ಶತಮಾನದ ಆರಂಭದಲ್ಲಿ ಯುವಕರ ನಿದ್ರೆಗೆಡಿಸಿದ್ದ ಶ್ರೀಯಾ ಶರನ್ ಮತ್ತೇ ವಾಪಸ್ಸು ಬಂದಿದ್ದಾಳೆ!
ಶ್ರೀಯಾ ಅಪರೂಪದ ಸುಂದರಿ ಎಂದು ಸಿನಿಮಾಗಳಲ್ಲಿ ಆಕೆಯನ್ನು ಲಾಂಚ್ ಮಾಡಿದ ರಾಮೋಜಿ ಫಿಲಂಸ್ ನವರು ಹೇಳಿದ್ದರು. ಆದು 2002-03 ರ ಕಾಲ. ಆಕೆಗೀಗ 39ರ ಪ್ರಾಯ.
ವಿಡಿಯೋನಲ್ಲಿ ನಾವು ನಿಮಗೆ ತೋರಿಸುತ್ತಿರುವ ಸುಂದರಿಯನ್ನು ಕೆಲವರು ಮರೆತಿರುವ ಚಾನ್ಸ್ ಇದೆ. ಯಾಕೆಂದರೆ ಒಂದು ಸಮಯದಲ್ಲಿ ದಕ್ಷಿಣ ಭಾರತದ ಅತ್ಯಂತ ಬ್ಯುಸಿ ನಟಿಯಾಗಿದ್ದ ಶ್ರೀಯಾ ಶರನ್ ಬಹಳ ದಿನಗಳಿಂದ ಹೊಸ ಚಿತ್ರದಲಿ ಕಾಣಿಸಿಕೊಂಡಿಲ್ಲ. 2018 ರ ಮಾರ್ಚ್ನಲ್ಲಿ ತನ್ನ ರಷ್ಯನ್ ಬಾಯ್ ಫ್ರೆಂಡ್ ಆಂದ್ರೇಯಿ ಕೊಶೀವ್ ರನ್ನು ಮದುವೆಯಾದ ನಂತರ ಆಕೆ ತೆರೆಮರೆಗೆ ಸರಿದುಬಿಟ್ಟಿದ್ದಾರೆ. ಸುಮಾರು ಒಂದೂವರೆ ದಶಕಗಳ ಕಾಲ ಯುವಕರು ಸೇರಿದಂತೆ ವಯಸ್ಕರ ನಿದ್ರೆ ಸಹ ಕೆಡಿಸಿದ್ದ ಸರನ್ 36 ನೇ ವಯಸ್ಸಿನಲ್ಲಿ ಆಂದ್ರೇಯಿ ಅವರನ್ನು ಮದುವೆಯಾದರು.
ಸಿನಿಮಾ ನಾಯಕಿಯರಿಗೆ, ಮಾಡೆಲ್ ಗಳಿಗೆ ಕೆಂಪು ಬಣ್ಣವೆಂದರೆ ಅದ್ಯಾಕೆ ಅಷ್ಟು ಇಷ್ಟವೋ ಅನ್ನೋದು ಗೊತ್ತಾಗುತ್ತಿಲ್ಲ ಮಾರಾಯ್ರೇ. ಮೊದಲೇ ಕೆಂಪು-ಕೆಂಪಗೆ, ಬೆಳ್ಳಬೆಳ್ಳಗೆ ಇರ್ತಾರೆ, ಅದರ ಮೇಲೆ ಕೆಂಪುಡುಗೆ ಧರಿಸಿ ನೋಡುಗರ ಮನಸ್ಸನ್ನು ವಿಚಲಿತಗೊಳಿಸುತ್ತಾರೆ. ಈ ವಿಡಿಯೋವನ್ನೇ ನೋಡಿ, ಕೆಂಪು ಬಣ್ಣದ ಬೇರೆ ಬೇರೆ ಬಗೆ ಧಿರಿಸುಗಳನ್ನು ಧರಿಸಿ ಕೆಮೆರಾಗೆ ಪೋಸ್ ನೀಡಿರುವ ಶ್ರೀಯಾ ನೋಡುಗರ ಹೃದಯಗಳಿಗೆ ಕಿಚ್ಚು ಹಚ್ಚಿದ್ದಾರೆ.
ಶ್ರೀಯಾ ಅಪರೂಪದ ಸುಂದರಿ ಎಂದು ಸಿನಿಮಾಗಳಲ್ಲಿ ಆಕೆಯನ್ನು ಲಾಂಚ್ ಮಾಡಿದ ರಾಮೋಜಿ ಫಿಲಂಸ್ ನವರು ಹೇಳಿದ್ದರು. ಆದು 2002-03 ರ ಕಾಲ. ಆಕೆಗೀಗ 39ರ ಪ್ರಾಯ. ಆಕೆಯ ಮೊದಲ ಸಿನಿಮಾ ‘ಇಷ್ಟಂ’ನಲ್ಲಿ ನಾವು ನೋಡಿದ ಶ್ರೀಯಾ ಮತ್ತು ಈಗಿನ ಶ್ರೀಯಾ ನಡುವೆ ಅಂಥ ವ್ಯತ್ಯಾಸವೇನೂ ಇಲ್ಲ. ಸೂಜಿಗಲ್ಲಿನಂತೆ ಸೆಳೆಯುವ ಆದೇ ಸ್ನಿಗ್ಧ ಸೌಂದರ್ಯ, ಮದುವೆಯಾಗಿ ಮೂರು ವರ್ಷ ಕಳೆದರೂ ಕಾಯ್ದುಕೊಂಡಿರುವ ಮೈಮಾಟ 18 ರ ತರುಣಿಯರನ್ನೂ ನಾಚಿಸುವಂತಿದೆ.
ಅಂದಹಾಗೆ, ಶ್ರೀಯಾಳ ಫೇವರಿಟ್ ಬಣ್ಣ ಯಾವುದು ಅಂತ ನಿಮಗೆ ಗೊತ್ತಾಗಿರಬಹುದು. ಬಹಳಷ್ಟು ತಾರೆಯರ ಹಾಗೆ ಆಕೆಗೂ ಕೆಂಪೆಂದರೆ ಪಂಚಪ್ರಾಣ!
ಇದನ್ನೂ ಓದಿ: ಕೂದಲಂತೆಯೇ ಚಿನ್ನದ ಚೈನ್ಗಳನ್ನು ತಲೆಯ ನೆತ್ತಿಗೆ ಅಳವಡಿಸಿಕೊಂಡ ಮೆಕ್ಸಿಕನ್ ರಾಪರ್! ವಿಡಿಯೋ ವೈರಲ್