ಸಾರಿಗೆ ಅಧಿಕಾರಿಗಳ ಜೊತೆ ಶ್ರೀರಾಮುಲು ಸಭೆ: ಸಾರಿಗೆ ನೌಕರರ ಅಮಾನತು ವಾಪಸ್ ಪಡೆಯಲು ನಿರ್ಧಾರ?
4 ನಿಗಮಗಳ ಸಾರಿಗೆ ಅಧಿಕಾರಿಗಳ ಜೊತೆ ಸಭೆ ನಡೆದಿತ್ತು. ಅಮಾನತುಗೊಂಡಿರುವ ನೌಕರರನ್ನ ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಬೆಂಗಳೂರು: ಸಾರಿಗೆ ನೌಕರರ ಅಮಾನತು ವಾಪಸ್ ಪಡೆಯಲು ನಿರ್ಧಾರ ಕೈಗೊಳ್ಳಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಮಾನತು ಬಹುತೇಕ ವಾಪಸ್ ಪಡೆಯಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ನಾಳೆ ಸಂಜೆಯೊಳಗೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನಾಳೆ (ಸೆಪ್ಟೆಂಬರ್ 14) ಈ ಸಂಬಂಧ ಸಾರಿಗೆ ಸಚಿವ ಬಿ. ಶ್ರೀರಾಮುಲು ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಇಂದು ಸಾರಿಗೆ ಅಧಿಕಾರಿಗಳ ಜೊತೆ ಸಚಿವ ಶ್ರೀರಾಮುಲು ಮಹತ್ವದ ಸಭೆ ನಡೆಸಿದ್ದರು. ವಿಧಾನಸೌಧದ ಕಚೇರಿಯಲ್ಲಿ ಇಂದು ಸಭೆ ನಡೆದಿತ್ತು. ನೌಕರರ ಅಮಾನತು ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಮಾಹಿತಿ ಪಡೆದಿದ್ದರು. 4 ನಿಗಮಗಳ ಸಾರಿಗೆ ಅಧಿಕಾರಿಗಳ ಜೊತೆ ಸಭೆ ನಡೆದಿತ್ತು. ಅಮಾನತುಗೊಂಡಿರುವ ನೌಕರರನ್ನ ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಹಲವು ಕಾರಣಗಳಿಂದ ಕೆಲ ಸಾರಿಗೆ ನೌಕರನ್ನಾಮಾನತುಗೊಳಿಸಲಾಗಿತ್ತು. ಇತ್ತೀಚೆಗೆ ಕೊವಿಡ್ ಸಮಯದಲ್ಲಿ ಪ್ರತಿಭಟನೆ ನಡೆಸಿದ್ದ ಕೆಲ ನೌಕರರನ್ನ ಅಮಾನತುಗೊಳಿಸಲಾಗಿತ್ತು. ಅಮಾನತು ಹಿಂಪಡೆಯುವಂತೆ ಸಾಕಷ್ಟು ಮನವಿ ಬಂದಿತ್ತು. ಆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಸಚಿವ ಶ್ರೀರಾಮುಲು ಸಭೆ ನಡೆಸಿದ್ದರು. ಸಭೆಯಲ್ಲಿ ಎಷ್ಟು ನೌಕರರು ಅಮಾನತು ಆಗಿದ್ದಾರೆ, ಎಷ್ಟು ನೌಕರರ ವಜಾ ಆಗಿದೆ ಹಾಗೂ ಎಷ್ಟು ನೌಕರರ ಮೇಲೆ ಮೇಲೆ ಎಫ್ಐಆರ್ ದಾಖಲಾಗಿದೆ ಎನ್ನುವ ಮಾಹಿತಿ ಪಡೆದಿದ್ದಾರೆ. ಬಹುತೇಕ ಅಮಾನತು ಹಾಗೂ ವಜಾಗೊಂಡ ನೌಕರರನ್ನ ವಾಪಸ್ ಕೆಲಸಕ್ಕೆ ಸೇರಿಸಿಕೊಳ್ಳವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ. ನಾಳೆ ಸಂಜೆಯೊಳಗೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಾರಿಗೆ ನೌಕಕರ ವಜಾ ಆದೇಶ ಹಿಂಪಡೆಯಲು ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ
ಇದನ್ನೂ ಓದಿ: ಓಮ್ನಿ ಆ್ಯಂಬುಲೆನ್ಸ್ ಬಳಕೆ ರೋಗಿಗಳಿಗೆ ಸುರಕ್ಷಿತವಲ್ಲ; ತನ್ನದೇ ಆದೇಶ ಉಲ್ಲಂಘಿಸಿದ ಸಾರಿಗೆ ಇಲಾಖೆ
Published On - 4:11 pm, Mon, 13 September 21