ಸೆಟ್​ನಲ್ಲಿ ಗಾಯಗೊಂಡ ಪ್ರಿಯಾಂಕಾ ಚೋಪ್ರಾ; ರಕ್ತದಲ್ಲಿ ತೊಯ್ದ ಹಣೆ, ನಿಜ ಯಾವುದು ಎಂದು ಕೇಳಿದ ನಟಿ

ಶೂಟಿಂಗ್​ ಸಮಯದಲ್ಲಿ ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಅವಘಡಗಳು ಸಂಭವಿಸುತ್ತವೆ. ಕೆಲವೊಮ್ಮೆ ಪ್ರಾಣ ಹಾನಿಗಳು ಉಂಟಾದ ಉದಾಹರಣೆ ಕೂಡ ಇದೆ. ಅದೃಷ್ಟವಶಾತ್​ ಪ್ರಿಯಾಂಕಾಗೆ ಸಣ್ಣ ಗಾಯ ಮಾತ್ರವಾಗಿದೆ.

ಸೆಟ್​ನಲ್ಲಿ ಗಾಯಗೊಂಡ ಪ್ರಿಯಾಂಕಾ ಚೋಪ್ರಾ; ರಕ್ತದಲ್ಲಿ ತೊಯ್ದ ಹಣೆ, ನಿಜ ಯಾವುದು ಎಂದು ಕೇಳಿದ ನಟಿ
ಸೆಟ್​ನಲ್ಲಿ ಗಾಯಗೊಂಡ ಪ್ರಿಯಾಂಕಾ ಚೋಪ್ರಾ; ರಕ್ತದಲ್ಲಿ ತೊಯ್ದ ಹಣೆ, ನಿಜ ಯಾವುದು ಎಂದು ಕೇಳಿದ ನಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 27, 2021 | 10:48 PM

ಪ್ರಿಯಾಂಕಾ ಚೋಪ್ರಾ ಗಾಯಕ ನಿಕ್​ ಜೋನಸ್​ ಮದುವೆ ಆದ ನಂತರದಲ್ಲಿ ಅಮೆರಿಕದಲ್ಲೇ ಸೆಟಲ್​ ಆಗಿದ್ದಾರೆ. ಬಾಲಿವುಡ್​ನಿಂದ ದೂರವೇ ಉಳಿದಿರುವ ಅವರು ಹಾಲಿವುಡ್​ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಮಧ್ಯೆ ಶೂಟಿಂಗ್​ ವೇಳೆ ಅವರಿಗೆ ಗಾಯವಾಗಿದೆ. ಈ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಆತಂಕ ಹೊರ ಹಾಕಿದ್ದಾರೆ.

ಶೂಟಿಂಗ್​ ಸಮಯದಲ್ಲಿ ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಅವಘಡಗಳು ಸಂಭವಿಸುತ್ತವೆ. ಕೆಲವೊಮ್ಮೆ ಪ್ರಾಣ ಹಾನಿಗಳು ಉಂಟಾದ ಉದಾಹರಣೆ ಕೂಡ ಇದೆ. ಅದೃಷ್ಟವಶಾತ್​ ಪ್ರಿಯಾಂಕಾಗೆ ಸಣ್ಣ ಗಾಯ ಮಾತ್ರವಾಗಿದೆ. ಈ ಬಗ್ಗೆ ಅವರು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಹಣೆ ರಕ್ತದಲ್ಲಿ ನೆನೆದಿರುವ ಫೋಟೋ ಹಾಕಿದ್ದಾರೆ ಪ್ರಿಯಾಂಕಾ ಚೋಪ್ರಾ. ಇದರ ಜತೆಗೆ ಹುಬ್ಬಿನ ಮೇಲೆ ಗಾಯ ಆಗಿದೆ. ಈ ಫೋಟೋಗೆ ಯಾವುದು ನಿಜ? ಯಾವುದು ನಿಜವಲ್ಲ? ಎಂದು ಪ್ರಿಯಾಂಕಾ ಪ್ರಶ್ನೆ ಮಾಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ನಿಜಕ್ಕೂ ಶಾಕ್​ಗೆ ಒಳಗಾಗಿದ್ದಾರೆ. ಪ್ರಿಯಾಂಕಾ ಹಣೆ ರಕ್ತದಲ್ಲಿ ನೆನೆದಿದೆ ಎನ್ನುವದನ್ನು ನೋಡಿದ ಅಭಿಮಾನಿಗಳು ಆತಂಕ ಹೊರ ಹಾಕಿದ್ದಾರೆ.

ಕೆಲ ಸಮಯ ಬಿಟ್ಟು ಮತ್ತೊಂದು ಪೋಸ್ಟ್​ ಹಾಕಿರುವ ಪ್ರಿಯಾಂಕಾ, ಹಣೆಯಲ್ಲಿರುವ ರಕ್ತ ನಿಜವಲ್ಲ. ಆದರೆ, ಹುಬ್ಬಿನ ಮೇಲೆ ಆದ ಗಾಯ ನಿಜ ಎಂದು ಎಂದು ಹೇಳಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಿಯಾಂಕಾ ಚೋಪ್ರಾ ವೆಬ್ ಸೀರಿಸ್​ಗಳಲ್ಲಿ ಬ್ಯುಸಿ ಇದ್ದಾರೆ. ಸೆಟ್​ನಲ್ಲಿ ಕಳೆದಿರುವ ಫೋಟೋಗಳು ವೈರಲ್​ ಆಗಿತ್ತು. ಕಪ್ಪು ಬಣ್ಣದ ಶರ್ಟ್​ ಹಾಗೂ ಖಾಕಿ ಪ್ಯಾಂಟ್​ ತೊಟ್ಟು ಕೈಯಲ್ಲಿ ಗನ್​ ಹಿಡಿದು ನಿಂತಿದ್ದಾರೆ. ‘ಸಿಟಾಡೆಲ್’​ ವೆಬ್​ ಸೀರಿಸ್​ನಲ್ಲಿ ಪ್ರಿಯಾಂಕಾ ಚೋಪ್ರಾ ಸ್ಪೈ ಆಗಿ ಕಾಣಿಸಿಕೊಂಡಿದ್ದಾರೆ. ಗೇಮ್​ ಆಫ್​ ಥ್ರೋನ್ಸ್​ ಅಲಮ್ ಮತ್ತು ಎಟರ್ನಲ್ಸ್ ಸ್ಟಾರ್ ರಿಚರ್ಡ್ ಮ್ಯಾಡೆನ್ ಕೂಡ ಈ ವೆಬ್​ ಸೀರಿಸ್​ನಲ್ಲಿ ಇದ್ದಾರೆ. ಇದು ಅಮೇಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗುತ್ತಿದೆ.  ಈ ಮೂಲಕ ಅವರು ಇದೇ ಮೊದಲ ಬಾರಿಗೆ ಒಟಿಟಿಗೆ ಕಾಲಿಡುತ್ತಿದ್ದಾರೆ.

ಇದನ್ನೂ ಓದಿ: ‘ಪ್ರಿಯಾಂಕಾ ಚೋಪ್ರಾ ದಾಂಪತ್ಯ ಜೀವನ ಹತ್ತು ವರ್ಷಗಳಲ್ಲಿ ಕೊನೆಯಾಗಲಿದೆ’; ಭವಿಷ್ಯ ನುಡಿದ ವಿವಾದಿತ ನಟ

Priyanka Chopra: ಪತಿ ನಿಕ್​ಗೆ ಪಬ್ಲಿಕ್​ನಲ್ಲೇ ಕಿಸ್ ಕೊಟ್ಟು ಮುದ್ದು ಮಾಡಿದ ಪ್ರಿಯಾಂಕಾ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ