ಕೋಲಾರ ಸ್ಪೆಷಲ್ ಮೋದಕ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
ಒಂದೊಂದು ಭಾಗದವರು ಒಂದೊಂದು ವಿಧದಲ್ಲಿ ಮೋದಕ ಮಾಡಿ ಸವಿಯುತ್ತಾರೆ. ಅದರಂತೆ ಕೋಲಾರದಲ್ಲಿ ಮೋದಕವನ್ನು ಹೇಗೆ ಮಾಡುತ್ತಾರೆ ಎಂದು ಇಲ್ಲಿ ತಿಳಿಸಲಾಗಿದೆ.
ಗಣಪತಿಗೆ ಪ್ರಿಯವಾದ ಖಾದ್ಯ ಎಂದರೆ ಅದು ಮೋದಕ. ಹೀಗಾಗಿ ಗಣೇಶ ಚತುರ್ಥಿಯಂದು ಹಲವರ ಮನೆಯಲ್ಲಿ ಮೋದಕ ಮಾಡುತ್ತಾರೆ. ಮೋದಕ ಮಾಡಿ ಗಣಪನಿಗೆ ನೈವೇದ್ಯ ಮಾಡುತ್ತಾರೆ. ಆದರೆ ಕೆಲವರಿಗೆ ಮೋದಕ ಬಗ್ಗೆ ಗೊತ್ತಿಲ್ಲ. ಅದನ್ನು ಹೇಗೆ ತಯಾರು ಮಾಡುತ್ತಾರೆ ಎಂದು ತಿಳಿದಿಲ್ಲ. ನಾಲಿಗೆಗೆ ಹೆಚ್ಚು ರುಚಿ ನೀಡುವ ಮೋದಕ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಒಂದೊಂದು ಭಾಗದವರು ಒಂದೊಂದು ವಿಧದಲ್ಲಿ ಮೋದಕ ಮಾಡಿ ಸವಿಯುತ್ತಾರೆ. ಅದರಂತೆ ಕೋಲಾರದಲ್ಲಿ ಮೋದಕವನ್ನು ಹೇಗೆ ಮಾಡುತ್ತಾರೆ ಎಂದು ಇಲ್ಲಿ ತಿಳಿಸಲಾಗಿದೆ.
ಮೋದಕ ಮಾಡಲು ಬೇಕಾಗುವ ಸಾಮಾಗ್ರಿಗಳು ಚಿರೋಟಿ ರವೆ, ಉಪ್ಪು, ಅರಿಶಿಣ, ತುಪ್ಪ, ಸಕ್ಕರೆ, ಕೊಬ್ಬರಿ, ಏಲಕ್ಕಿಪುಡಿ, ಅಡುಗೆ ಎಣ್ಣೆ.
ಮೋದಕ ಮಾಡುವ ವಿಧಾನ
ಚಿರೋಟಿ ರವೆ, ಉಪ್ಪು, ಅರಿಶಿಣ, ತುಪ್ಪ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಬಳಿಕ ಇದಕ್ಕೆ ಹೂರ್ಣ ಸಿದ್ಧಪಡಿಸಿಕೊಳ್ಳಬೇಕು. ಮೊದಲು ಒಂದು ಪಾತ್ರೆಗೆ ಸಕ್ಕರೆ, ಕೊಬ್ಬರಿ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕಲಸಿಟ್ಟುಕೊಂಡ ಹಿಟ್ಟನ್ನು ಉಂಡೆ ಮಾಡಿ ಮೊದಕದ ಆಕಾರಕ್ಕೆ ಮಾಡಿಕೊಳ್ಳಿ, ಬಳಿಕ ಅದರ ಮಧ್ಯ ಹೂರ್ಣ ಹಾಕಿ ಮಡಚಿ. ನಂತರ ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ರುಚಿಕರವಾದ ಮೋದಕ ಸವಿಯಲು ಸಿದ್ಧ.
ಇದನ್ನೂ ಓದಿ:
ಉತ್ತರ ಕರ್ನಾಟಕ ಸ್ಪೆಷಲ್ ಶೇಂಗಾ ಹೋಳಿಗೆ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
Recipe of the day: ಪಂಚಖಾದ್ಯ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ