರ್ವ ಭಾಗದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವರದಿ ತಿಳಿಸಿದೆ. ಆದರೆ, ದೇಶದ ಉಳಿದೆಡೆ ನಿರೀಕ್ಷಿತ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಮಿಸ್ಟರಿ ಡ್ರಾಮಾ ಮಾದರಿಯ ಈ ಚಿತ್ರ ಪಂಜಾಬ್ ಭಾಷೆಯ ‘ಚಲ್ ಮೇರಾ ಪಟ್ ೨’ಗಿಂತಲೂ ಕಡಿಮೆ ಕಲೆಕ್ಷನ್‌ ಮಾಡಿದೆ. ಆ ಚಿತ್ರ ಎರಡು ದಿನಕ್ಕೆ ಸುಮಾರು 1.15ಕೋಟಿ ರೂ ಗಳಿಸಿತ್ತು. ಚೆಹ್ರೆ ಚಿತ್ರತಂಡದವರು ಒಟಿಟಿಗೆ ಚಿತ್ರವನ್ನು ನೀಡದೇ, ಚಿತ್ರಮಂದಿರಗಳಲ್ಲೇ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಗಟ್ಟಿ ನಿರ್ಧಾರ ಮಾಡಿದ್ದರು. ಆದರೆ ಚಿತ್ರಮಂದಿರಗಳ ಲಭ್ಯತೆ, ನಿಯಮಾವಳಿಗಳ ಕಾರಣದಿಂದ ಕಲೆಕ್ಷನ್ ಕುಗ್ಗಿದೆ. ಇದು ಮುಂದಿನ ತಿಂಗಳು ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಿದ್ದ ಇತರ ಬಾಲಿವುಡ್ ಚಿತ್ರಗಳ ಮೇಲೆ ಪ್ರಭಾವ ಬೀರಬಹುದು ಎನ್ನಲಾಗಿದೆ.

ನಿರ್ಮಾಪಕರು ದೀಪಾವಳಿಯ ಸಂದರ್ಭದಲ್ಲೂ ಚಿತ್ರದ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದಾರೆ. ಸುಮಾರು ಡಿಸೆಂಬರ್ ನಂತರದಲ್ಲಿ ತಮ್ಮ ಚಿತ್ರಗಳನ್ನು ತೆರೆಗೆ ತರಲು ಅವರು ನಿರ್ಧರಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಬಾಲಿವುಡ್ ನಲ್ಲಿ ಬಹುನಿರೀಕ್ಷಿತ ಚಿತ್ರಗಳ ದಂಡೇ ಇದ್ದು, ‘ಸೂರ್ಯವಂಶಿ’, ‘ಗಂಗೂಬಾಯಿ ಕಥೈವಾಡಿ’, ’83’, ‘ಮೈದಾನ್’ ಮೊದಲಾದ ಬಿಗ್ ಬಜೆಟ್ ಚಿತ್ರಗಳು ಸಾಲುಗಟ್ಟಿ ಕುಳಿತಿವೆ.

ಇದನ್ನೂ ಓದಿ:

ಡಿಸ್ಟ್ರಿಬ್ಯೂಟರ್​ ಬಂದು ಇನ್ನೂ ಎಕ್ಸ್​ಪೋಸ್​ ಮಾಡಬಹುದಿತ್ತು ಎಂದಿದ್ರು; ಕವಿತಾ ಲಂಕೇಶ್​

“ಅಂತಹ ದೃಶ್ಯಗಳಲ್ಲಿ ನಟಿಸುವಾಗ ನನಗೆ ಮುಜುಗರವಾಯಿತು, ಆದರೆ…”; ಮುಕ್ತವಾಗಿ ಮಾತನಾಡಿದ ಜಾಕಿ ಶ್ರಾಫ್

(Amitabh Bachchan and Emraan Hashmi starring Chehre two days collection details is here)

Published On - 7:19 pm, Sun, 29 August 21

ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?