ಖಾತೆಯಲ್ಲಿದ್ದ ಹಣದ ಬಗ್ಗೆ ಆತಂಕ: ಗುರು ರಾಘವೇಂದ್ರ ಬ್ಯಾಂಕ್ ವಿರುದ್ಧ ಠೇವಣಿದಾರರ ಪ್ರತಿಭಟನೆ

ಠೇವಣಿದಾರರ ಕೋಟ್ಯಂತರ ರೂ. ದುರ್ಬಳಕೆಯನ್ನು ಖಂಡಿಸಿ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ವಿರುದ್ಧ ಪ್ರತಿಭಟನೆ ನಡೆಸಿದರು. ಬಸವನಗುಡಿಯ ನೆಟ್ಕಲ್ಲಪ್ಪ ಮೈದಾನದಲ್ಲಿ ಪ್ರತಿಭಟನೆ ನಡೆಯಿತು.

ಖಾತೆಯಲ್ಲಿದ್ದ ಹಣದ ಬಗ್ಗೆ ಆತಂಕ: ಗುರು ರಾಘವೇಂದ್ರ ಬ್ಯಾಂಕ್ ವಿರುದ್ಧ ಠೇವಣಿದಾರರ ಪ್ರತಿಭಟನೆ
ಗುರು ರಾಘವೇಂದ್ರ ಬ್ಯಾಂಕ್ ವಿರುದ್ಧ ಠೇವಣಿದಾರರ ಪ್ರತಿಭಟನೆ
KUSHAL V

|

Dec 21, 2020 | 12:29 PM

ಬೆಂಗಳೂರು: ಠೇವಣಿದಾರರ ಕೋಟ್ಯಂತರ ರೂಪಾಯಿ ದುರ್ಬಳಕೆ ಮಾಡಿದ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್​ ವಿರುದ್ಧ ಠೇವಣಿದಾರರ ಸಂಘ ಮತ್ತು ವೆಲ್ಫೇರ್ ಫೋರಮ್ , ಬಸವನಗುಡಿಯ ನೆಟ್ಕಲ್ಲಪ್ಪ ಮೈದಾನದಲ್ಲಿ ಜಂಟಿಯಾಗಿ ಪ್ರತಿಭಟನೆ ನಡೆಸಿದವು.

ಈ ವೇಳೆ ಮಾತನಾಡಿದ ಕೆಲವು ಠೇವಣಿದಾರರು,  ಜನವರಿಗೆ ಒಂದು ವರ್ಷ ಆಗುತ್ತೆ. ನಮ್ಮ ಹಣ ಕೈಸೇರುವ ಬಗ್ಗೆ ಭರವಸೆ ಇಲ್ಲ, ಯಾವುದೇ ಪ್ರೊಗ್ರೆಸ್ ಕಾಣುತ್ತಿಲ್ಲ. ಹೀಗಾಗಿ ಶಾಂತಿಯುತ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ತಮ್ಮ ಖಾತೆಯಲ್ಲಿರುವ ಹಣದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಠೇವಣಿದಾರರು, ಅದರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಆಗ್ರಹಿಸಿದ್ದಾರೆ. ಈ ಹಿಂದೆ ಕೂಡ ಹಲವು ಬಾರಿ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್​ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಗುರುರಾಘವೇಂದ್ರ ಬ್ಯಾಂಕ್ ಬಹುಕೋಟಿ ಅವ್ಯವಹಾರ ಪ್ರಕರಣ: CID ಕೈಗೆ ಸಿಕ್ಕಿಬಿದ್ದ ಖತರ್ನಾಕ್​ಗಳು

ಗುರುರಾಘವೇಂದ್ರ ಬ್ಯಾಂಕ್‌ ವಂಚನೆ ಕೇಸ್: ಪ್ರಮುಖ ಆರೋಪಿಗಳಿಗೆ ನೆರವಾದವರು ಅರೆಸ್ಟ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada