ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಶುಭಸುದ್ದಿ; ನವೆಂಬರ್​ ಒಳಗೆ ಠೇವಣಿ ಮೇಲಿನ ವಿಮಾ ಹಣ ಗ್ರಾಹಕರಿಗೆ ಲಭ್ಯ

ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಲ್ಲಿ 31,576 ಗ್ರಾಹಕರು ಐದು ಲಕ್ಷ ರೂಪಾಯಿವರೆಗೂ ಠೇವಣಿ ಇಟ್ಟಿದ್ದರು.

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಶುಭಸುದ್ದಿ; ನವೆಂಬರ್​ ಒಳಗೆ ಠೇವಣಿ ಮೇಲಿನ ವಿಮಾ ಹಣ ಗ್ರಾಹಕರಿಗೆ ಲಭ್ಯ
ಗುರು ರಾಘವೇಂದ್ರ ಬ್ಯಾಂಕ್
Follow us
S Chandramohan
| Updated By: guruganesh bhat

Updated on:Sep 13, 2021 | 3:45 PM

ಬೆಂಗಳೂರು: ಆರ್ಥಿಕ ಅವ್ಯವಹಾರ, ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಬೆಂಗಳೂರಿನ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಬ್ಯಾಂಕ್ ನಲ್ಲಿ ಹಣ ಠೇವಣಿ ಇಟ್ಟಿರುವ ಗ್ರಾಹಕರ ಪೈಕಿ ಅರ್ಹ ಗ್ರಾಹಕರು ನವಂಬರ್ ಅಂತ್ಯದೊಳಗೆ ಠೇವಣಿ ಮೇಲಿನ ವಿಮಾ ಮೊತ್ತ ಸಿಗಲಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಡಿಫಾಸಿಟ್‌ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ಕಾಯಿದೆಯಡಿ 5 ಲಕ್ಷ ರೂಪಾಯಿವರೆಗೂ ಹಣ ಪಡೆಯಲು ಅವಕಾಶ ಸಿಗಲಿದೆ. ಇದೇ ರೀತಿ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಅಪರೇಟಿವ್ ಬ್ಯಾಂಕ್‌ನ ಅರ್ಹ ಗ್ರಾಹಕರಿಗೂ ತಮ್ಮ ಠೇವಣಿ ಮೇಲಿನ ವಿಮಾ ಹಣ ಸಿಗಲಿದೆ.

ಬೆಂಗಳೂರಿನ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರದಿಂದ ತತ್ತರಿಸಿದೆ. ಬ್ಯಾಂಕ್‌ನಲ್ಲಿ ಹೆಚ್ಚಿನ ಬಡ್ಡಿ ಹಣದಾಸೆಗೆ ಬಿದ್ದು ಲಕ್ಷಾಂತರ ರೂಪಾಯಿ ಹಣ ಠೇವಣಿ ಇಟ್ಟ ಗ್ರಾಹಕರಿಗೆ ತಮ್ಮ ಹಣವೂ ವಾಪಸ್ ಬರುತ್ತಿಲ್ಲ. 2019ರ ಜನವರಿ 10ರಿಂದ ಬ್ಯಾಂಕ್‌ ನ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದೆ. ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯಿದೆ 1949ರ ಸೆಕ್ಷನ್ 35(ಎ) ಅಡಿ ನಿರ್ಬಂಧ ವಿಧಿಸಲಾಗಿದೆ. ಪೂರ್ಣ ಹಣವನ್ನು ಗ್ರಾಹಕರಿಗೆ ನೀಡಬಾರದೆಂದು ಆರ್‌ಬಿಐ ನಿರ್ಬಂಧ ವಿಧಿಸಿದೆ. ಬ್ಯಾಂಕ್ ನಲ್ಲಿ ಹಣ ಠೇವಣಿ ಇಟ್ಟ ಗ್ರಾಹಕರಿಗೆ ತಮ್ಮ ಹಣವನ್ನು ಪೂರ್ಣ ಪ್ರಮಾಣದಲ್ಲಿ ವಾಪಸ್ ಪಡೆಯಲು ಸಾಧ್ಯವಾಗುತ್ತಿಲ್ಲ. ಇದೇ ರೀತಿ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಅಪರೇಟಿವ್ ಬ್ಯಾಂಕ್ ನ ಗ್ರಾಹಕರ ಸ್ಥಿತಿಯೂ ಇದೆ. ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಅಪರೇಟೀವ್ ಬ್ಯಾಂಕ್ ಗ್ರಾಹಕರಿಗೂ ತಮ್ಮ ಪೂರ್ತಿ ಠೇವಣಿ ಹಣವನ್ನು ವಾಪಸ್ ಪಡೆಯಲು ಸಾಧ್ಯವಾಗುತ್ತಿಲ್ಲ. ಪಿಎಂಸಿ ಬ್ಯಾಂಕ್ ಅನ್ನು ಈ ವರ್ಷದ ಡಿಸೆಂಬರ್ 31ರವರೆಗೆ ಮೋರಾಟೋರಿಯಂನಲ್ಲಿ ಇಡಲಾಗಿದೆ.

ಈಗ ಈ ಎರಡು ಬ್ಯಾಂಕ್ ಗಳ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಈ ಎರಡು ಬ್ಯಾಂಕ್‌ಗಳ ಗ್ರಾಹಕರು ತಮ್ಮ ಠೇವಣಿ ಹಣದ ಮೇಲಿನ ವಿಮಾ ಹಣ ಪಡೆಯಲು ಅವಕಾಶ ಸಿಗಲಿದೆ. ಈ ವರ್ಷದ ನವಂಬರ್ ಅಂತ್ಯದೊಳಗೆ ಗ್ರಾಹಕರಿಗೆ ಹಣ ಸಿಗಲಿದೆ. ಕೇಂದ್ರ ಸರ್ಕಾರವು ಮಾನ್ಸೂನ್ ಅಧಿವೇಶನದಲ್ಲಿ ಡಿಫಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್(ಡಿಐಸಿಜಿಸಿ) ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತಂದಿದೆ. ಈ ಕಾಯಿದೆಯ ಜಾರಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಕಾಯಿದೆಯ ಅಧಿಸೂಚನೆ ಹೊರಡಿಸಿದ ಬಳಿಕ ಕಾಯಿದೆ ಜಾರಿಯಾದಂತೆ. ಹೀಗಾಗಿ ಈ ಕಾಯಿದೆ ಜಾರಿಯಾದ ಪರಿಣಾಮವಾಗಿ ಬ್ಯಾಂಕ್ ಗ್ರಾಹಕರಿಗೆ ಠೇವಣಿ ವಿಮಾ ಹಣ ಸಿಗಲಿದೆ. ಬೆಂಗಳೂರಿನ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮತ್ತು ಪಿಎಂಸಿ ಬ್ಯಾಂಕ್ ಗಳ ಗ್ರಾಹಕರಿಗೆ 10 ಸಾವಿರ ಕೋಟಿ ರೂಪಾಯಿ ಹಣ ನೀಡಲಾಗುತ್ತೆ ಎಂದು ಅಂದಾಜು ಮಾಡಲಾಗಿದೆ.

ಈಗ ಈ ಬ್ಯಾಂಕ್‌ಗಳು ಹಣ ಪಡೆಯಲು ಅರ್ಹ ಗ್ರಾಹಕರ ಪಟ್ಟಿಯನ್ನು ತಯಾರಿಸಬೇಕು. ಆದರೆ, ಬ್ಯಾಂಕ್‌ಗಳು ಇನ್ನೂ ಅರ್ಹ ಗ್ರಾಹಕರ ಪಟ್ಟಿ ತಯಾರಿಸಿಲ್ಲ. ಹೊಸ ಕಾಯಿದೆಯಡಿ ಆರ್ಥಿಕ ಸಂಕಷ್ಟದಲ್ಲಿರುವ ಬ್ಯಾಂಕ್ ಗ್ರಾಹಕರಿಗೆ 90 ದಿನದೊಳಗೆ ಠೇವಣಿ ಮೇಲಿನ ವಿಮಾ ಹಣ ನೀಡಬೇಕು. ಹೀಗಾಗಿ ಈಗ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಪಿಎಂಸಿ ಬ್ಯಾಂಕ್ ಗ್ರಾಹಕರಿಗೆ ಕಾಯಿದೆ ಜಾರಿಗೆ ಅಧಿಸೂಚನೆ ಹೊರಡಿಸಿದ 90 ದಿನದೊಳಗೆ ಠೇವಣಿ ಮೇಲಿನ ವಿಮಾ ಹಣ ಸಿಗಲಿದೆ. ಡಿಫಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್‌ನಡಿ ಬ್ಯಾಂಕ್‌ ಗ್ರಾಹಕರು ಬ್ಯಾಂಕ್ ನಲ್ಲಿ ಠೇವಣಿ ಇಟ್ಟ ಹಣಕ್ಕೆ ವಿಮೆ ಒದಗಿಸಲಾಗುತ್ತೆ. ಠೇವಣಿ ಹಣದ ಮೇಲೆ ಐದು ಲಕ್ಷ ರೂಪಾಯಿವರೆಗೂ ವಿಮೆ ನೀಡಲಾಗುತ್ತೆ. ಬ್ಯಾಂಕ್‌ಗಳು ಆರ್ಥಿಕ ನಷ್ಟ, ಅವ್ಯವಹಾರ, ಬೇರೆ ಬ್ಯಾಂಕ್ ಜೊತೆಗೆ ವಿಲೀನ, ಬ್ಯಾಂಕ್‌ ಪುನಶ್ಚೇತನ ಹಾಗೂ ಬೇರೆ ಬೇರೆ ಕಾರಣಗಳಿಂದ ಬಾಗಿಲು ಮುಚ್ಚಿದಾಗ, ಗ್ರಾಹಕರಿಗೆ ಠೇವಣಿ ಹಣದ ಮೇಲಿನ ಇನ್ಸೂರೆನ್ಸ್ ಮೂಲಕ 5 ಲಕ್ಷ ರೂಪಾಯಿವರೆಗೂ ಹಣ ನೀಡಲು ಅವಕಾಶವನ್ನು ಹೊಸ ಕಾಯಿದೆಯಲ್ಲಿ ಕಲ್ಪಿಸಲಾಗಿದೆ. ಹೀಗಾಗಿ ಈಗ ಡಿಫಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್‌ ತಿದ್ದುಪಡಿ ಕಾಯಿದೆ ಜಾರಿಯಾಗಿರುವುದರಿಂದ ಬ್ಯಾಂಕ್ ಗ್ರಾಹಕರಿಗೆ ಐದು ಲಕ್ಷ ರೂಪಾಯಿವರೆಗೂ ಹಣ ಸಿಗಲಿದೆ. ಈ ಮೊದಲು ಬ್ಯಾಂಕ್ ಠೇವಣಿ ಮೇಲೆ ಒಂದು ಲಕ್ಷ ರೂಪಾಯಿವರೆಗೂ ವಿಮೆ ನೀಡಲಾಗುತ್ತಿತ್ತು. ಈ ವಿಮಾ ಮೊತ್ತವನ್ನು 1 ಲಕ್ಷ ರೂಪಾಯಿಯಿಂದ ಐದು ಲಕ್ಷ ರೂಪಾಯಿಗೆ ಏರಿಸಲಾಗಿದೆ.

ಡಿಫಾಸಿಟ್‌ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್‌, ಆರ್‌ಬಿಐ ನಡಿ ಕಾರ್ಯನಿರ್ವಹಿಸುವ ಸಂಸ್ಥೆ. ಈ ಸಂಸ್ಥೆಯೇ ಬ್ಯಾಂಕ್ ಗ್ರಾಹಕರಿಗೆ ಎಲ್ಲ ಬ್ಯಾಂಕ್‌ಗಳ ಠೇವಣಿ ಹಣದ ಮೇಲೆ ವಿಮೆಯನ್ನು ಒದಗಿಸುತ್ತದೆ. ಬ್ಯಾಂಕ್‌ಗಳು ಮೊರಾಟೋರಿಯಂನಡಿ ಇದ್ದಾಗ, ಮೊದಲು 45 ದಿನಗಳಲ್ಲಿ ಬ್ಯಾಂಕ್‌ಗಳು, ಠೇವಣಿ ಹಣದ ಮೇಲಿನ ವಿಮೆಯನ್ನು ಪಡೆಯಲು ಅರ್ಹವಾಗಿರುವ ಖಾತೆದಾರರ ಪಟ್ಟಿಯನ್ನು ತಯಾರಿಸಬೇಕು. ಪಟ್ಟಿಯನ್ನು ಡಿಐಸಿಜಿಸಿ ಗೆ ಬ್ಯಾಂಕ್‌ಗಳು ನೀಡಬೇಕು. ನಂತರದ 45 ದಿನಗಳಲ್ಲಿ ಡಿಐಸಿಜಿಸಿ, ಈ ಅರ್ಹ ಖಾತೆದಾರರ ಪಟ್ಟಿಯನ್ನು ಮೌಲ್ಯಮಾಪನ ಮಾಡಲಿದೆ. ಹೀಗಾಗಿ ಈಗ ಬೆಂಗಳೂರಿನ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಅಪರೇಟೀವ್ ಬ್ಯಾಂಕ್ ಗ್ರಾಹಕರಿಗೆ ನವಂಬರ್‌ ಅಂತ್ಯದೊಳಗೆ ಬ್ಯಾಂಕ್ ಠೇವಣಿ ಹಣದ ಮೇಲಿನ ವಿಮಾ ಮೊತ್ತ 5 ಲಕ್ಷ ರೂಪಾಯಿವರೆಗೂ ಸಿಗಲಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಈ ತಿಂಗಳಿನಿಂದಲೇ ಬ್ಯಾಂಕ್‌ಗಳು ವಿಮಾ ಹಣ ಪಡೆಯಲು ಅರ್ಹ ಗ್ರಾಹಕರ ಪಟ್ಟಿಯನ್ನು ತಯಾರಿಸುತ್ತಿವೆ. ಹೀಗಾಗಿ ನವಂಬರ್ ಅಂತ್ಯದೊಳಗೆ 90 ದಿನ ಪೂರ್ಣವಾಗಲಿದೆ.

ಬೆಂಗಳೂರಿನ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ 923 ಕೋಟಿ ರೂಪಾಯಿ ಅವ್ಯವಹಾರ ಆಗಿದೆ. ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಲ್ಲಿ 41,804 ಮಂದಿ ಠೇವಣಿದಾರರಿದ್ದಾರೆ. ಇವರ ಪೈಕಿ 31,576 ಮಂದಿ 5 ಲಕ್ಷ ರೂಪಾಯಿವರೆಗೂ ಹಣ ಠೇವಣಿ ಇಟ್ಟಿದ್ದಾರೆ. ಈಗ ಶೇ.75 ರಷ್ಟು ಗ್ರಾಹಕರಿಗೆ ವಿಮಾ ಮೊತ್ತ ಸಿಗಲಿದೆ. ಈ ಮೊದಲು ಬ್ಯಾಂಕ್ ಠೇವಣಿಯ ವಿಮಾ ಮೊತ್ತ ಪಡೆಯಲು 8 ರಿಂದ 10 ವರ್ಷ ಸಮಯ ಹಿಡಿಯುತ್ತಿತ್ತು. ಆದರೇ, ಬ್ಯಾಂಕ್ ಠೇವಣಿ ಹಣ ಪಡೆಯದಂತೆ ನಿರ್ಬಂಧ ವಿಧಿಸಿದ 90 ದಿನಗಳಲ್ಲಿ ಡಿಐಸಿಜಿಸಿ ಮೂಲಕ ವಿಮಾ ಮೊತ್ತವನ್ನು ಗ್ರಾಹಕರಿಗೆ ನೀಡಲಾಗುತ್ತೆ. ಎಲ್ಲ ವಾಣಿಜ್ಯ ಬ್ಯಾಂಕ್‌ಗಳು, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು, ಕೋ ಅಪರೇಟಿವ್ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣಾ ಬ್ಯಾಂಕ್‌ಗಳ ಎಲ್ಲ ರೀತಿಯ ಠೇವಣಿ ಹಣಕ್ಕೂ ಈಗ ಡಿಐಸಿಜಿಸಿ ಅಡಿ ವಿಮೆ ಇದೆ. ಉಳಿತಾಯ ಖಾತೆ, ಫಿಕ್ಸೆಡ್ ಡಿಫಾಸಿಟ್, ಚಾಲ್ತಿ ಖಾತೆ ಸೇರಿದಂತೆ ಎಲ್ಲ ರೀತಿ ಬ್ಯಾಂಕ್‌ ಖಾತೆಗಳ ಹಣಕ್ಕೂ ವಿಮೆ ಸಿಗಲಿದೆ. ಡಿಐಸಿಜಿಸಿ, ಬ್ಯಾಂಕ್‌ಗಳ ಸಣ್ಣ ಠೇವಣಿದಾರರಿಗೆ ಅನುಕೂಲ ಎಂದು ಸಂಸತ್‌ ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಈ ಮಹತ್ವದ ಮಸೂದೆಗಾಗಿ ಸಣ್ಣ ಠೇವಣಿದಾರರು ಬಹಳ ದೀರ್ಘಕಾಲದಿಂದ ಕಾಯುತ್ತಿದ್ದರು. ಸಣ್ಣ ಠೇವಣಿದಾರರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ಮಸೂದೆ ಜಾರಿಗೆ ತರಲಾಗುತ್ತಿದೆ ಎಂದು ಸಂಸತ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಈಗ ಕಾಯಿದೆಯ ಫಲ ಬೆಂಗಳೂರಿನ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಗ್ರಾಹಕರಿಗೂ ಸಿಗುತ್ತಿದೆ.

ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಾರ್ಷಿಕ 4 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದ ಬ್ಯಾಂಕ್. ಆದರೇ, ಬ್ಯಾಂಕ್ ಮ್ಯಾನೇಜ್ ಮೆಂಟ್ ಅವ್ಯವಹಾರ ನಡೆಸಿ ಗ್ರಾಹಕರನ್ನು ಸಂಕಷ್ಟಕ್ಕೆ ದೂಡಿತ್ತು. ಸುಮಾರು 2,200 ಕೋಟಿ ರೂಪಾಯಿ ಆಸ್ತಿಯನ್ನು ಅಡಮಾನ ಇಟ್ಟುಕೊಂಡು 1,700 ಕೋಟಿ ರೂಪಾಯಿ ಸಾಲ ನೀಡಿತ್ತು. ಆದರೆ, ಸಾಲ ಪಡೆದವರು ಸಾಲ ಮರುಪಾವತಿ ಮಾಡದೇ ಬ್ಯಾಂಕ್ ಸಂಕಷ್ಟಕ್ಕೀಡಾಗಿತ್ತು.

ಇದನ್ನೂ ಓದಿ: 

ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಬಿಜೆಪಿ ಮಾಜಿ ಎಂ​ಎಲ್​ಸಿ ಅಶ್ವಥ್ ನಾರಾಯಣ್ 12 ಕೋಟಿ ಸಾಲ ಕಟ್ಟಿಲ್ಲ -ಠೇವಣಿದಾರರ ಅಳಲು

ಖಾತೆಯಲ್ಲಿದ್ದ ಹಣದ ಬಗ್ಗೆ ಆತಂಕ: ಗುರು ರಾಘವೇಂದ್ರ ಬ್ಯಾಂಕ್ ವಿರುದ್ಧ ಠೇವಣಿದಾರರ ಪ್ರತಿಭಟನೆ

(Bengaluru Gururaghavendra Cooperative Bank customers get good news Insurance money on deposit is available to customers by November)

Published On - 3:33 pm, Mon, 13 September 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ