‘ಪ್ರೇಮಲೋಕ’ ಚಿತ್ರಕ್ಕೆ ಜೂಹಿ ಚಾವ್ಲಾ ಆಯ್ಕೆ ಆಗಿದ್ದು ಹೇಗೆ? ರವಿಚಂದ್ರನ್​ ತೆರೆದಿಟ್ಟ ರೆಟ್ರೋ ಸ್ಟೋರಿ

‘ಪ್ರೇಮಲೋಕ’ ಸಿನಿಮಾದಲ್ಲಿ ರವಿಚಂದ್ರನ್​ ಮತ್ತು ಜೂಹಿ ಚಾವ್ಲಾ ಜೋಡಿಯನ್ನು ಸಿನಿಪ್ರಿಯರು ಸಖತ್​ ಮೆಚ್ಚಿಕೊಂಡರು. ಆ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿದ್ದರ ಹಿಂದೆ ಒಂದು ಇಂಟರೆಸ್ಟಿಂಗ್​ ಕಥೆ ಇದೆ.

ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ ಸಿನಿಮಾ ಪ್ರೇಮಲೋಕ. ಆ ಚಿತ್ರಕ್ಕೆ ನಾಯಕಿ ಆಗುವ ಮೂಲಕ ಜೂಹಿ ಚಾವ್ಲಾ ಅವರು ಕನ್ನಡಕ್ಕೆ ಕಾಲಿಟ್ಟಿದ್ದರು. ಅಷ್ಟಕ್ಕೂ ರವಿಚಂದ್ರನ್​ ಅವರು ಜೂಹಿಯನ್ನು ಆಯ್ಕೆ ಮಾಡಿದ್ದು ಯಾಕೆ? ಟಿವಿ9 ನಡೆಸಿದ ಸಂದರ್ಶನದಲ್ಲಿ ಈ ಪ್ರಶ್ನೆಗೆ ‘ಕ್ರೇಜಿ ಸ್ಟಾರ್​’ ಉತ್ತರಿಸಿದ್ದಾರೆ. ಅಂದು ನಡೆದ ವಿಚಾರಗಳನ್ನೆಲ್ಲ ಎಳೆಎಳೆಯಾಗಿ ವಿವರಿಸಿದ್ದಾರೆ. ‘ಮಾಡರ್ನ್​ ಡ್ರೆಸ್​ ಹಾಕುವಂತಹ ಹುಡುಗಿ ಬೇಕಿತ್ತು. ಆ ಸಮಯದಲ್ಲಿ ಸ್ಕರ್ಟ್​ ಹಾಕಿಕೊಂಡು ನಟಿಸುವ ಅಭ್ಯಾಸ ಇಲ್ಲಿನ ಹೀರೋಯಿನ್​ಗಳಿಗೆ ಇರಲಿಲ್ಲ’ ಎಂದು ರವಿಚಂದ್ರನ್​ ಹೇಳಿದ್ದಾರೆ.

‘ರಾಜ್ ​ಕಪೂರ್​ ಅವರ ‘ಬಾಬಿ’ ಮುಂತಾದ ಸಿನಿಮಾ ನೋಡಿ ನಾನು ಸ್ಫೂರ್ತಿ ಪಡೆದುಕೊಂಡಿದ್ದೆ. ಆ ರೀತಿ ಹಾಡುಗಳು, ಗ್ಲಾಮರ್​ ನಮ್ಮ ಸಿನಿಮಾದಲ್ಲೂ ಇರಬೇಕು ಅಂತ ಬಯಸಿದ್ದೆ. ಹಾಗಾಗಿ ಬಾಂಬೆಗೆ ಹೋಗಿ ಹೀರೋಯಿನ್​ ಹುಡುಕೋಕೆ ಶುರು ಮಾಡಿದ್ವಿ. ನಾವು ನೋಡಿದ 53 ಅಥವಾ 54ನೇ ಹುಡುಗಿಯೇ ಜೂಹಿ ಚಾವ್ಲಾ’ ಎಂದು ಆ ದಿನಗಳನ್ನು ರವಿಚಂದ್ರನ್​ ನೆನಪು ಮಾಡಿಕೊಂಡಿದ್ದಾರೆ. ಇನ್ನೂ ಅನೇಕ ವಿವರಗಳನ್ನು ಈ ವಿಡಿಯೋದಲ್ಲಿ ಅವರು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ:

‘ಕುಡಿಯೋ ಎಂದು ಅಂಬರೀಷ್​ ಯಾವತ್ತೂ ಒತ್ತಾಯ ಮಾಡಲಿಲ್ಲ, ಅದು ದೊಡ್ಡಗುಣ’; ರವಿಚಂದ್ರನ್​

‘ಮೊದಲ ಸಿನಿಮಾದಲ್ಲಿ ರಾಜ್​ಕುಮಾರ್​ ತಬ್ಬಿದ್ದಕ್ಕೆ ನಟನಾಗಿ ಬಂದೆ ಅನಿಸುತ್ತೆ’; ರವಿಚಂದ್ರನ್​

Click on your DTH Provider to Add TV9 Kannada