ಈಶ್ವರಪ್ಪಗೂ, ನನಗೂ ಲವ್ ಆ್ಯಂಡ್ ಹೇಟ್ ಫ್ರೆಂಡ್​ಶಿಪ್​ ಇದೆ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ

ನಿಮ್ಮ ಮಾತು ಈಶ್ವರಪ್ಪಗೆ ಸರಿಯಾಗಿ ಕೇಳಿಸುತ್ತಿಲ್ಲವಂತೆ. ಅವರ ಮೇಲೆ ಏನಾದರೂ ಸಿಟ್ಟಿದೆಯಾ ಅಂತ ಕಾಗೇರಿ ಸಿದ್ದರಾಮಯ್ಯಗೆ ಕೇಳುತ್ತಾರೆ.

ಈಶ್ವರಪ್ಪಗೂ, ನನಗೂ ಲವ್ ಆ್ಯಂಡ್ ಹೇಟ್ ಫ್ರೆಂಡ್​ಶಿಪ್​ ಇದೆ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ


ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪಗೂ (KS Eshwarappa) ಮತ್ತು ನನಗೂ ಲವ್ ಆ್ಯಂಡ್ ಹೇಟ್ ಸಂಬಂಧವಿದೆ. ವೈರನೂ ಇದೆ, ಸ್ನೇಹನೂ ಇದೆ. ರಾಜಕೀಯವಾಗಿ, ವೈಯುಕ್ತಿಕವಾಗಿ ಏನೂ ಇಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಗಣ್ಯರಿಗೆ ಸಿದ್ದರಾಮಯ್ಯ ಸಂತಾಪ ಸೂಚಿಸುವ ವೇಳೆ ಅವರ ಧ್ವನಿ ಕೇಳಿಸುತ್ತಿರಲಿಲ್ಲ. ಆಗ ಮೈಕ್ ಸರಿ ಕೇಳುತ್ತಿಲ್ಲವಂತೆ ಎಂದು ಸ್ಪೀಕರ್ ಕಾಗೇರಿ ಹೇಳುತ್ತಾರೆ. ನಿಮಗೆ ಸರಿಯಾಗಿ ಕೇಳುತ್ತಿದೆಯಲ್ಲ, ನಮಗೂ ನಿಮಗೂ ಅಡ್ಜಸ್ಟ್ಮೆಂಟ್ ಏನಿಲ್ಲ ಅಲ್ವಾ? ಗೌರವ ಇದೆ ಅಷ್ಟೇ ಅಂತ ಸಿದ್ದರಾಮಯ್ಯ ಹೇಳುತ್ತಾರೆ.

ನಿಮ್ಮ ಮಾತು ಈಶ್ವರಪ್ಪಗೆ ಸರಿಯಾಗಿ ಕೇಳಿಸುತ್ತಿಲ್ಲವಂತೆ. ಅವರ ಮೇಲೆ ಏನಾದರೂ ಸಿಟ್ಟಿದೆಯಾ ಅಂತ ಕಾಗೇರಿ ಸಿದ್ದರಾಮಯ್ಯಗೆ ಕೇಳುತ್ತಾರೆ. ಆಗ ಸ್ಪೀಕರ್ ಮಾತಿಗೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಈಶ್ವರಪ್ಪ, ನನಗೂ ಲವ್ ಆ್ಯಂಡ್ ಹೇಟ್ ಫ್ರೆಂಡ್ ಶೀಪ್. ವೈರನೂ ಇದೆ, ಸ್ನೇಹನೂ ಇದೆ. ಆದರೆ ರಾಜಕೀಯವಾಗಿ, ವೈಯುಕ್ತಿಕವಾಗಿ ಏನೂ ಇಲ್ಲ ಅಂತ ತಿಳಿಸಿದರು.

ಇಬ್ರಾಹಿಂ ಸಲಹೆ ಸೂಕ್ತವಾಗಿದೆ ಎಂದ ಸಭಾಪತಿ
ಅಗಲಿದ ಗಣ್ಯರಿಗೆ ವಿಧಾನಪರಿಷತ್ನಲ್ಲಿ ಸಂತಾಪ ಸೂಚಿಸಿದ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ, ಸಂತಾಪ ಸೂಚಿಸುವಾಗ ದೇಶಕ್ಕೆ ನಷ್ಟವಾಗಿದೆ ಎನ್ನಲಾಗುತ್ತದೆ. ಅವರ ಮನೆ ಪರಿಸ್ಥಿತಿ ಏನಾಗಿದೆ ಎಂದು ತಿಳಿಯಬೇಕು. ಸಂತಾಪ ಸೂಚಿಸುವ ಮುನ್ನ ಮಾಸಾಶನ ವ್ಯವಸ್ಥೆ ಆಗಬೇಕು. ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಅಂತ ಒತ್ತಾಯಿಸುತ್ತಾರೆ. ಈ ವೇಳೆ ಸಿ.ಎಂ.ಇಬ್ರಾಹಿಂ ಸಲಹೆ ಸೂಕ್ತವಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳುತ್ತಾರೆ.

ಇದನ್ನೂ ಓದಿ

ವಿಧಾನಸೌಧದ ಸುತ್ತಮುತ್ತ 2 ಕಿ.ಮೀ ತನಕವೂ ನಿಷೇಧಾಜ್ಞೆ; ವಾಹನ ಸವಾರರೇ ಗಮನಿಸಿ

ಸಿಎಂ ಬೊಮ್ಮಾಯಿ ಜತೆ ಫೋನ್ ಮೂಲಕ ಚರ್ಚಿಸಿದೆ; ನಂಜನಗೂಡು ದಂಡಾಧಿಕಾರಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿರುವೆ: ಸಂಸದ ಪ್ರತಾಪ್

(Siddaramaiah said that KS Eshwarappa and I have a love and hate relationship)

Click on your DTH Provider to Add TV9 Kannada