ವಿಧಾನಸೌಧ ಎದುರು ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್ ಶಾಸಕರು! ಏನಾಯ್ತು ಅಲ್ಲಿ?
ಒಂದೇ ಎತ್ತಿನ ಬಂಡಿಯಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ತೆರಳಿದ್ದಾರೆ. ಈ ವೇಳೆ ಒಂದೇ ಎತ್ತಿನಗಾಡಿಯಲ್ಲಿ ಎಲ್ಲರೂ ಇದ್ದಿದ್ದರಿಂದ ಗಾಡಿ ಹಿಂಬಂದಿ ಇದ್ದ ಶಾಸಕರು ಬಿದ್ದಿದ್ದಾರೆ.
ಬೆಂಗಳೂರು: ವಿಧಾನಸೌಧದ ಗೇಟ್ ಮುಂದೆ ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದಾಗ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದಿದ್ದಾರೆ. ವಿಧಾನಸೌಧದ ಬಳಿ ಗಲಾಟೆ ಆಗಿದ್ದರಿಂದ ಎತ್ತುಗಳು ಬೆದರಿದವು. ಹೀಗಾಗಿ ಶಾಸಕ ವೆಂಕಟರಮಣಯ್ಯ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದಿದ್ದಾರೆ. ಕಾಂಗ್ರೆಸ್‌ನ(Congress) ಎತ್ತಿನ ಗಾಡಿ ಚಲೋ ವಿಧಾನಸೌಧದತ್ತ ತೆರಳಿದ್ದು, ಕೇವಲ 2 ಎತ್ತಿನ ಗಾಡಿಯಲ್ಲಿ ತೆರಳುವುದಕ್ಕೆ ಮಾತ್ರ ಅವಕಾಶ ಇದೆ. ಹೀಗಾಗಿ ಒಂದೇ ಎತ್ತಿನ ಬಂಡಿಯಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ತೆರಳಿದ್ದಾರೆ. ಈ ವೇಳೆ ಒಂದೇ ಎತ್ತಿನ ಗಾಡಿಯಲ್ಲಿ ಎಲ್ಲರೂ ಇದ್ದಿದ್ದರಿಂದ ಗಾಡಿ ಹಿಂಬಂದಿ ಇದ್ದ ಶಾಸಕರು ಬಿದ್ದಿದ್ದಾರೆ.
ಎತ್ತಿನ ಗಾಡಿ ಚಲೋ ಪ್ರತಿಭಟನೆ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಇಂದು ವಿಧಾನಸೌಧಕ್ಕೆ ಚೊಚ್ಚಲ ಪ್ರವೇಶ ಮಾಡುತ್ತಿದ್ದಾರೆ. ಆದರೆ ಮೊದಲ ದಿನವೇ ಅವರಿಗೆ ಪ್ರತಿಪಕ್ಷ ಮತ್ತು ರೈತರ ಕಡೆಯಿಂದ ಪ್ರತಿಭಟನೆ, ಧರಣಿಗಳನ್ನು ಎದುರಿಸುವಂತಾಗಿದೆ. ಇಂದಿನಿಂದ ಉಭಯ ಸದನಗಳ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ಕಾಂಗ್ರೆಸ್ ನಾಯಕರು ಎತ್ತಿನಗಾಡಿ ಚಲೋ ಪ್ರತಿಭಟನೆ ನಡೆಸುತ್ತಾರೆ. ಇಂದಿನಿಂದ ಸೆ.24 ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಬೆಲೆ ಏರಿಕೆಯನ್ನು ಖಂಡಿಸಿ ಕೈ ನಾಯಕರು ಎತ್ತಿನ ಬಂಡಿಯನ್ನು ಏರಿ ವಿಧಾನಸಭೆ ಕಲಾಪಕ್ಕೆ ಹೊರಟಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾನು ದೇಶದ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರ ಪ್ರತಿದಿನ ಜನರ ಪಿಕ್ಪಾಕೆಟ್ ಮಾಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:
ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ- ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್ ಶಾಸಕರು; ಸಿದ್ದರಾಮಯ್ಯ ಶಿವಕುಮಾರ್ ಬಚಾವ್