AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ- ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್​ ಶಾಸಕರು; ಸಿದ್ದರಾಮಯ್ಯ ಶಿವಕುಮಾರ್​ ಬಚಾವ್​

Siddaramaiah - DK Shivakumar: ವಿಧಾನಸೌಧದ ಬಳಿ ಗಲಾಟೆ ಆಗಿದ್ದರಿಂದ ಎತ್ತುಗಳು ಬೆದರಿದವು. ಹೀಗಾಗಿ ಶಾಸಕ ವೆಂಕಟರಮಣಯ್ಯ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದಿದ್ದಾರೆ.

ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ- ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್​ ಶಾಸಕರು; ಸಿದ್ದರಾಮಯ್ಯ ಶಿವಕುಮಾರ್​ ಬಚಾವ್​
ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಶಾಸಕ
Follow us
TV9 Web
| Updated By: Digi Tech Desk

Updated on:Sep 13, 2021 | 1:53 PM

ಬೆಂಗಳೂರು: ಕಾಂಗ್ರೆಸ್‌ನ ಎತ್ತಿನಗಾಡಿ ಚಲೋ ವಿಧಾನಸೌಧದತ್ತ ತೆರಳಿದ್ದು, ಕೇವಲ 2 ಎತ್ತಿನ ಗಾಡಿಯಲ್ಲಿ ತೆರಳುವುದಕ್ಕೆ ಮಾತ್ರ ಅವಕಾಶ ಇದೆ. ಹೀಗಾಗಿ ಒಂದೇ ಎತ್ತಿನ ಬಂಡಿಯಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ತೆರಳಿದ್ದಾರೆ. ಈ ವೇಳೆ ವಿಧಾನಸೌಧದ ಗೇಟ್ ಮುಂದೆ ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದಾಗ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದಿದ್ದಾರೆ. ವಿಧಾನಸೌಧದ ಬಳಿ ಗಲಾಟೆ ಆಗಿದ್ದರಿಂದ ಎತ್ತುಗಳು ಬೆದರಿದವು. ಹೀಗಾಗಿ ಶಾಸಕ ವೆಂಕಟರಮಣಯ್ಯ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದಿದ್ದಾರೆ.

ಎತ್ತಿನಗಾಡಿ ಚಲೋ ಪ್ರತಿಭಟನೆ ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಹಿಂದಿನ ಸರ್ಕಾರ ಹೆಚ್ಚು ಸಾಲ ಮಾಡಿದೆ ಎಂದು ಹೇಳುತ್ತಾರೆ. ಕಚ್ಚಾ ತೈಲ ಬೆಲೆ ಹೆಚ್ಚಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿಲ್ಲ. ಕೇಂದ್ರ ಸರ್ಕಾರ ಬರೀ ಸುಳ್ಳು ಹೇಳುತ್ತಿದೆ. 7 ವರ್ಷದಲ್ಲಿ 24 ಲಕ್ಷ ಕೋಟಿ ರೂ. ಆದಾಯ ಬಂದಿದೆ. ಬೆಲೆ ಏರಿಕೆ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ಈ ಸರ್ಕಾರ ಕೆಳಗಿಳಿಸುವವರೆಗೂ ನಾವು ಹೋರಾಡುತ್ತೇವೆ ಎಂದು ಹೇಳಿಕೆ ನೀಡಿದ ಡಿಕೆಶಿ, ಪೆಟ್ರೋಲ್, ಡೀಸೆಲ್ ದರ 75 ರೂ.ಗೆ ಇಳಿಕೆಯಾಗಬೇಕು ಎಂದರು.

ಬೆಲೆ ಏರಿಕೆಯಿಂದ ಭವಿಷ್ಯದಲ್ಲಿ ಎತ್ತಿನಗಾಡಿಯೇ ಗಟ್ಟಿ ಎಂಬ ಸಂದೇಶವನ್ನು ರವಾನಿಸುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಎತ್ತಿನಗಾಡಿಯನ್ನು ಏರಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಅಧಿಕೃತ ನಿವಾಸದಿಂದ ವಿಧಾನಸೌಧದತ್ತ ತೆರಳಿದ ಸಿದ್ದರಾಮಯ್ಯಗೆ ಎಸ್.ಆರ್.ಪಾಟೀಲ್. ಎಂ‌.ಬಿ.ಪಾಟೀಲ್ ಮತ್ತು ಪರಿಷತ್ ಸದಸ್ಯ ನಜಿರ್ ಅಹಮದ್ ಸಾಥ್ ನೀಡುತ್ತಿದ್ದಾರೆ.

ಪ್ರತಿಭಟನಾಕಾರರನ್ನು ತಡೆದ ಪೊಲೀಸರು ನಾಲ್ಕು ಎತ್ತಿನ ಗಾಡಿ ಸಹಿತ ನೂರಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಿಂಡ್ಸನ್ ಮ್ಯಾನರ್ ಸರ್ಕಲ್ ಬಳಿ ಪೊಲೀಸರು ತಡೆದು, ಬ್ಯಾರಿಕೆಡ್ ಹಾಕಿ ಬಂದ್ ಮಾಡಿದ್ದಾರೆ. ಜೊತೆಗೆ ಚಾಲುಕ್ಯ ಸರ್ಕಲ್ ಬಳಿ ಎತ್ತಿನ ಗಾಡಿಯನ್ನು ತಡೆದ ಪೋಲಿಸರು ಬ್ಯಾರಿಕೆಡ್ ಹಾಕಿದ್ದಾರೆ.

ಪೊಲೀಸರ ವಿರುದ್ಧ ಸಿದ್ದರಾಮಯ್ಯ ಕಿಡಿ ವಿಧಾನಸೌಧದ ಆವರಣಕ್ಕೆ ಎತ್ತಿನಗಾಡಿ ಬಿಟ್ಟರೆ ಏನಾಗುತ್ತೆ? ಆಕಾಶ ಬಿದ್ದು ಹೋಗುತ್ತಾ ಎಂದು ಪೊಲೀಸರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ವಿಧಾನಸೌಧದ ಗೇಟ್ ನಂಬರ್ 1ರ ಬಳಿ ಎತ್ತಿನಗಾಡಿ ಹೋಗಲು ಬಿಡಿ, ಇಲ್ಲ ಅಂದ್ರೆ ಮೇಲೆ ಓಡಿಸುತ್ತೇವೆ ಎಂದು ಪೊಲೀಸರ ಜೊತೆ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನವರು ಯುಪಿಎ ಸರ್ಕಾರ ಇದ್ದಾಗ ಪ್ರತಿಭಟನೆ ಮಾಡಬೇಕಿತ್ತು; ಸದನದಲ್ಲೇ ತಕ್ಕ ಉತ್ತರ ನೀಡುವೆ – ಸಿಎಂ ಬೊಮ್ಮಾಯಿ

ವಿಧಾನಸೌಧದೊಳಗೆ ಎತ್ತಿನಗಾಡಿ ಬಿಟ್ಟರೆ ಏನಾಗುತ್ತೆ, ಆಕಾಶ ಬಿದ್ದು ಹೋಗುತ್ತಾ; ಸಿದ್ದರಾಮಯ್ಯ ಕಿಡಿ

Published On - 1:35 pm, Mon, 13 September 21