AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರವಿಚಂದ್ರನ್ ರಿಯಲ್ ಪ್ರೇಮಲೋಕ ಹೇಗಿತ್ತು?; ಕ್ರೇಜಿಸ್ಟಾರ್ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ

ರವಿಚಂದ್ರನ್ ರಿಯಲ್ ಪ್ರೇಮಲೋಕ ಹೇಗಿತ್ತು?; ಕ್ರೇಜಿಸ್ಟಾರ್ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ

TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 12, 2021 | 5:48 PM

ಕನ್ನಡ ಸಿನಿರಂಗದ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಟಿವಿ9ನೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಅವರು ತಾಮ್ಮ ರಿಯಲ್ ಪ್ರೇಮಲೋಕ, ನಂತರ ಆ ಸಂಬಂಧ ಏನಾಯಿತು ಎಂಬ ವಿಚಾರಗಳ ಕುರಿತು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ರೊಮ್ಯಾಂಟಿಕ್ ಮಾದರಿಯ ಚಿತ್ರಗಳಿಗೆ ಹೊಸ ಭಾಷ್ಯ ಬರೆದವರು ಕ್ರೇಜಿ ಸ್ಟಾರ್ ರವಿಚಂದ್ರನ್. ತನಗೆ ಪ್ರೀತಿ- ಪ್ರೇಮಗಳ ಕಥೆಯಲ್ಲದೇ ಮತ್ತೊಂದನ್ನು ಹೇಳಲು ಬರುವುದಿಲ್ಲ ಎನ್ನುವ ರವಿಚಂದ್ರನ್, ಅದೇ ಮಾದರಿಯ ವಿನೂತನ ಚಿತ್ರಗಳನ್ನು ಕಟ್ಟಿಕೊಟ್ಟವರು. ಹೀಗಿರುವಾಗ ಅವರ ಮೊದಲ ಪ್ರೀತಿ ಹೇಗಿತ್ತು? ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಅನಿವಾರ್ಯ ಕಾರಣದಿಂದಾಗಿ ಹಾಗೂ ಭವಿಷ್ಯದ ಅನಿಶ್ಚಿತತೆಯಿಂದಾಗಿ ಆಕೆಯಿಂದ ದೂರವಾಗಬೇಕಾಗಿ ಬಂದತು. ಅಷ್ಟಕ್ಕೂ ಆಕೆಗಿಂತ ಅಧಿಕ ಪ್ರೀತಿ ತನ್ನ ತಂದೆಯ ಮೇಲಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಇನ್ನೂ ಹಲವು ಕುತೂಹಲಕರ ಮಾಹಿತಿಗಳನ್ನು ಅವರು ಮೇಲಿನ ವಿಡಿಯೋದಲ್ಲಿ ತೆರೆದಿಟ್ಟಿದ್ದಾರೆ, ನೋಡಿ.

ಇದೇ ಸಂದರ್ಶನದಲ್ಲಿ ಅವರು ರಾಜ್​ಕುಮಾರ್, ಅಂಬರೀಷ್ ಹೀಗೆ ಕನ್ನಡದ ಸಿನಿ ದಿಗ್ಗಜರ ಕುರಿತೂ ಮಾತನಾಡಿದ್ದಾರೆ. ಪ್ರೇಮಲೋಕ ಚಿತ್ರಕ್ಕೆ ಜೂಹಿ ಚಾವ್ಲಾರನ್ನೇ ಏಕೆ ನಾಯಕಿಯನ್ನಾಗಿ ಮಾಡಲಾಯಿತು ಎಂಬುದನ್ನೂ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

‘ಕುಡಿಯೋ ಎಂದು ಅಂಬರೀಷ್​ ಯಾವತ್ತೂ ಒತ್ತಾಯ ಮಾಡಲಿಲ್ಲ, ಅದು ದೊಡ್ಡಗುಣ’; ರವಿಚಂದ್ರನ್​

‘ಮೊದಲ ಸಿನಿಮಾದಲ್ಲಿ ರಾಜ್​ಕುಮಾರ್​ ತಬ್ಬಿದ್ದಕ್ಕೆ ನಟನಾಗಿ ಬಂದೆ ಅನಿಸುತ್ತೆ’; ರವಿಚಂದ್ರನ್​

‘ಪ್ರೇಮಲೋಕ’ ಚಿತ್ರಕ್ಕೆ ಜೂಹಿ ಚಾವ್ಲಾ ಆಯ್ಕೆ ಆಗಿದ್ದು ಹೇಗೆ? ರವಿಚಂದ್ರನ್​ ತೆರೆದಿಟ್ಟ ರೆಟ್ರೋ ಸ್ಟೋರಿ

(Sandalwood actor Crazy Star Ravichandran opens up about his first love)

Published on: Sep 12, 2021 04:52 PM