ಪತಿ ಜೊತೆ ಪ್ರಿಯಾಂಕಾ ಹಾಟ್ ಅವತಾರಕ್ಕೆ ಮಿತಿಯೇ ಇಲ್ಲ; ಫೋಟೋ ಕಂಡು ಹೌಹಾರಿದ ಫ್ಯಾನ್ಸ್
Priyanka Chopra | Nick Jonas: ಪ್ರಿಯಾಂಕಾ ಚೋಪ್ರಾ ಮೈಗೆ ಫೋರ್ಕ್ ಚುಚ್ಚುತ್ತಾ ಅವರನ್ನೇ ತಿನ್ನುತ್ತಿರುವ ರೀತಿಯಲ್ಲಿ ನಿಕ್ ನಟಿಸಿದ್ದಾರೆ. ಆ ಫೋಟೋಗೆ ‘ಸ್ನ್ಯಾಕ್’ ಎಂದು ಪ್ರಿಯಾಂಕಾ ಕ್ಯಾಪ್ಷನ್ ನೀಡಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಬಾಲಿವುಡ್ನ ಯಾವುದೇ ಸಿನಿಮಾಗಳಲ್ಲಿ ಅವರು ನಟಿಸುತ್ತಿಲ್ಲವಾದರೂ ಹಾಲಿವುಡ್ ಪ್ರಾಜೆಕ್ಟ್ಗಳಲ್ಲಿ ತೊಡಗಿಕೊಂಡಿದ್ದಾರೆ. ಅಮೆರಿಕದ ಗಾಯಕ ನಿಕ್ ಜೋನಸ್ ಜೊತೆ ಮದುವೆಯಾದ ಬಳಿಕ ಅವರು ಅಲ್ಲಿಯೇ ಸೆಟಲ್ ಆಗಿದ್ದಾರೆ. ಅನೇಕ ಪ್ರತಿಷ್ಠಿತ ಸಮಾರಂಭಗಳಲ್ಲಿ ಅತಿಥಿಯಾಗಿ ಭಾಗವಹಿಸುತ್ತ ಇರುವ ಪ್ರಿಯಾಂಕಾ ಚೋಪ್ರಾ ಅವರು ಫ್ಯಾಮಿಲಿಗಾಗಿಯೂ ಸಮಯ ಮೀಸಲಿಡುತ್ತಾರೆ. ನಿಕ್ ಜೋನಸ್ (Nick Jonas) ಜೊತೆ ಆಪ್ತವಾಗಿ ಕಳೆದ ಕ್ಷಣಗಳ ಫೋಟೋವನ್ನು ಕೂಡ ಅವರು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಈಗ ಅವರು ಹಂಚಿಕೊಂಡಿರುವ ಫೋಟೋಗಳು ಸಿಕ್ಕಾಪಟ್ಟೆ ಹಾಟ್ ಆಗಿವೆ.
‘ಸಿಟಾಡೆಲ್’ ವೆಬ್ಸಿರೀಸ್ ಶೂಟಿಂಗ್ನಲ್ಲಿ ಪ್ರಿಯಾಂಕಾ ಚೋಪ್ರಾ ಇಷ್ಟು ದಿನ ಬ್ಯುಸಿ ಆಗಿದ್ದರು. ಅದಕ್ಕಾಗಿ ಅವರು ಲಂಡನ್ಗೆ ತೆರಳಿದ್ದರು. ಭಾನುವಾರ (ಸೆ.29) ಸಿಕ್ಕ ರಜೆಯಲ್ಲಿ ಅವರು ಲಾಸ್ ಏಂಜಲಿಸ್ಗೆ ಮರಳಿದ್ದಾರೆ. ಪತಿಯ ಜೊತೆ ಅವರು ಹಾಯಾಗಿ ಕಾಲ ಕಳೆದಿದ್ದಾರೆ. ಆ ಫೋಟೋಗಳನ್ನು ಸೋಮವಾರ ಬೆಳಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಅಪ್ಲೋಡ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಹೌಹಾರಿದ್ದಾರೆ.
ಪ್ರಿಯಾಂಕಾ ಮೈಗೆ ಫೋರ್ಕ್ ಚುಚ್ಚುತ್ತಾ ಅವರನ್ನೇ ತಿನ್ನುತ್ತಿರುವ ರೀತಿಯಲ್ಲಿ ನಿಕ್ ನಟಿಸಿದ್ದಾರೆ. ಆ ಫೋಟೋಗೆ ‘ಸ್ನ್ಯಾಕ್’ ಎಂದು ಪ್ರಿಯಾಂಕಾ ಕ್ಯಾಪ್ಷನ್ ನೀಡಿದ್ದಾರೆ. ಪತಿಯ ಜೊತೆ ಅತಿ ಸಲುಗೆಯಿಂದ ಸಮಯ ಕಳೆದ ಪೋಟೋಗಳನ್ನೆಲ್ಲ ಅವರು ಹೀಗೆ ಸಾರ್ವಜನಿಕವಾಗಿ ಹಂಚಿಕೊಂಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ನಿಕ್ ಜೋನಸ್ ಅವರು ಈ ಫೋಟೋದಲ್ಲಿ ತುಂಬ ವಿಲಕ್ಷಣವಾಗಿ ಕಾಣಿಸಿಕೊಂಡಿರುವುದರಿಂದ ಅಭಿಮಾನಿಗಳು ತರಹೇವಾರಿ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಪ್ರಿಯಾಂಕಾರ ಫಿಟ್ನೆಸ್ಗೆ ಹಲವರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಈ ಫೋಟೋಗಳನ್ನು ಇಟ್ಟುಕೊಂಡು ಕೆಲವರು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಪ್ರಿಯಾಂಕಾ ಕಸಿನ್ ಪರಿಣೀತಿ ಚೋಪ್ರಾ ಅವರು ಈ ಫೋಟೋ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಸಹ ಕಮೆಂಟ್ ಮಾಡಿದ್ದಾರೆ.
View this post on Instagram
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಚೋಪ್ರಾ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರಿಗೆ 6.7 ಕೋಟಿಗಿಂತಲೂ ಅಧಿಕ ಫಾಲೋವರ್ಸ್ ಇದ್ದಾರೆ. ಅಂದಹಾಗೆ ಅವರು ಈ ರೀತಿ ಫೋಟೋಗಳನ್ನು ಹಂಚಿಕೊಂಡಿದ್ದು ಇದೇ ಮೊದಲೇನಲ್ಲ. ಗಂಡನ ಜೊತೆ ಆಪ್ತವಾಗಿರುವ ಅನೇಕ ಫೋಟೋಗಳನ್ನು ಅವರು ಈ ಹಿಂದೆ ಹಂಚಿಕೊಂಡಿದ್ದರು. ಆಗಲೂ ಕೂಡ ಟ್ರೋಲ್ಗೆ ಒಳಗಾಗಿದ್ದರು. ಆದರೆ ಅವುಗಳಿಗೆಲ್ಲ ಪ್ರಿಯಾಂಕಾ ಮತ್ತು ನಿಕ್ ಜೋನಸ್ ತಲೆ ಕೆಡಿಸಿಕೊಳ್ಳುವುದೇ ಇಲ್ಲ.
ಇದನ್ನೂ ಓದಿ:
ಸೆಟ್ನಲ್ಲಿ ಗಾಯಗೊಂಡ ಪ್ರಿಯಾಂಕಾ ಚೋಪ್ರಾ; ರಕ್ತದಲ್ಲಿ ತೊಯ್ದ ಹಣೆ, ನಿಜ ಯಾವುದು ಎಂದು ಕೇಳಿದ ನಟಿ
Priyanka Chopra: ಪತಿ ನಿಕ್ಗೆ ಪಬ್ಲಿಕ್ನಲ್ಲೇ ಕಿಸ್ ಕೊಟ್ಟು ಮುದ್ದು ಮಾಡಿದ ಪ್ರಿಯಾಂಕಾ