‘ಕುಡಿಯೋ ಎಂದು ಅಂಬರೀಷ್​ ಯಾವತ್ತೂ ಒತ್ತಾಯ ಮಾಡಲಿಲ್ಲ, ಅದು ದೊಡ್ಡಗುಣ’; ರವಿಚಂದ್ರನ್​

‘ಇವತ್ತಿನವರೆಗೂ ನನಗೆ ಬಾಟಲಿ ಮುಟ್ಟಲು ಸಾಧ್ಯವಾಗಿಲ್ಲ. ಕುಡಿಯಬೇಕು ಅಂತ ಅನಿಸಲೇ ಇಲ್ಲ. ಯಾವಾಗಲೂ ನಾನು ಕೆಲಸದ ಮತ್ತಿನಲ್ಲಿ ಇರುತ್ತೇನೆ’ ಎಂದು ರವಿಚಂದ್ರನ್​ ಹೇಳಿದ್ದಾರೆ.

ರಿಯಲ್​ ಲೈಫ್​ನಲ್ಲಿ ರವಿಚಂದ್ರನ್​ ಅವರು ಧೂಮಪಾನ, ಮದ್ಯಪಾನ ಮಾಡುವುದಿಲ್ಲ. ಆ ರೀತಿಯ ಶಿಸ್ತನ್ನು ಅವರು ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಹಲವು ಮಂದಿ ಗೆಳೆಯರು ಇದ್ದಾರೆ. ಅವರ ಜೊತೆ ಒಟ್ಟಿಗೆ ಪಾರ್ಟಿ ಮಾಡಿದ್ದರೂ ಕೂಡ ರವಿಚಂದ್ರನ್​ ಮದ್ಯಪಾನ ಮಾಡಲೇ ಇಲ್ಲ. ಆ ಬಗ್ಗೆ ಅವರು ಟಿವಿ9 ಜೊತೆಗಿನ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ‘ಇಂಡಸ್ಟ್ರಿಗೆ ಬಂದಾಗ ಅಂಬರೀಷ್​ ನನಗೆ ಕ್ಲೋಸ್​ ಫ್ರೆಂಡ್​. ಅಣ್ಣ ಇದ್ದಂಗೆ ಅವನು. ಅಂಬರೀಷ್​ ಹೇಗೆ ಎಂದು ನಿಮಗೆಲ್ಲ ಗೊತ್ತು. ಆದರೆ ಒಂದು ದಿನ ಕೂಡ ಜೊತೆಯಲ್ಲಿ ಕುಳಿತುಕೊಂಡು ಗುಂಡು ಹಾಕು ಅಂತ ಅವನು ಹೇಳಿಲ್ಲ. ಯಾವತ್ತೂ ಅವನು ಒತ್ತಾಯ ಮಾಡಿಲ್ಲ. ಅದೇ ಅವನ ದೊಡ್ಡಗುಣ’ ಎಂದು ರವಿಚಂದ್ರನ್​ ಹೇಳಿದ್ದಾರೆ.

‘ಇವತ್ತಿನವರೆಗೂ ನನಗೆ ಬಾಟಲಿ ಮುಟ್ಟಲು ಸಾಧ್ಯವಾಗಿಲ್ಲ. ಕುಡಿಯಬೇಕು ಅಂತ ಅನಿಸಲೇ ಇಲ್ಲ. ಯಾವಾಗಲೂ ನಾನು ಕೆಲಸದ ಮತ್ತಿನಲ್ಲಿ ಇರುತ್ತೇನೆ. ಸಿಗರೇಟ್​ ಮ್ಯಾಜಿಕ್​ ಕಲಿಯುವಾಗ ಒಂದು ದಿನಕ್ಕೆ 20 ಪ್ಯಾಕ್​ ಸಿಗರೇಟ್​ ಸೇದಬೇಕಿತ್ತು. ಆದರೆ ಹೊಗೆಯನ್ನು ಪೂರ್ತಿ ಎಳೆದುಕೊಳ್ಳುತ್ತಿರಲಿಲ್ಲ. ಸಿನಿಮಾದಲ್ಲಿ ಈಗಲೂ ನಾನು ಹಾಗೆಯೇ ಮಾಡುತ್ತೇನೆ’ ಎಂದು ರವಿಚಂದ್ರನ್​ ಹೇಳಿದ್ದಾರೆ.

ಇದನ್ನೂ ಓದಿ:

‘ಮೊದಲ ಸಿನಿಮಾದಲ್ಲಿ ರಾಜ್​ಕುಮಾರ್​ ತಬ್ಬಿದ್ದಕ್ಕೆ ನಟನಾಗಿ ಬಂದೆ ಅನಿಸುತ್ತೆ’; ರವಿಚಂದ್ರನ್​

ದುಡ್ಡಿಲ್ಲದಾಗ ರವಿಚಂದ್ರನ್​ ಬಳಿ 200 ರೂಪಾಯಿ ಕೇಳಿದ್ದ ಜಗ್ಗೇಶ್​; ಕ್ರೇಜಿಸ್ಟಾರ್​ ಉತ್ತರ ಹೇಗಿತ್ತು?

Click on your DTH Provider to Add TV9 Kannada