ಅಕ್ಷಯ್ ತಾಯಿ ಅರುಣಾ ನಿಧನಕ್ಕೆ ಪತ್ರ ಮುಖೇನ ಸಂತಾಪ ಸೂಚಿಸಿದ ಮೋದಿ; ಪ್ರಧಾನಿ ನಡೆಗೆ ಕೃತಜ್ಞತೆ ಸಲ್ಲಿಸಿದ ನಟ
Akshay Kumar: ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರಿಗೆ ಇತ್ತೀಚೆಗಷ್ಟೇ ಮಾತೃ ವಿಯೋಗವಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಅರುಣಾ ಅವರ ನಿಧನಕ್ಕೆ ಸಂತಾಪ ಸೂಚಿಸಿ ಪತ್ರ ಬರೆದಿದ್ದರು. ಇದನ್ನು ಉಲ್ಲೇಖಿಸಿ ಅಕ್ಷಯ್, ಪಿಎಂ ನಡೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಇತ್ತೀಚೆಗಷ್ಟೇ ನಿಧನರಾಗಿದ್ದರು. ಅವರ ನಿಧನಕ್ಕೆ ಪ್ರಧಾನಿ ನರೇಂದರ ಮೋದಿ ಸಂತಾಪ ಸೂಚಿಸಿದ ವಿಚಾರವನ್ನು ಅಕ್ಷಯ್ ಇದೀಗ ಬಹಿರಂಗಪಡಿಸಿದ್ದಾರೆ. ಮೋದಿ ಕಳುಹಿಸಿದ ಪತ್ರವನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡು, ದುಃಖದಲ್ಲಿ ಜೊತೆಯಾದ ಪ್ರಧಾನಿಗೆ ವಂದನೆ ಸಲ್ಲಿಸಿದ್ದಾರೆ. ಮೋದಿ ತಮ್ಮ ಪತ್ರದಲ್ಲಿ, ‘ಭಾರತೀಯ ಚಿತ್ರರಂಗದಲ್ಲಿ ಅಕ್ಷಯ್ ತಮ್ಮದೇ ಛಾಪು ಮೂಡಿಸಲು ದಶಕಗಳ ಕಾಲ ನಡೆಸಿದ ಹೋರಾಟ ನಡೆಸಿದ್ದಾರೆ. ಆ ಹೋರಾಟಕ್ಕೆ ಅವರ ಪೋಷಕರು ತುಂಬಿದ ಮೌಲ್ಯಗಳೇ ಕಾರಣ’ ಎಂದು ಅಕ್ಷಯ್ ಪೋಷಕರನ್ನು ಪ್ರಶಂಸಿಸಿದ್ದಾರೆ.
ಪತ್ರವನ್ನು ಹಂಚಿಕೊಂಡಿರುವ ಅಕ್ಷಯ್, “ಅಮ್ಮನ ನಿಧನಕ್ಕೆ ಸಂತಾಪದ ಸಂದೇಶಗಳಿಂದ ವಿನಮ್ರನಾಗಿದ್ದೇನೆ, ಎಲ್ಲರಿಗೂ ಧನ್ಯವಾದಗಳು. ನನ್ನ ದಿವಂಗತ ಪೋಷಕರಿಗೆ ಆತ್ಮೀಯ ಭಾವನೆಗಳನ್ನು ವ್ಯಕ್ತಪಡಿಸಿದ ಈ ಅದ್ಭುತ ಸಂದೇಶಕ್ಕಾಗಿ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಕೃತಜ್ಞತೆಗಳು. ಈ ಸಮಾಧಾನಕರ ಮಾತುಗಳು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತವೆ. ಜೈ ಅಂಬೆ ” ಎಂದು ಅವರು ಬರೆದುಕೊಂಡು, ಮೋದಿ ಕಳುಹಿಸಿದ ಪತ್ರವನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿದ್ದಾರೆ.
ಪತ್ರದಲ್ಲಿ ಪ್ರಧಾನಿಯವರು ಅಕ್ಷಯ್ ಅಂತಹ ನಟನನ್ನು ಬೆಳೆಸಿದ್ದಕ್ಕೆ ಅವರ ತಾಯಿಯನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಅಕ್ಷಯ್ ನಟನೆಯನ್ನು ಹೊಗಳಿರುವ ಪ್ರಧಾನಿ, ‘ಭಾರತದ ಅತ್ಯಂತ ಮೆಚ್ಚುಗೆ ಪಡೆದ ನಟ ಹಾಗೂ ಬಹುಮುಖ ನಟರಲ್ಲಿ ಅಕ್ಷಯ್ ಒಬ್ಬರು’ ಎಂದಿದ್ದಾರೆ. ಅಕ್ಷಯ್ ಹಂಚಿಕೊಂಡ ಟ್ವೀಟ್ ಇಲ್ಲಿದೆ.
Humbled by condolence messages on mom’s passing, thankful to all??Grateful to hon’ble PM for this amazing gesture to take out time and express warm feelings for me and my late parents. These comforting words will stay with me forever. Jai Ambe pic.twitter.com/22lDjZfEE6
— Akshay Kumar (@akshaykumar) September 12, 2021
ತಮ್ಮ ತಾಯಿಯ ನಿಧನಾನಂತರ ಅಕ್ಷಯ್ ಟ್ವೀಟ್ ಮುಖಾಂತರ ಅಕ್ಷರ ನಮನ ಸಲ್ಲಿಸಿದ್ದರು. ಇದು ಅಭಿಮಾನಿಗಳ ಕಣ್ಣಂಚನ್ನ ಒದ್ದೆ ಮಾಡಿತ್ತು. ‘‘ನನ್ನ ತಾಯಿಯೇ ನನ್ನ ಸರ್ವಸ್ವ. ಇಂದು ಅವರನ್ನು ಕಳೆದುಕೊಂಡು ನಾನು ಅಸಹನೀಯ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ಅಮ್ಮ ಶ್ರೀಮತಿ ಅರುಣಾ ಭಾಟಿಯಾ ಇಂದು ಬೆಳಿಗ್ಗೆ ಶಾಂತಿಯುತವಾಗಿ ಈ ಜಗತ್ತನ್ನು ತೊರೆದರು. ಬೇರೆ ಜಗತ್ತಿನಲ್ಲಿರುವ ನನ್ನ ತಂದೆಯೊಂದಿಗೆ ಅವರು ಸೇರಿಕೊಂಡರು. ನನ್ನ ತಾಯಿ ಗುಣಮುಖರಾಗಲೆಂದು ಬಯಸಿದ ನಿಮ್ಮ ಪ್ರಾರ್ಥನೆಯನ್ನು ನಾನು ಮತ್ತು ನನ್ನ ಕುಟುಂಬದವರು ಹೃದಯಪೂರ್ವಕವಾಗಿ ಗೌರವಿಸುತ್ತೇವೆ. ಓಂ ಶಾಂತಿ’’ ಎಂದು ಅಕ್ಷಯ್ ಬರೆದುಕೊಂಡಿದ್ದರು.
ಪ್ರಸ್ತುತ ಅಕ್ಷಯ್ ಕುಮಾರ್ ಲಂಡನ್ಗೆ ಮರಳಿದ್ದಾರೆ. ಅಲ್ಲಿ ಅವರು ತಮ್ಮ ನೂತನ ಚಿತ್ರ ‘ಸಿಂಡ್ರೆಲ್ಲಾ’ದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ:
‘ಪ್ರೇಮಲೋಕ’ ಚಿತ್ರಕ್ಕೆ ಜೂಹಿ ಚಾವ್ಲಾ ಆಯ್ಕೆ ಆಗಿದ್ದು ಹೇಗೆ? ರವಿಚಂದ್ರನ್ ತೆರೆದಿಟ್ಟ ರೆಟ್ರೋ ಸ್ಟೋರಿ
(Akshay Kumar shared Narendra Modi’s letter of condolences to death of Aruna Bhatia and he thaks for PM’s gesture)