ಐಫೋನ್ 12 ಸಿರೀಸ್ ಪೋನ್​ಗಳು ರಿಯಾಯಿತಿ ದರದಲ್ಲಿ ಬೇಕಿದ್ದರೆ ಕೂಡಲೇ ಫ್ಲಿಪ್​ಕಾರ್ಟ್​​ಗೆ ಪೋರ್ಟಲ್​​ಗೆ ಲಾಗಿನ್ ಆಗಿ!

ಫ್ಲಿಪ್ ಕಾರ್ಟ್ ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಗ್ಯಾಜೆಟ್ ಗಳು ಸೇರಿದಂತೆ ಹಲವಾರು ಉತ್ಪಾದನೆಗಳನ್ನು ರಿಯಾಯಿತಿ ದರದಲ್ಲಿ ಮಾರುತ್ತಿದೆ. ಆದರೆ, ಐಫೋನ್​ಗಳು ಆ ಲಿಸ್ಟ್​ನಲ್ಲಿ ಇರಲಿಲ್ಲ.

ಮಂಗಳವಾರ ಅಂದರೆ ಸೆಪ್ಟಂಬರ್ 14 ರಂದು, ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದನಾ ಸಂಸ್ಥೆಗಳಲ್ಲೊಂದಾಗಿರುವ ಜೊತೆಗೆ ಅತ್ಯಂತ ಪ್ರತಿಷ್ಠಿತ ಕಂಪನಿ ಎನಿಸೊಕೊಂಡಿರುವ ಆ್ಯಪಲ್ ತನ್ನ ಹೊಸ ಐಫೋನ್ 13 ಸಿರೀಸ್ ಲಾಂಚ್ ಮಾಡುತ್ತಿರುವ ಬಗ್ಗೆ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ಆದರೆ ಇದೇ ಸಂದರ್ಭದಲ್ಲಿ ಌಪಲ್ ಸಂಸ್ಥೆ ಮುಂಚೂಣಿಯ ಪೋನ್​ಗಳೆಲ್ಲ ರಿಯಾಯಿತಿ ದರದಲ್ಲಿ ಮಾರಾಟವಾಗಲಿವೆ. ಫ್ಲಿಪ್ ಕಾರ್ಟ್ ಆನ್​ಲೈನ್​ ಪೋರ್ಟಲ್ ಐಪೋನ್ 12 ಸರಣಿಯ ಫೋನ್ ಗಳನ್ನು ಭಾರೀ ರಿಯಾಯಿತಿ ದರದಲ್ಲಿ ಮಾರಲು ನಿರ್ಧರಿಸಿದೆ.

ಫ್ಲಿಪ್ ಕಾರ್ಟ್ ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಗ್ಯಾಜೆಟ್ ಗಳು ಸೇರಿದಂತೆ ಹಲವಾರು ಉತ್ಪಾದನೆಗಳನ್ನು ರಿಯಾಯಿತಿ ದರದಲ್ಲಿ ಮಾರುತ್ತಿದೆ. ಆದರೆ, ಐಫೋನ್​ಗಳು ಆ ಲಿಸ್ಟ್​ನಲ್ಲಿ ಇರಲಿಲ್ಲ. ಹಾಗಾಗಿ, ಐಪೋನ್ 12 ಸರಣಿಯ ಫೋನ್ ಗಳನ್ನು ಭಾರೀ ರಿಯಾಯಿತಿ ದರದಲ್ಲಿ ಮಾರುವ ನಿರ್ಧಾರವನ್ನು ದಿಢೀರಾಗಿ ತೆಗೆದುಕೊಳ್ಳಲಾಗಿದೆ. ಈ ಫೋನ್ಗಳ ಜೊತೆಗೆ ಐಪೋನ್ ಬಜೆಟ್ ಪೋನ್ ಗಳನ್ನು ಸಹ ರಿಯಾಯಿತಿ ದರದಲ್ಲಿ ಮಾರಲು ಫ್ಲಿಪ್ ಕಾರ್ಟ್ನಿರ್ಧರಿಸಿರುವುದಲ್ಲ್ಲದೆ, ಬ್ಯಾಂಕ್ ಆಫರ್ ಮತ್ತು ಸುಲಭ ಈ ಎಮ್ ಐ ಆಪ್ಷನ್ಗಳನ್ನು ನೀಡುತ್ತಿದೆ.

ಐಪೋನ್ 12 ಸರಣಿಯ ಫೋನ್ ಗಳನ್ನು ಫ್ಲಿಪ್ಕಾರ್ಟ್ ಭಾರೀ ಡಿಸ್ಕೌಂಟ್ನಲ್ಲಿ ಮಾರುತ್ತಿರುವುದು ಜನರ ಗಮನ ಸೆಳೆಯುತ್ತಿದೆ. 79,999 ರೂ. ಗಳ ಐಫೋನ್ ಸೆಟ್ ಅನ್ನು ಅದು 66,999 ರೂ.ಗಳಿಗೆ ಅದು ಮಾರುತ್ತಿದೆ. ಅಂದರೆ ಒಟ್ಟಾರೆ ಶೇಕಡಾ 16 ರಷ್ಟು ಡಿಸ್ಕೌಂಟ್! ಹಾಗೆಯೇ, 128 ಜಿಬಿ ಸ್ಟೋರೇಜ್ ನ ಐಫೋನ್ 71, 999 ರೂ. ಗಳಿಗೆ ಫ್ಲಿಪ್ ಕಾರ್ಟ್ ಮಾರುತ್ತಿದೆ. ಇದರ ಅಸಲು ಬೆಲೆ 84,900 ರೂ ಆಗಿದೆ. 256 ಜಿಬಿ ಮಾಡೆಲ್ ಫೋನ್ ಅದರ ಮೂಲ ಬೆಲೆ ರೂ. 94,900 ಬದಲಿಗೆ 81,999 ರೂ. ಗಳಿಗೆ ಲಭ್ಯವಿದೆ. ಅಂದರೆ ಇದರ ಮೇಲಿನ ರಿಯಾಯಿತಿ ಶೇಕಡ 13.

ಇದನ್ನೂ ಓದಿ: Viral Video: ನೀರು ಕಂಡು ಖುಷಿಯಾಗಿ ಆಟವಾಡುತ್ತಾ ಈಜು ಕಲಿತ ನಾಯಿ ಮರಿಗಳ ಕ್ಯೂಟ್ ವಿಡಿಯೋ ವೈರಲ್

Click on your DTH Provider to Add TV9 Kannada